ಬಿಗ್‌ಬಾಸ್ 14ರ ವೀಕೆಂಡ್ ಎಪಿಸೋಡ್‌ನಲ್ಲಿ ಪರ್ಸನಲ್‌ ಲೈಫ್ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಶೇರ್ ಮಾಡಿದ್ದಾರೆ ರಾಖಿ ಸಾವಂತ್. ಬಿಗ್‌ಬಾಸ್ ಮನೆಗೆ ಗೆಸ್ಟ್ ಕಂಟೆಸ್ಟೆಂಟ್ ಆಗಿ ಬಂದಾಗಿನಿಂದಲೂ ಸುದ್ದಿಯಲ್ಲಿರೋ ಈಕೆ ಈಗೇನು ಹೇಳಿದ್ದಾರೆ ನೋಡಿ.

ನೀವು ಸುದ್ದಿಯಾಗೋದು ನಿಮ್ಮ ಮದುವೆಯ ವಿಚಾರದಲ್ಲೇ , ಯಾಕೆ ಹಾಗೆ ಎಂದು ರಾಖಿಯನ್ನು ಕೇಳಿದಾಗ ಆಕೆ ನೀಡಿದ ಉತ್ತರ ಹೀಗಿತ್ತು. ನಾನು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದ ಕಾರಣ ಮದುವೆಯಾದೆ ಎಂಬ ಮಾತನ್ನು ರಾಖಿ ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ.

ನನ್ನ ಲೈಫಲ್ಲಿ ಗಂಡಸರಿಲ್ಲ, ಅಭಿನವ್ ಶುಕ್ಲಾ ವೀರ್ಯ ಬೇಕು ಎಂದ ರಾಖಿ ಸಾವಂತ್

ಮದುವೆಯಾಗಿದ್ದರೂ, ಬಿಗ್‌ಬಾಸ್ ಮನೆಯಲ್ಲಿ ಅಭಿನವ್ ಶುಕ್ಲಾ ಕುರಿತ ನಟಿ ಫೀಲಿಂಗ್ಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ, ನಾನು ಮದುವೆಯಾದವಳು. ನಾನು ನನ್ನ ಪತಿಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಪತಿ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಮದುವೆಯಾದಗಿನಿಂದ ನಾನೂ ನನ್ನ ಪತಿಯನ್ನು ನೋಡಿಲ್ಲ ಎಂದಿದ್ದಾರೆ.

ನಾನು ತರಾತುರಿಯಲ್ಲಿ ಮದುವೆಯಾದೆ. ಅರ್ಜೆಂಟ್ ಆಗಿ ಶಾಪಿಂಗ್ ಮಾಡುವಂತೆ, ಬ್ರೇಕ್‌ಅಪ್ ಆಗುವಂತೆ ನನ್ನ ಮದುವೆಯಾಯ್ತು. ನಾನು ಮದುವೆಯಾಗಿರದಿದ್ದರೆ ಪ್ರಭಾವಿ ವ್ಯಕ್ತಿಯೊಬ್ಬರು ನನ್ನನ್ನು ಕಿಡ್ನಾಪ್ ಮಾಡುತ್ತಿದ್ದರು ಎಂದಿದ್ದಾರೆ. ವ್ಯಕ್ತಿಯ ಹೆಸರು ಹೇಳಲು ನಿರಾಕರಿಸಿದ ರಾಖಿ, ಆಕೆಯನ್ನು ಆತ ಬೆದರಿಸಿದ್ದಾಗಿಯೂ, ಆಕೆ ಯಾವುದೇ ಕೇಸ್ ದಾಖಲಿಸಿಲ್ಲ ಎಂದೂ ಹೇಳಿದ್ದಾರೆ.