Asianet Suvarna News Asianet Suvarna News

ಬಿಗ್‌ಬಾಸ್‌15 ನಡೆಸಲು ಸಲ್ಮಾನ್‌ಗೆ ಬರೋಬ್ಬರಿ 350 ಕೋಟಿ ಸಂಭಾವನೆ

ಬಿಗ್‌ಬಾಸ್ ಸೀಸನ್ 15ರ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಶುರುವಾಗಿದೆ. ಬಿಗ್‌ಬಾಸ್ ಒಟಿಟಿ ಮಧ್ಯೆಯೇ 15ರ ಸೀಸನ್‌ಗಾಗಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಂದ ಹಾಗೆ ಶೋ ನಡೆಸಿಕೊಡೋದು ಎಂದಿನಂತೆ ಸಲ್ಮಾನ್ ಖಾನ್ ಅವರೇ.

Bollywood actor Salman Khan to get 350 crore Rs remuneration for Biggboss 15 dpl
Author
Bangalore, First Published Sep 18, 2021, 4:58 PM IST
  • Facebook
  • Twitter
  • Whatsapp

ಭಾರತದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 15ರ ಸಿದ್ಧತೆ ಭರದಿಂದ ಸಾಗಿದೆ. ಹೋಸ್ಟ್ ಸಲ್ಮಾನ್ ಖಾನ್ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಸ್ಪರ್ಧಿಗಳು ಯಾರಿರುತ್ತಾರೆ ಎಂಬುದು ಸಸ್ಪೆನ್ಸ್. ಬಿಗ್‌ಬಾಸ್ ಒಟಿಟಿ ನಡೆಯುತ್ತಿದ್ದರೂ ಸೀಸನ್ 15ಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಬಾಲಿವುಡ್ ಟಾಪ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡೋ ಶೋನಲ್ಲಿ ಸುಶಾಂತ್ ಸಿಂಗ್ ರಜಪೂತ್‌ನ ಮಾಜಿ ಗೆಳತಿಯರಾದ ಕಿರುತೆರೆ ನಟಿ ಅಂಕಿತಾ ಲೋಖಂಡೆ ಹಾಗೂ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಅಂಕಿತಾ ವಿಚಾರವನ್ನು ದೃಢಪಡಿಸಿಲ್ಲ.

ಬಾಲಿವುಡ್‌ ಸ್ಟಾರ್ಸ್‌ ಮದುವೆಗಳಲ್ಲಿ ಪರ್ಫಾಮ್‌ ಮಾಡಲು ಎಷ್ಟು ಚಾರ್ಜ್‌ ಮಾಡ್ತಾರೆ?

ಸಿಕ್ಕಾಪಟ್ಟೆ ಸುದ್ದಿಯಾದ ಇಬ್ಬರು ನಟಿಯರನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಲು ಜನರಿಗೂ ಸಾಕಷ್ಟು ಕುತೂಹಲ ಇದ್ದೇ ಇದೆ. ಆದರೆ ವಿವಾದದ ಹಿನ್ನೆಲೆ ಹಾಗೂ ಅಂಕಿತಾ ಅವರ ವಿವಾಹ ನಡೆಯುವ ಸಾಧ್ಯತೆ ಇದ್ದು ಅವರು ಶೋ ಭಾಗವಾಗುವುದರ ಬಗ್ಗೆ ಸ್ಪಷ್ಟವಿಲ್ಲ. ಆದರೆ ರಿಯಾ ಚಕ್ರರ್ತಿಗೆ ಬಿಗ್‌ಬಾಸ್ ಒಂದು ಕಂ ಬ್ಯಾಕ್ ಆಗೋ ಸಾಧ್ಯತೆಯೂ ಹೌದು. ಆದರೂ ಜೈಲು ಸೇರಿದ್ದ ನಟಿ ಮತ್ತಷ್ಟು ವಿವಾದಕ್ಕೆ ದಾರಿಯಾಗೋ ಹಿನ್ನೆಲೆ ಶೋ ಭಾಗವಾಗುವುದು ಡೌಟ್.

ಏನೇ ಇರಲಿ. ಆದರೆ ಹೋಸ್ಟ್ ಮಾತ್ರ ಸಲ್ಮಾನ್ ಖಾನ್ ಎನ್ನುವುದರಲ್ಲಿ ಡೌಟೇ ಇಲ್ಲ. ಬಾಲಿವುಡ್‌ನ ಖ್ಯಾತ ನಟ ಬಿಗ್‌ಬಾಸ್ ನಡೆಸಿಕೊಡುತ್ತಾರೆ. ಜನರು ಭಾರೀ ಇಷ್ಟ ಪಡುವ ಸಲ್ಮಾನ್ ಖಾನ್ ನಿರೂಪಣೆ ಬಿಗ್‌ಬಾಸ್ ಸೀಸನ್‌ನ ಹೈಲೈಟ್ ಕೂಡಾ ಹೌದು. ಅಂದಹಾಗೆ ನಟ ಪಡೆಯೋ ಸಂಭಾವನೆ ಬಗ್ಗೆ ನಿಮಗೆ ಅಂದಾಜಿದೆಯಾ ?

ಇತ್ತೀಚೆಗೆ ಫೋಟೋಗ್ರಫರ್ ವೈರಲ್ ಭಯಾನಿ ಅವರು ಶೇರ್ ಮಾಡಿದ ಪೋಸ್ಟ್‌ನ ಪ್ರಕರಾ ಸಲ್ಮಾನ್ ಖಾನ್ ಶೋ ನಡೆಸಿಕೊಡಲು ಬರೋಬ್ಬರಿ 350 ಕೋಟಿ ಪಡೆಯಲಿದ್ದಾರೆ ಎನ್ನಲಾಗಿದೆ. 14 ವಾರ ನಡೆಯೋ ಶೋಗಳಿಗಾಗಿ ನಟ ಇಷ್ಟೊಂದು ದೊಡ್ಡ ಮೊತ್ತ ಪಡೆಯುತ್ತಾರಾ ? ನಟನ ಜನಪ್ರಿಯತೆಗೆ ಇದು ತೀರಾ ಹೆಚ್ಚೇನೂ ಅಗಲಿಲ್ಲ. ಆದರೆ ಈ ಬಗ್ಗೆ ಬಿಗ್‌ಬಾಸ್ ತಂಡ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

Follow Us:
Download App:
  • android
  • ios