Bigg Boss Ott; ಚಿಕ್ಕವನಿದ್ದಾಗಲೇ ತಾಯಿ ಕಳೆದುಕೊಂಡೆ, ತಂದೆ ಪ್ರೀತಿ ಗುರೂಜಿ ತುಂಬಿದ್ದಾರೆ, ರೂಪೇಶ್ ಭಾವುಕ ಮಾತು

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. 

bigg boss ott Kannada Roopesh emotional while speaks about his mother sgk

ಬಿಗ್ ಬಾಸ್ ಒಟಿಟಿ ಕನ್ನಡ ಶೋ ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮೂರು ವಾರಗಳನ್ನು ಬಿಗ್ ಬಾಸ್ ಒಟಿಟಿ ಯಶಸ್ವಿಯಾಗಿ ಪೂರೈಸಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆ ರಂಗೇರುತ್ತಿದೆ. ಬಿಗ್ ಮನೆಯಲ್ಲಿ ಒಬ್ಬೊರೇ ಕಮ್ಮಿಯಾಗುತ್ತಿದ್ದರೂ ಸ್ಪರ್ಧಿಗಳ ನಡುವೆ ಪೈಪೋಟಿ, ಕಿತ್ತಾಟ, ಜಗಳ, ಅಳು ಜಾಸ್ತಿಯಾಗುತ್ತಿದೆ. ಅಂದಹಾಗೆ 3ನೇ ವಾರ ಬಿಗ್ ಬಾಸ್ ಮನೆಯಿಂದ ಉದಯ್ ಎಲಿಮಿನೇಟ್ ಆಗಿದ್ದಾರೆ. 16 ಜನವಿದ್ದ ಮನೆಯಲ್ಲಿ ಒಬ್ಬೊಬ್ಬರೇ ಖಾಲಿಯಾಗುತ್ತಿದ್ದಾರೆ. ಮನೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಕಷ್ಟ, ಸೋಲಿನ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಬಿಗ್ ಬಾಸ್ ಇದೀಗ ಮತ್ತೊಂದು ಟಾಸ್ಕ್ ನೀಡಿದೆ. ಇಷ್ಟ-ಕಷ್ಟ ಹೆಸರಿನಲ್ಲಿ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿಸ್ಪರ್ಧಿಗಳು ತಮ್ಮ ಇಷ್ಟ ಕಷ್ಟಗಳ ಬಗ್ಗೆ ಹೇಳಿಕೊಳ್ಳಬೇಕು. ಈ ವೇಳೆ ಗುರೂಜಿ ಮತ್ತು ರೂಪೇಶ್ ಇಬ್ಬರೂ ಭಾವುಕರಾಗಿದ್ದಾರೆ. 

ರೂಪೇಶ್ ಶೆಟ್ಟಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. 13ನೇ ವಯಸ್ಸಿನಲ್ಲಿ ತಾಯಿನ್ನು ಕಳೆದುಕೊಂಡ ರೂಪೇಶ್ ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿದ್ದೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಂದೆಯ ಸ್ಥಾನವನ್ನು ಆರ್ಯವರ್ಧನ್ ಗುರೂಜಿ ತುಂಬಿದ್ದಾರೆ ಎಂದು ರೂಪೇಶ್ ಭಾವುಕರಾಗಿದ್ದಾರೆ. 
     
ಬೊಂಬೆಯನ್ನು ಹಿಡಿದು ಆರ್ಯವರ್ಧನ್ ಗುರೂಜಿ ರೂಪೇಶ್‌ಗೆ ನೀಡಿದರು. ಮಗ ಎಂದುಕೊಂಡು ಇದನ್ನು (ಬೊಂಬೆ) ರೂಪೇಶ್ ಗೆ ನೀಡುತ್ತಿದ್ದೀನಿ ಎಂದು ಗುರೂಜಿ ಹೇಳಿದರು. ಬಳಿಕ ರೂಪೇಶ್ ಗುರೂಜಿ ಕಾಲು ಮುಟ್ಟಿ ನಮಸ್ಕರಿಸಿ ಬೊಂಬೆ ಸ್ವೀಕರಿಸಿದರು. ಬಳಿಕ ತನ್ನ ನೋವಿನ ಕಥೆ ಬಿಚ್ಚಿಟ್ಟರು. '13 ವರ್ಷ ಇರ್ತಾ ತಾಯಿ ತೀರಿ ಕೊಂಡ್ರು. ತಂದೆ ಪ್ರೀತಿ ತುಂಬಾ ಬೇಕಿತ್ತು. ತಂದೆ ಸ್ಥಾನವನ್ನು ಗುರೂಜಿ ತುಂಬಿಸಿದ್ದಾರೆ. ಅವರು ಕಂದ, ಮಗ ಎಂದು ಕರೆಯುವಾಗ ಅಪ್ಪನ ನೆನಪು ಬರ್ತಿತ್ತು' ಎಂದು ತಬ್ಬಿ ಭಾವುಕರಾಗಿದ್ದಾರೆ.

Bigg Boss Ott 3ನೇ ವಾರದಿಂದ ಉದಯ್ ಹೊರಗೆ; ಕಾರಣ ಏನು?

ಬಿಗ್ ಬಾಸ್ ಮನೆಯಿಂದ ಹೊರಹೋದ ಸ್ಪರ್ಧಿಗಳು

ಬಿಗ್ ಬಾಸ್ ಮನೆಗೆ 16 ಸ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈಗಾಗಲೇ ಮೂರು ವಾರ ಕಳೆದಿದ್ದು 3 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಮಾಡೆಲ್ ಕಿರಣ್, ಎರಡನೇ ಸ್ಪರ್ಧಿ ಸ್ಫೂರ್ತಿ ಗೌಡ ಮೂರನೇ ಸ್ಪರ್ಧಿ ಉದಯ್. ಇನ್ನು ನಟ ಅರ್ಜುನ್ ಮತ್ತು ಲೋಕೇಶ್ ಏಟು ಮಾಡಿಕೊಂಡು ಮನೆಯಿಂದ ಹೊರಹೋಗಿದ್ದಾರೆ.  

BB ಓಟಿಟಿ: Character assassination ಮಾಡಿದ ಉದಯ್‌ ವಿರುದ್ಧ ತಿರುಗಿ ಬಿದ್ದ ಸಾನ್ಯ- ನಂದು-ರೂಪೇಶ್

ಬಿಗ್ ಮನೆಗೆ ಎಂಟ್ರಿ ಕೊಟ್ಟ ಒಟ್ಟು ಸ್ಪರ್ಧಿಗಳು 

ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್. ಸದ್ಯ ಮನೆಯಲ್ಲಿ 11 ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. 

Latest Videos
Follow Us:
Download App:
  • android
  • ios