ರಜತ್ ಕಿಶನ್ ಬಿಗ್‌ಬಾಸ್ ೧೧ರ ಗೇಮ್ ಚೇಂಜರ್. ರಿಯಾಲಿಟಿ ಶೋಗಳಲ್ಲಿ ಪಂಚ್‌ಗಳಿಂದ ಮನರಂಜಿಸುತ್ತಿದ್ದ ರಜತ್, ತ್ರಿವಿಕ್ರಮ್ ಮತ್ತು ಮಂಜು ಬಿಗ್‌ಬಾಸ್‌ನಲ್ಲಿ '೫'ಕ್ಕಾಗಿ ಬೇಡಿಕೊಂಡಿದ್ದರ ಬಗ್ಗೆ ಹೇಳಿದ್ದಾರೆ. ೫೦ ದಿನಗಳ ನಂತರ ಬಿಗ್‌ಬಾಸ್‌ಗೆ ಹೋದ ರಜತ್, ಯಾವುದೇ ಪ್ಲಾನಿಂಗ್ ವರ್ಕ್ ಆಗುವುದಿಲ್ಲ ಎಂದಿದ್ದಾರೆ. ಜಗದೀಶ್ ಹೊರಹೋದ ನಂತರ ಬಿಗ್‌ಬಾಸ್ ನೋಡುವುದನ್ನೇ ಬಿಟ್ಟಿದ್ದೆ ಎಂದಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಗೇಮ್ ಚೇಂಜರ್‌ ಎಂದು ಕಿಚ್ಚ ಸುದೀಪ್‌ರಿಂದ ಕರೆಸಿಕೊಂಡಿರುವುದು ರಜತ್ ಕಿಶನ್. ಈಗಾಗಲ ಎರಡು ಮೂರು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿರುವ ಕಿಶನ್ ಸಖತ್ ಪಂಚ್‌ಗಳನ್ನು ನೀಡುತ್ತಾ ಜನರನ್ನು ಮನೋರಂಜಿಸಿದ್ದಾರೆ. ಸಾಮಾನ್ಯವಾಗಿ ಕೆಲವೊಬ್ಬರಿಗೆ ಹೊರಗಡೆ ಒಂದೆರಡು ಅಭ್ಯಾಸಗಳು ಇರುತ್ತದೆ ಹಾಗೆಯೇ ರಜತ್, ತ್ರಿವಿಕ್ರಮ್ ಮತ್ತು ಮಂಜು ಕೂಡ ಗ್ರೇ ಏರಿಯಾ ಹುಡುಕಿಕೊಂಡಿದ್ದರು.

'ಎರಡು ವಾರ ಅಲ್ಲದೆ ಬಿಗ್ ಬಾಸ್ ಪೂರ್ತಿ ಮುಂದುವರೆದಿದ್ದರೆ ಜನರು ಸತ್ತು ಹೋಗುತ್ತಿದ್ದರು ಆದರು ಅಷ್ಟು ಅರಿಶಿಣ ಅನ್ನ ತಿನ್ನುತ್ತಾರೆ. ನಾನು ಹೇಳುವುದು ಏನು ಅಂದ್ರೆ ರಿಯಾಲಿಟಿ ಶೋ ಅನ್ನೋದು ಬ್ಯೂಟಿಫುಲ್ ಕಾನ್ಸೆಪ್ಟ್‌ ಯಾಕೆ ಈ ಮಾತು ಹೇಳುತ್ತಿದ್ದೀನಿ ಅಂದ್ರೆ ನಾನು, ತ್ರಿವಿಕ್ರಮ್ ಮತ್ತು ಮಂಜು ಬಿಗ್ ಬಾಸ್‌ನ ಬಿಕ್ಷೆ ಬೇಡಿಕೊಂಡಿದ್ದೀವಿ ಸರ್ ದಯವಿಟ್ಟು ಕೊಡಿ ಅಂತ... ಹೊರಗಡೆ ಹೇಗ್ ಹೇಗೋ ಇರ್ತೀವಿ ಅದರೆ ಅಲ್ಲಿ ಕೊಡುತ್ತಿದ್ದಿದ್ದು ಬರೀ 5 ಅಷ್ಟೇ. ಇನ್ನೊಂದು ಕೊಡಿ ಇನ್ನೊಂದು ಕೊಡಿ ಅಂತ ಬೇಡಿಕೊಂಡಿದ್ದೀವಿ. ಇಷ್ಟು ವಾರ ಅಂತ ಬಿಗ್ ಬಾಸ್‌ನ ಪ್ಲ್ಯಾನ್ ಮಾಡಿರುತ್ತಾರೆ' ಎಂದು ಪ್ರೆಸ್‌ಮೀಟ್‌ನಲ್ಲಿ ರಜತ್ ಮಾತನಾಡಿದ್ದಾರೆ. ರಜತ್ ಇಲ್ಲಿ 5 ಎಂದು ಮಾತನಾಡಿರುವುದು ಸಿಗರೇಟ್‌ ಬಗ್ಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಹನುಮಂತುಗೆ 3 ಸಲ ಬಿಗ್ ಬಾಸ್ ಆಫರ್‌ ಬಂದಿತ್ತು, 5 ಕೋಟಿ ವೋಟ್‌ ಹಾಕಿರೋದು ಕಡಿಮೆನೇ: ತ್ರಿವಿಕ್ರಮ್

