ತಂದೆ ಸಪೋರ್ಟ್ ಮಾಡಲಿಲ್ಲ; ತಾಯಿ ಸಹಾಯ ನೆನೆದು ಕಣ್ಣೀರಿಟ್ಟ 'ರಾಮಚಾರಿ' ಚಾರು
ಪ್ರತಿ ಕ್ಷಣವೂ ನನ್ನ ತಾಯಿ ನನಗೆ ಸಪೋರ್ಟ್ ಮಾಡಿದ್ದಾರೆ. ನನಗೆ ತಂಗಿಗೋಸ್ಕರ ಏನು ಬೇಕಿದ್ದರೂ ಮಾಡುತ್ತಾರೆ ಎಂದು ತಾಯಿ ಬಗ್ಗೆ ಮಾತನಾಡಿದ ಮೌನ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡೆ. ಪ್ರಮುಖ ಪಾತ್ರಧಾರಿಯಾಗಿ ಮಿಂಚುತ್ತಿರುವ ಚಾರುಲತಾ ಉರ್ಫಿ ಮೌನ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ತಾಯಿ ಸಪೋರ್ಟ್ ಬಗ್ಗೆ ಮಾತನಾಡಿದ್ದಾರೆ.
'ನನ್ನ ತಾಯಿ ಸೂಪರ್ ಸ್ಟಾರ್ ಏಕೆಂದರೆ ಜೀವನದಲ್ಲಿ ಈ ಸ್ಥಾನದಲ್ಲಿ ನಿಂತಿರುವುದಕ್ಕೆ ನನ್ನ ತಾಯಿನೇ ಮುಖ್ಯ ಕಾರಣ. ಮೊದಲು ನಾನು ಹೇಗಿದ್ದೆ ಅಂದ್ರೆ stubborn kid ಹೀಗೆ ಇರಬೇಕು ಇದೇ ಆಗಬೇಕು ನಾನು ಹೇಳಿದ್ದೇ ಮಾಡಬೇಕು ಇದೇ ಬೇಕು ಅಂದ್ರೆ ಇದೇ ಬೇಕು. ಅವಾಗ ಅಮ್ಮನಿಗೆ ಬೈಯುತ್ತಿದ್ದೆ, ಅಮ್ಮ ನೀನು ಇದನ್ನು ತೆಗೆದುಕೊಟ್ಟಿಲ್ಲ ನನಗೆ ಇಷ್ಟವಿಲ್ಲ ನೀನು ಎನ್ನುತ್ತಿದ್ದೆ. ಈವಾಗ ನಾನು ಒಬ್ಬಳೇ ಇರುವುದು ಆ ಫೀಲ್ ಗೊತ್ತಾಗುತ್ತಿದೆ. ಅವಾಗ ಎಷ್ಟು ಬೈಯುತ್ತಿದ್ದೆ ಅಂದ್ರೆ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದೆ. ಈಗ ನಾನು ಅವರಿಗೆ ಧನ್ಯವಾದಗಳನ್ನು ಹೇಳಬೇಕು ಏಕೆಂದರೆ ಯಾವಾಗಲೂ ಸಪೋರ್ಟ್ ಮಾಡುತ್ತಾರೆ.' ಎಂದು ತಾಯಿ ಬಗ್ಗೆ ಚಾರು ಮಾತನಾಡಿದ್ದಾರೆ.
'ನನ್ನ ತಾಯಿ ಹೆಸರು ಕುಸುಮಾ ಎಂದು. ಐ ಲವ್ ಯು ಅಮ್ಮ ನೀನು ಇಲ್ಲದೆ ಹೋದರೆ ಮುಂದೆ ಒಂದು ಹೆಜ್ಜೆ ಇಡಲು ಕಷ್ಟವಾಗುತ್ತದೆ. ಯಾವುದೇ ಕೆಲಸ ಮಾಡುವ ಮೊದಲು ಅಮ್ಮನಿಗೆ ತಿಳಿಸಿ ಮುಂದುವರೆಯುವೆ. ಇಲ್ಲಿವರೆಗೂ ನಿನಗೆ ಬೇಸರ ಮಾಡಿದ್ದರೆ ನನ್ನನ್ನು ಕ್ಷಮಿಸು ಅಮ್ಮ. ರಿಯಲ್ ಮೌನ್ ತುಂಬಾನೇ ರಗಡ್ ವ್ಯಕ್ತಿ ಆದರೆ ಭಾವನೆನೇ ಇಲ್ಲ ಅಂತಲ್ಲ ಸಣ್ಣ ಪುಟ್ಟ ವಿಚಾರಗ ಬಗ್ಗೆ ಅದರಲೂ ಫ್ಯಾಮಿಲಿ ವಿಚಾರದಲ್ಲಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವೆ ಕೋಪ ಒಂದೇ ಜಾಸ್ತಿ ನನಗೆ. ಚಾರು ಕ್ಯಾರೆಕ್ಟರ್ ರೀತಿ ನಾನು ಇಲ್ಲ.' ಎಂದು ಚಾರು ಹೇಳಿದ್ದಾರೆ.
