ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿಯಲ್ಲಿ, ರಾಮಾಚಾರಿ ಮತ್ತು ಚಾರು ಜೋಡಿ ವೀಕ್ಷಕರಿಗೆ ಅಚ್ಚುಮೆಚ್ಚು. ಆದರೆ, ರಾಮಾಚಾರಿ ಚಾರು ಮೇಲಿನ ಪ್ರೀತಿಯನ್ನು ತೋರಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದ. ಇತ್ತೀಚೆಗೆ, ರಾಮಾಚಾರಿಯ ವರ್ತನೆ ಬದಲಾಗಿದ್ದು, ಪ್ರೇಮಾಚಾರಿಯಾಗಿ ಬದಲಾಗಿದ್ದಾನೆ. ಈ ಬದಲಾವಣೆಯಿಂದ ವೀಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುವ ರಾಮಾಚಾರಿ ಧಾರಾವಾಹಿ ವೀಕ್ಷಕರ ಫೇವರಿಟ್ ಸೀರಿಯಲ್ ಗಳಲ್ಲಿ ಒಂದು, ಅದರಲ್ಲೂ ರಾಮಾಚಾರಿ ಹಾಗೂ ಚಾರು ಜೋಡಿ ಅಂದ್ರೆನೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ. ಇವರಿಬ್ಬರ ಮುದ್ದಾದ ಕಿತ್ತಾಡ, ಪ್ರೀತಿ, ಒಬ್ಬರಿಗೊಬ್ಬರು ಕೊಡುವ ಗೌರವ, ಕಷ್ಟ ಬಂದಾಗ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲುವ ರೀತಿ ಎಲ್ಲವೂ ವೀಕ್ಷಕರಿಗೆ ಸಖತ್ ಇಷ್ಟ. ಎಲ್ಲಾ ವಿಷ್ಯದಲ್ಲೂ ಈ ಜೋಡಿ ಮೇಡ್ ಫಾರ್ ಈಚ್ ಅದರ್ ಅನ್ನೋ ಹಾಗೆ ಇದೆ. ಆದರೆ ರೊಮ್ಯಾನ್ಸ್ ವಿಷ್ಯಕ್ಕೆ ಬಂದ್ರೆ ಮಾತ್ರ ರಾಮಾಚಾರಿ (Ramachari) ಚಾರುಕ್ಕಿಂತ ಹತ್ತು ಹೆಜ್ಜೆ ಹಿಂದೇನೆ. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಮಾಚಾರಿಯ ವರಸೇನೆ ಬೇರೆಯಾಗಿದೆ. ರಾಮಾಚಾರಿ ಪ್ರೇಮಾಚಾರಿಯಾಗಿ ಬದಲಾಗಿದ್ದಾನೆ. 

'ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ'; ಫೋಟೋ ಸಮೇತ ಸ್ಪಷ್ಟನೆ ಕೊಟ್ಟ ರಾಮಾಚಾರಿ ನಟಿ ಐಶ್ವರ್ಯಾ ಸಾಲೀಮಠ

