ಕಿರುತೆರೆ ವಾಹಿನಿಯ ಜನ ಮೆಚ್ಚಿದ ನಟ ಸ್ಕಂದ ಅಶೋಕ ಕಲರ್ಸ್ ಕನ್ನಡ ವಾಹಿನಿಯ 'ರಾಧಾ ರಮಣ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಧಾರಾವಾಹಿ ಅಂತ್ಯಗೊಂಡ ನಂತರ ತಮ್ಮ ಖಾಸಗಿ ಜೀವನದಲ್ಲಿ ತುಂಬಾ ಬ್ಯುಸಿಯಾದರು. ಈ ಕೊರೋನಾ, ಲಾಕ್‌ಡೌನ್‌, ಡ್ರೈ ಡೇ ಸಮಯದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ.

CCD ಸಿದ್ಧಾರ್ಥ ಅಣ್ಣನ ಮಗ, ಮಾಜಿ ಶಿಕ್ಷಣ ಸಚಿವರ ಮೊಮ್ಮಗ 'ರಮಣ್' ಸಿನಿ ಫ್ಯಾಶನ್!

ಹಲವು ವರ್ಷಗಳಿಂದ ಶಿಖಾರನ್ನು ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದುಕೊಂಡು ವೈವಾಹಿಕ ಬದುಕಿಗೆ ಕಾಲಿಟ್ಟ ಸ್ಕಂದ ತಂದೆಯಾಗಿದ್ದಾರೆ.  ಈ ವಿಚಾರವನ್ನು ಪತ್ನಿ ಶಿಖಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸೀಮಂತ ಕಾರ್ಯಕ್ರಮದಲ್ಲಿ ಕಿರು ತೆರೆ ನಟ-ನಟಿಯರೂ ಪಾಲ್ಗೊಂಡಿದ್ದರು.

ಈ ಪರಿಸ್ಥಿತಿಯಲ್ಲಿ ತಾಯಿ ಹಾಗೂ ಮಗುವಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸ್ಕಂದ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ. ವೈದ್ಯರ ಜೊತೆ ಸಂಪರ್ಕದಲ್ಲಿದ್ದು, ಯಾವುದೇ ರೋಗ ತಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಕಂದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶದಲ್ಲಿ ಹೇಳಿದ್ದಾರೆ.

ಅಪ್ಪನಾಗುತ್ತಿದ್ದಾನೆ 'ರಮಣ', 'ರಾಧಾ'ಗೆ ಸೀಮಂತದ ಸಂಭ್ರಮ..!

2018ರಲ್ಲಿ ಅದ್ಧೂರಿಯಾಗಿ ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆಯಾದ ಸ್ಕಂದ ಮತ್ತು ಶಿಖಾ ಕುಟುಂಬಕ್ಕೆ ಲಿಟಲ್‌ ಪ್ರಿನ್ಸೆಸ್ ಆಗಮನದ ಬಗ್ಗೆ ಅಭಿಮಾನಿಗಳು ಕಾಮೆಂಟ್‌ನಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.

'ರಾಧ ರಮಣ್' ಧಾರಾವಾಹಿಯಲ್ಲಿ ಆರಾಧನಾ ಮಿಸ್ ಆಗಿ ಅಭಿನಯಿಸಿದ ಶ್ವೇತಾ ಜೊತೆ ರಮಣ್ ಮೋಡಿ ಮಾಡಿದ್ದರು. ಈ ಧಾರಾವಾಹಿಯ ಕಥೆ, ರಾಧಾ ರಮಣ್ ಪ್ರೇಮ ಕಥೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದರು. ಇಂಗ್ಲಿಷ್ ಆ್ಯಕ್ಸೆಂಟ್‌ನ ಕನ್ನಡದಿಂದಲೂ ರಮಣ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 


   
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗಡೆ ಹತ್ತಿರದ ಸಂಬಂಧಿಯೂ ಆದ ಈ ಸ್ಕಂದ, ಚಿಕ್ಕಮಗಳೂರು ಮೂಲದವರು.