'ಬಿಗ್ ಬಾಸ್ ಮನೆಯಲ್ಲಿ ನಾನು ನೆಮ್ಮದಿಯಾಗಿದ್ದೆ ಅದರೆ ಹೊರ ಬಂದ ಮೇಲೆ ಹೆಂಡತಿ ಹಿಂಸೆ ಕೊಡಲು ಶುರು ಮಾಡಿದ್ದಾಳೆ. ನಾನು ಬರ್ತೀನಿ ಅಂತ ಹೇಳಿದ್ದಳು...ಹೊಡೆದಾಕಿಬಿಡುತ್ತೀನಿ ಸುಮ್ಮನೆ ಮನೆಯಲ್ಲಿ ಇರು ನಾನು ಆರಾಮ್ ಆಗಿ ಹೋಗಿ ಬರ್ತೀನಿ ಅಂತ ಹೇಳಿದೆ' ಎಂದಿದ್ದಾರೆ ರಜತ್. ರಜತ್ ಪತ್ನಿ ಅಕ್ಷಿತಾ ಕೂಡ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕೂಡ ಅಕ್ಷಿತಾ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾರೆ. 

ಮದುವೆ ಆಗಿರುವ ಬಿಗ್ ಬಾಸ್ ರಜತ್ ಕಿಶನ್‌ಗೆ ಗರ್ಲ್‌ಫ್ರೆಂಡ್ ಇದ್ದಾಳಾ? ಗೆಳೆಯ ವಿನಯ್ ಗೌಡ ಹೇಳಿಕೆ ವೈರಲ್

50 ದಿನಗಳು ಕಳೆದ ಮೇಲೆ ನಾನು ಬಿಗ್ ಬಾಸ್ ಮನೆಗೆ ಹೋಗಿರುವುದು ಅಲ್ಲಿ ಯಾವ ಪ್ಲಾನಿಂಗ್ ಕೂಡ ವರ್ಕ್ ಆಗುವುದಿಲ್ಲ. ನಿಜ ಹೇಳಬೇಕು ಅಂದ್ರೆ ನಾನು ಎಲ್ಲಾ ಎಪಿಸೋಡ್‌ಗಳನ್ನು ನೋಡಿಕೊಂಡು ಬಂದಿಲ್ಲ. ಜಗದೀಶ್ ಇರುವವರೆಗೂ ನಾನು ಬಿಗ್ ಬಾಸ್ ನೋಡಿದೆ ..ಜಗದೀಶ್ ಹೋದ ಮೇಲೆ ಬೋರ್ ಆಯ್ತು ಅಂತ ಸೈಲೆಂಟ್ ಆದೆ. ನಾನು ಹೋಗಬೇಕು ಅಂತ ಮಾತುಕತೆಗೆ ಬಂದಾಗ ಹಿಂದಿನ ಎರಡು ಎಪಿಸೋಡ್‌ಗಳನ್ನು ನೋಡಿದ್ದೆ. ಏನೇ ಪ್ಲಾನಿಂಗ್ ಮಾಡಿಕೊಂಡು ಹೋದರೂ ಅಲ್ಲಿದ ಮಾಸ್ಟರ್ ಮೈಂಡ್‌ಗಳ ಮುಂದೆ ಆಗಲ್ಲ. ಮೊದಲು ನಾವೇ ಹೀಗೆ ಮಾಡೋಣ ಹಾಗೆ ಮಾಡೋಣ ಅಂದುಕೊಂಡ್ವಿ ಆದರೆ ವರ್ಕ್‌ ಆಗುತ್ತಿರಲಿಲ್ಲ ಎಂದು ರಜತ್ ಹೇಳಿದ್ದಾರೆ. 

ಬಟ್ಟೆ ಮೇಲೆ ಚಿಟ್ಟೆ,ಕಾರ್ಟೂನ್, ಧಾರ್ಮಿಕ ಚಿಹ್ನೆ ಇರ್ಲೇ ಬಾರದು; ಬಿಗ್ ಬಾಸ್ ಸೀಕ್ರೆಟ್ ರಿವೀಲ್ ಮಾಡಿದ ರಜತ್ ಪತ್ನಿ