ಬಿಗ್ ಬಾಸ್ ಮನೆಗೆ ರಾಜಾರಾಣಿ ಚುಕ್ಕಿ ಹೋಗೋದು ಪಕ್ಕಾ?
ಬಿಗ್ ಬಾಸ್ ಹವಾ ಇಂದಿನಿಂದ ಶುರು | ಮನೆಯೊಳಗೆ ಹೋಗುವವರ್ಯಾರು ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ | ರಾಜಾರಾಣಿ ಖ್ಯಾತಿಯ ಚುಕ್ಕಿ ಬಿಗ್ ಬಾಸ್ ಮನೆಯೊಳಗೆ ಹೋಗೋದು ಪಕ್ಕಾ ಎನ್ನುತ್ತಿದೆ ಮೂಲಗಳು
ಬಿಗ್ ಬಾಸ್ 7 ಗೆ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವವರ್ಯಾರು ಎನ್ನುವ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಸಾಕಷ್ಟು ಹೆಸರುಗಳು ಕೇಳಿ ಬರುತ್ತಿವೆ. ಆದರೆ ಯಾವೂದೂ ಇನ್ನೂ ಪಕ್ಕಾ ಆಗಿಲ್ಲ.
ಬಿಗ್ ಬಾಸ್ 7 ಗೆ ಸರ್ವಸಂಗ ಪರಿತ್ಯಾಗಿ: ದೊಡ್ಮನೆ ಶೋನಲ್ಲಿ ಗುರುಲಿಂಗ ಸ್ವಾಮಿ ಭಾಗಿ !
ರಾಜಾ ರಾಣಿ ಧಾರಾವಾಹಿಯ ಚುಕ್ಕಿ ಅಲಿಯಾಸ್ ಚಂದನ ಅನಂತಕೃಷ್ಣ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ ರಾಜಾ ರಾಣಿ ಧಾರಾವಾಹಿಯನ್ನು ತರಾತುರಿಯಲ್ಲಿ ಮುಗಿಸಲಾಗಿದೆ. ಹಾಗಾಗು ಚುಕ್ಕಿ ಹೋಗುವುದು ಹೆಚ್ಚು ಕಡಿಮೆ ಪಕ್ಕಾ ಅಂತಾನೇ ಹೇಳಬಹುದಾಗಿದೆ.
ರಾಜಾ ರಾಣಿ ಧಾರಾವಾಹಿ ಕುತೂಹಲಗಳನ್ನು ನೀಡುತ್ತಾ ಎಲ್ಲಿಯೂ ಬೋರ್ ಹೊಡೆಸದಂತೆ ಚೆನ್ನಗಿ ಮೂಡಿ ಬರುತ್ತಿದೆ ಎನ್ನುತ್ತಿರುವಾಗಲೇ ದಿಢೀರನೇ ಮುಗಿಸಿರುವುದು ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ.
ಚುಕ್ಕಿ- ಓಂಕಾರ್ ನಡುವಿನ ನವಿರಾದ ಪ್ರೀತಿ, ತಾಜಾತನದ ಅನುಭೂತಿ ನೀಡುವ ಕಥೆ, ನವಿರಾದ ನಿರೂಪಣೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ.