ಬರೋಬ್ಬರಿ 10 ಲಕ್ಷ ಸಾಲ ಮಾಡಿಟ್ಟು ತೀರಿಕೊಂಡ ತಂದೆಯನ್ನು ನೆನಪಿಸಿ ವೇದಿಕೆಯಲ್ಲೇ ಕಣ್ಣೀರು ಹಾಕಿದ ಡ್ಯಾನ್ಸ್ ಶೋ ಸ್ಪರ್ಧಿಗೆ ನಿರೂಪಕನ ನೆರವು
ವೇದಿಕೆಯಲ್ಲಿ ಸ್ಫರ್ಧಿಯ ನೋವನ್ನು ನೋಡಲಾಗದೆ ಸ್ವತಃ ನಿರೂಪಕ 8 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ ಘಟನೆ ಹಿಂದಿಯ ಪ್ರಸಿದ್ಧ ರಿಯಾಲಿಟಿ ಶೋ ವೇದಿಕೆಯಲ್ಲಿ ನಡೆದಿದೆ. ಡ್ಯಾನ್ಸ್ ಪ್ಲಸ್ 6 ವೇದಿಕೆಯಲ್ಲಿ ಮನ ಮಿಡಿಯುವ ಸ್ಟೋರಿಯೊಂದು ರಿವೀಲ್ ಆಗಿದ್ದು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ.
ಕಾರ್ಯಕ್ರಮ ನಿರೂಪಣೆ ಮಾಡುವ ರಾಘವ್ ಜುಯಾಲ್ ಮಾನವೀಯತೆಯನ್ನು ನೋಡಿ ಈಗ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಬಹಳ ಹಾಸ್ಯಾಸ್ಪದವಾಗಿ ಕಾರ್ಯಕ್ರಮ ನಡೆಸಿಕೊಡೋ ರಾಘವ್ ಸೂಪರ್ ಡ್ಯಾನ್ಸರ್ ಮತ್ತು ಸಖತ್ ಕಾಮೆಡಿ ಪರ್ಸನ್ ನಟ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಟನ ಈ ಮುಖ ಎಲ್ಲರ ಮನಸು ಗೆದ್ದಿದೆ.
ಬಿಗ್‌ಬಾಸ್15 ನಡೆಸಲು ಸಲ್ಮಾನ್‌ಗೆ ಬರೋಬ್ಬರಿ 350 ಕೋಟಿ ಸಂಭಾವನೆ
ತಂದೆ 10 ಲಕ್ಷ ಸಾಲ ಮಾಡಿದ್ದರು. ಕೊರೋನಾ ಸಂದರ್ಭ ಸಾವನ್ನಪ್ಪಿದರು ಎಂದು ಅಸಾಹಯಕನಾದ ಡ್ಯಾನ್ಸ್ ಶೋ ಸ್ಪರ್ಧಿಯೊಬ್ಬ ವೇದಿಕೆಯಲ್ಲಿ ಮನನೊಂದು ಅತ್ತಿದ್ದ. ಅಲ್ಲಿ ಕುಳಿತಿದ್ದ ಅಷ್ಟೂ ಜನ ಭಾವುಕರಾಗಿದ್ದರು. ಪ್ರೇಕ್ಷಕರ ಮನಸನ್ನೂ ಮುಟ್ಟಿತ್ತು ಆ ಎಪಿಸೋಡ್.
ತಕ್ಷಣ ರಾಘವ್ 8 ಲಕ್ಷ ರೂಪಾಯಿ ಸಾಲ ಪಾವತಿಸಲು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. 10 ಲಕ್ಷದಲ್ಲಿ 2 ಲಕ್ಷ ಸಂದಾಯ ಮಾಡಿದ್ದು ಉಳಿದ 8 ಲಕ್ಷವನ್ನು ಸ್ವತಃ ತಾವೇ ನೀಡಿದ್ದಾರೆ ರಾಘವ್. ಈಗ ನಟನ ಈ ಮಾನವೀಯ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನನ್ನ ಫೋಟೋ ಕ್ಲಿಕ್ಕಿಸಬೇಡಿ ಎಂದು ಪಾಪ್ಪರಾಜಿಗಳಿಗೆ ಹೇಳೋ ರಾಘವ್ ಫೊಟೋ, ವಿಡಿಯೋಗಳನ್ನು ಅಷ್ಟಾಗಿ ಪಾಪ್ಪರಾಜಿಗಳು ಪೋಸ್ಟ್ ಮಾಡುವುದಿಲ್ಲ. ಆದರೆ ಈ ಬಾರಿ ಮಾತ್ರ ನಟನ ಮಾನವೀಯತೆಯನ್ನು ಮೆಚ್ಚಿ ಪೋಸ್ಟ್ ಮಾಡಿದ್ದಾರೆ.
ನಟ ಲಾಕ್‌ಡೌನ್ ಸಂದರ್ಭದಲ್ಲಿಯೂ ಬಹಳಷ್ಟು ಜನರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದರು. ಅವರ ಮಾವನೀಯ ಕೆಲಸಗಳನ್ನು ನಟಿ ಮಾಧುರಿ ಮೆಚ್ಚಿ ಹೊಗಳಿದ್ದರು.