ರಾಮಾಚಾರಿ ಮತ್ತು ಚಾರು (Ramachari and Charu) ಮದುವೆಯಾದ ನಂತರದಿಂದ ಇಲ್ಲಿವರೆಗೂ, ರಾಮಾಚಾರಿಗೆ ಚಾರು ಮೇಲೆ ಪ್ರೀತಿ ಇದ್ದರೂ ಅದನ್ನೂ ತೋರಿಸಿಕೊಳ್ಳುವಲ್ಲಿ ಕಂಜ್ಯೂಸ್ ಮಾಡುತ್ತಿದ್ದ. ಯಾವಾಗಲೂ ಚಾರು ಗಂಡನನ್ನು ಅಪ್ಪಿ ಹಿಡಿಯೋದು, ಫಸ್ಟ್ ನೈಟ್ ಬಗ್ಗೆ ಮಾತನಾಡೋದು, ಮುತ್ತಿಗಾಗಿ, ಒಂದು ಅಪ್ಪುಗೆಗಾಗಿ ಕಾಡಿಸೋದನ್ನು ಮಾಡುತ್ತಲೇ ಇದ್ದಳು. ಆದರೆ ರಾಮಾಚಾರಿ ಮಾತ್ರ, ಅದೆಲ್ಲಾ ದೊಡ್ಡ ತಪ್ಪು ಎನ್ನುವಂತೆ, ನಿಮಗೆ ಇದೇ ಧ್ಯಾನ ಇರೋದು, ಮಾಡೋದಕ್ಕೆ ಬೇರೆ ಕೆಲಸಾನೆ ಇಲ್ವಾ ಎಂದು ಬೈಯುತ್ತಾ, ಚಾರುನಿಂದ ದೂರ ಓಡುತ್ತಿದ್ದನು. ಆದರೆ ಇದೀಗ ದಿಢೀರ್ ಆಗಿ ರಾಮಾಚಾರಿ (Ramachari becomes romantic) ವರ್ತನೆ ಬದಲಾಗಿದೆ. ಸ್ನಾನಕ್ಕೆ ಹೊರಟು ನಿಂತ ತನ್ನ ಬೆನ್ನು ಉಜ್ಜೋದಕ್ಕೆ ಚಾರು ಬರಬೇಕು ಅನ್ನೋದಕ್ಕೆ ಕಾಯ್ತಿದ್ದಾನೆ ರಾಮಾಚಾರಿ, ಅಮ್ಮ ಬೆನ್ನು ಉಜ್ಜೋದಕ್ಕೆ ಬರ್ತೀನಿ ಅಂದ್ರೆ, ಇಲ್ಲ ನಾನು ಸ್ನಾನ ಆಮೇಲೆ ಮಾಡೋದು ಅಂತಾನೆ. ಚಾರುಗೆ ರಾಮಾಚಾರಿಗೆ ಆಸೆ ಏನು ಅಂತ ಅರ್ಥ ಆದ್ರೂ, ಅರ್ಥವಾಗದಂತೆ ನಟಿಸುತ್ತ ಅತ್ತೆಯ ಮುಂದೆ ಗಂಡನನ್ನು ರೇಗಿಸುತ್ತಾಳೆ. ಅಷ್ಟೇ ಅಲ್ಲ ರಾಮಾಚಾರಿ ತಾನಾಗಿಯೇ ಬಂದು ಮುತ್ತು ಕೇಳುತ್ತಿದ್ದಾರೆ. ಆ ದಿನದ ಲೆಕ್ಕ ಚುಕ್ತಾ ಮಾಡುವಂತೆ ಚಾರು ಹಿಂದೆ ಬಿದ್ದಿದ್ದಾರೆ ರಾಮಾಚಾರಿ. ಚಾರಿಗೆ ಬೆಳಗ್ಗೆ ಒಂದು ಸಂಜೆ ಒಂದು ಮುತ್ತು ಬೇಕಂತೆ, ಹಾಗಿದ್ರೆ ಮಾತ್ರ ದಿನ ಚೆನ್ನಾಗಿ ಆಗೋದಕ್ಕೆ ಸಾಧ್ಯ ಅಂತೆ. ಅಷ್ಟೇ ಅಲ್ಲ ಚಾರು ಎಷ್ಟೆಲ್ಲಾ ಮುತ್ತು ಕೊಡೋದಕ್ಕೆ ಬಾಕಿ ಇದೆ ಅಂತ ಲೆಕ್ಕಾನೂ ಬರೆದು ಇಡೋವಷ್ಟು ಬದಲಾಗಿದ್ದಾನೆ ರಾಮಾಚಾರಿ, ಈಗ ಆ ಮುತ್ತನ್ನು ಬಡ್ಡೀ ಸಮೇತ ಕೊಡಬೇಕು ಎಂದು ಚಾರುನ ಕಾಡುತ್ತಿದ್ದಾನೆ. ಆದರೆ ಚಾರು ಮಾತ್ರ ರಾಮಾಚಾರಿಯನ್ನು ಗೋಳು ಹೊಯ್ಯುತ್ತಾ, ಮೊದಲು ಹೋಮ ಮುಗಿಸಿಕೊಂಡು ಬಾ, ಆಮೇಲೆ ಬಡ್ಡಿ ಸಮೇತ ಕೊಡೋದಾಗಿ ತಿಳಿಸಿದ್ದಾಳೆ. ರಾಮಾಚಾರಿಯಲ್ಲಿನ ಈ ಬದಲಾವಣೆ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಇದು ನಿಜಕ್ಕೂ ರಾಮಚಾರೀನ ಅಂತ ಕೇಳ್ತಿದ್ದಾರೆ. 

