ನೋಡೋಕೆ ಬ್ಯೂಟಿಫುಲ್, ಸಿಂಪಲ್ ಮತ್ತು ಹಂಬಲ್ ಹುಡುಗಿ ದೀಪಿಕಾ ಅಲಿಯಾಸ್ ಅನುಷಾ ಹೆಗ್ಡೆ ನಿಜ ಜೀವನದಲ್ಲಿ ತೆಲುಗು ನಟ ಪ್ರತಾಪ್ ಸಿಂಗ್ ಶಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಈ ಬಿಗ್‌ ಬಾಸ್ ಸ್ಪರ್ಧಿಗೆ ಸುದೀಪ್‌ ತಾಯಿ ಫ್ಯಾನ್‌; ಹಾಗಾದ್ರೆ ಎಷ್ಟು ದಿನ ಇರ್ತಾರೆ?

 

'ನಿನ್ನ ಪೆಳ್ಳಾಡತಾ' ಧಾರಾವಾಹಿ ಮೂಲಕ ತೆಲುಗಿಗೆ ಕಾಲಿಟ್ಟ ಅನುಷಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಇದೇ ಧಾರಾವಾಹಿಯಲ್ಲಿ ಪ್ರತಾಪ್ ಸಿಂಗ್ ನಟಿಸುತ್ತಿದ್ದು ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ.

‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!

ಪ್ರತಾಪ್ ಮೂಲತಃ ಉತ್ತರ ಭಾರತದ ಹುಡುಗ, ವಾಸಿಸುತ್ತಿರುವುದು ಹೈದರಾಬಾದ್‌ನಲ್ಲಿ. ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರತಾಪ್ ವೇದಿಕೆ ಮೇಲೆ ಮಂಡಿಯೂರಿ ಅನುಷಾಳಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದಾರೆ ಎನ್ನಲಾಗಿದೆ. ಅನುಷಾ ಹಾಗೂ ಪ್ರತಾಪ್ ಗುರು-ಹಿರಿಯರ ಸಮ್ಮುಖದಲ್ಲಿ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎನ್ನಲಾಗಿದೆ.