'ಯಾರಿವಳು' ಧಾರಾವಾಹಿಯಲ್ಲಿ ಡಾ. ನಿಖಿಲ್ ಪಾತ್ರಕ್ಕೆ ಹೊಸ ರಾಹುಲ್ ಆಮೀನ್ ಎಂಟ್ರಿ ಕೊಟ್ಟಿದ್ದಾರೆ. 

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಯಾರಿವಳು'ನಲ್ಲಿ ಡಾ. ನಿಖಿಲ್ ಪಾತ್ರಧಾರಿ ಬದಲಾಗಿದ್ದಾರೆ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ಆರವ್ ಸೂರ್ಯ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರಕ್ಕೆ ರಾಹುಲ್ ಆಮೀನ್ ಎಂಟ್ರಿ ಕೊಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರವ್ ಸೂರ್ಯ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಆದರೆ ಸೂರ್ಯ ಎಲ್ಲಿಯೂ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಮಾಹಿತಿ ಪ್ರಕಾರ ರಾಹುಲ್ ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆರವ್ ಸೂರ್ಯ ವೈಷ್ಣವಿ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಯಾರಿವಳು ಕಥೆ:
ಅಭಾರಿ ಸಿರಿವಂತ ಕುಟುಂಬದ ಪುಟ್ಟ ಹುಡುಗಿ ಶ್ರೇಷ್ಠ ತನ್ನ ತಾಯಿ ಹುಡುಕಾಟದಲ್ಲಿ ಕಳೆದು ಹೋಗುತ್ತಾಳೆ. ಶ್ರೇಷ್ಠಾಗೆ ಅತಿ ಹೆಚ್ಚು ಪ್ರೀತಿ ತೋರಿಸುತ್ತಿದ್ದ ತಾತನಿಗೆ, ತಂದೆ ಹಿಂಸೆ ನೀಡಲು ಆರಂಭಿಸುತ್ತಾರೆ. ದುಷ್ಟರಿಂದ ಶ್ರೇಷ್ಠಾಳನ್ನು ಕಾಪಾಡುವುದು ಮಂಗಳಮುಖಿಯರು. 

ನಿಶ್ಚಿತಾರ್ಥ ಮಾಡಿಕೊಂಡ 'ಯಾರಿವಳು' ನಟ ಆರವ್, ಹುಡುಗಿ ಯಾರು ಗೊತ್ತಾ.? 

ಪ್ರಮುಖ ಪಾತ್ರಧಾರಿ ಮಾಯಾ ಹನುಮನ ಭಕ್ತೆ. ನೋಡಲು ಶ್ರೇಷ್ಠಾಳ ತಾಯಿಯಂತೆ ಕಾಣಿಸುತ್ತಾರೆ. ಇಬ್ಬರೂ ಆಕಸ್ಮಿಕವಾಗಿ ಭೇಟಿಯಾಗಿ ಇಷ್ಟಪಟ್ಟು ಒಟ್ಟಿಗೆ ಇರುತ್ತಾರೆ. ಮಾಯಾ ಹಾಗೂ ಶ್ರೇಷ್ಠಾ, ತಾಯಿ-ಮಗಳ ಪ್ರೀತಿ ಸುತ್ತಾ ಧಾರಾವಾಹಿ ಕಥೆ ಸಾಗುತ್ತದೆ.