ನನ್ನ ಧರ್ಮವೇ ಬೇರೆ, ನಾನು ಪುರೋಹಿತ ಅಂತ ನಂಬಿದ್ರೆ ಅದೇ ಗೆಲುವು: ರಾಮಾಚಾರಿ ನಟ ರಿತ್ವಿಕ್‌ ಕೃಪಾಕರ್

ವೀಕ್ಷಕರು ಪ್ರೇಮಾಚಾರಿಯಾದ ರಾಮಾಚಾರಿ ಬಗ್ಗೆ ಏನೇನು ಹೇಳಿದ್ದಾರೆ ನೋಡೋಣ… 

ಎಂಟನೇ ಅದ್ಭುತ ರಾಮಾಚಾರಿ ನ ಈ ರೀತಿ ನೋಡಕ್ಕೆ ವಾವ್. ಇದಪ್ಪ ಚೆನ್ನಾಗಿರೋದು. ಡೈರೆಕ್ಟರ್ ನಮ್ಮೆಲ್ಲ ವೀಕ್ಷಕರ ಮನವಿನ ಬಹಳ ಸೀರಿಯಸ್ ತಗೊಂಡು ರೊಚ್ಚಿಗೆದ್ದು, ರಾಮಾಚಾರಿ ಪಾತ್ರನ ಹೈಲೈಟ್ ಮಾಡಿದ್ದಾರೆ. ತುಂಬಾ ಒಳ್ಳೆ ಕೆಲಸ. ಈವಾಗ ರಾಮಾಚಾರಿಗೆ ಒಂದು ಕಳೆ ಬಂತು, ಇನ್ನು ರಾಮಾಚಾರಿ ನೋಡೋದನ್ನು ಮಿಸ್ ಮಾಡಲ್ಲ, ಅಬ್ಬಬ್ಬಾ ಎಂಥ ಜೋಡಿ ನೋಡಕ್ಕೆ ಅಂತರ ಖುಷಿ, ನಮ್ಮ ಚಾರು ಚಾರಿ, ಈ ರೇಂಜ್ ಗೆ ರಾಮಾಚಾರಿ ನ change ಮಾಡಿದರೆ.. ರಾಮಾಚಾರಿ ಅಲ್ಲ ಪ್ರೇಮಚಾರಿ ಆಗಿದ್ದಾನೆ. ರಾಮಾಚಾರಿ & ಚಾರು ಸೂಪರ್ ಜೋಡಿ ಎಂದಿದ್ದಾರೆ. ಇನ್ನೂ ಒಬ್ಬರು ರಾಮಚಾರಿ ಬರಿ ಚಾರು ಜೊತೆಗೆ ರೋಮ್ಯಾನ್ಸ್ ಮಾಡುವುದಕ್ಕೆ ಮಾತ್ರ ಬೇಕು ಆದ್ರೆ ಮನೆ ಸಮಸ್ಯೆ ಬಗ್ಗೆ ಹರಿಸುವುದಕ್ಕೆ ಚಾರು ಮಾತ್ರ ಎಂದಿದ್ದಾರೆ.

View post on Instagram