'ಹೆಣ್ಣು ಮಕ್ಕಳು 6 ಗಂಟೆ ನಂತರ ತಿರುಗಾಡಬಾರದು ಆದರೆ ಮೌಲ್ಯ ಏನ್ ಏನೋ ಕನಸು ಕಾಣುತ್ತಾಳೆ. ಅವಳಿಗೆ ನಾನು ತುಂಬಾ ಸಪೋರ್ಟ್ ಮಾಡಿರುವೆ ಅದರಿಂದ ಒಳ್ಳೆಯದಾದರೆ ಅಪ್ಪನಿಗೆ ಹೇಳುತ್ತಿದ್ದೆ ನಿಮ್ಮ ಮಗಳು ಒಳ್ಳೆಯದು ಮಾಡುತ್ತಿದ್ದಾಳೆ ಎಂದು. ಹಾಳಾಗಬೇಡ ತಂದೆಗೆ ಒಳ್ಳೆಯ ಹೆಸರು ತೆಗೆದುಕೊಂಡು ಬಾ ಎನ್ನುತ್ತಿದ್ದೆ. ನಾನು ಸಾಮಾನ್ಯ ಜನರು ಅದರಲೂ ಚಾರು ನಮಗೆ ಬಂದಿರುವ ಗಿಫ್ಟ್ ಏಕೆಂದರೆ ದೇವರು ಇಂಥ ಒಳ್ಳೆಯ ಮಗಳು ಹೊಟ್ಟೆಯಲ್ಲಿ ಹುಟ್ಟಿರುವ ಈಕೆ ಮುತ್ತು ರತ್ನವೇ. ಇದರಿಂದ ಹೆಚ್ಚಾಗಿ ಏನು ಹೇಳಲು ಗೊತ್ತಿಲ್ಲ.' ಚಾರು ತಾಯಿ ಹೇಳಿದ್ದಾರೆ.
'ನನ್ನ ತಾಯಿ ಯಾವತ್ತೂ ಇಷ್ಟೊಂದು ಮಾತನಾಡಿಲ್ಲ ಅವರಿಗೆ ಎಲ್ಲಿಂದ ಧೈರ್ಯ ಬರುತ್ತೆ ಎಂದು ಗೊತ್ತಿಲ್ಲ ಏಕೆಂದರೆ ನನಗೂ ಅಷ್ಟು ಧೈರ್ಯ ಇಲ್ಲ. ನನ್ನ ತಂದೆ ಆರ್ಮಿ ಆಫೀಸರ್ ತುಂಬಾನೇ ಸ್ಟ್ರಿಟ್ ಆಗಿದ್ದು ನಾನು ಮಾಡಲಿಂಗ್ ಮಾಡುತ್ತಿದ್ದೆ ಅನೇಕ ಫೋಟೋಶೂಟ್‌ಗಳಲ್ಲಿ ಭಾಗಿಯಾಗುತ್ತಿದ್ದೆ ಯಾವುದಕ್ಕೂ ಅವರು ಸಪೋರ್ಟ್ ಮಾಡುತ್ತಿರಲಿಲ್ಲ. ನಾನು ಏನೇ ಶೇರ್ ಮಾಡಿದ್ದರೂ ಹಾಗೆ ಮಾಡಬೇಕು ಇದು ಮಾಡಬೇಡ ಎನ್ನುತ್ತಿದ್ದರು ನಾನು ಏನೂ ಹಂಚಿಕೊಳ್ಳುವಂತಿರಲಿಲ್ಲ ಅವರಿಗೆ ಸ್ವಲ್ಪ insecurity ಇರುತ್ತಿತ್ತು. ಎಲ್ಲೇ ಹೋದರು ನನ್ನ ತಾಯಿ ನನ್ನ ಜೊತೆಗೆ ಬರುತ್ತಿದ್ದರು. ತಾಯಿ ಅನ್ನೋದೇ ಒಂದು ಬ್ಯೂಟಿಫುಲ್' ಎಂದಿದ್ದಾರೆ ಚಾರು.
Ramachari Serial : ಹೀರೋಯಿನ್ ಮೌನಾ ಗುಡ್ಡೆಮನೆ, ರಿಯಲ್ ಲೈಫಲ್ಲೂ ಧಿಮಾಕಿನ ಹೆಣ್ಣಾ?
'ನನ್ನ ತಂದೆ ಯಾವತ್ತೂ ಸೀರಿಯಲ್ ನೋಡಿದವರಲ್ಲ ಅದರೆ ರಾಮಚಾರಿನ ಮಿಸ್ ಮಾಡದೇ ನೋಡುತ್ತಾರೆ. ನನ್ನ ತಂದೆ ಅಮ್ಮ ಯಾವ ತರ ಹತ್ತಿರ ಇದ್ದಾರೆ ಅಂದ್ರೆ ಅವರನ್ನು ಬಿಟ್ಟು ಇರುವುದಕ್ಕೆ ಕಷ್ಟ ಏಕೆಂದರೆ ಚಿಕ್ಕವರಿಂದ ಒಟ್ಟಿಗೆ ಇದ್ದೀವಿ ಏನು ಮಾಡುವುದು ಇದು ನಮ್ಮ ಜೀವನ. ಪ್ರತಿ ಕ್ಷಣನೂ ಯಾಕೆ ಅಮ್ಮ ಕರೆ ಮಾಡಿಲ್ಲ ಅನ್ನೋದು ಯೋಚನೆ ಮಾಡುತ್ತಿರುವೆ. ಪ್ರತಿ ರಾತ್ರಿ ಅಮ್ಮ ಕರೆ ಮಾಡುತ್ತಾರೆಂದು ಕಾಯುವೆ. ದೇವರ ಬಳಿ ನಾನು ಮೊದಲು ಕೇಳಿಕೊಳ್ಳುವುದು ತಂದೆ-ತಾಯಿ ಮತ್ತು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು. ಅಷ್ಟೇ ಸಾಕು ನನಗೆ' ಎಂದು ಚಾರು ಮಾತನಾಡಿದ್ದಾರೆ.