ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿಕೊಳ್ಳಲು ಏನೇನೋ ಗಿಮಿಕ್ ಮಾಡುತ್ತಾರೆ. ಯಾರ್ಯಾರ ಬಗ್ಗೆಯೋ ಫೇಕ್ ನ್ಯೂಸ್ ಗಳನ್ನು ಹರಿಬಿಡಲಾಗುತ್ತದೆ. ಇದೀಗ ರಾಧಾ ರಮಣ ಖ್ಯಾತಿಯ ರಾಧಾ ಮಿಸ್ ಶ್ವೇತಾ ಆರ್ ಪ್ರಸಾದ್ ಬಗ್ಗೆ ಫೇಕ್ ಸುದ್ದಿಯೊಂದು ಹರಿದಾಡುತ್ತಿದೆ. ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎನ್ನುವ ಸುದ್ದಿಯೊಂದನ್ನು ವೆಬ್ ಸೈಟ್ ವೊಂದು ವರದಿ ಮಾಡಿದೆ. ಈ ಸುದ್ದಿ ನೋಡಿ ಸ್ನೇಹಿತರು, ಅಭಿಮಾನಿಗಳು, ಹಿತೈಶಿಗಳು ಶಾಕ್ ಆಗಿದ್ದಾರೆ. 

ಈ ಸುದ್ಧಿ ನೋಡಿ ಆರ್ ಜೆ ಪ್ರದೀಪ್ ಗರಂ ಆಗಿದ್ದಾರೆ. ಸುಳ್ಳು ಸುದ್ಧಿ ಹಬ್ಬಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ ಒಂದಿಷ್ಟು ಲೈಕ್ಸ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಮಾಡಿರುವ ಚೀಪ್ ಗಿಮಿಕ್ ಇದು. ಗೂಗಲ್ ಜಾಹಿರಾತುಗಳಿಂದ ಹಣ ಮಾಡುವ ಉದ್ದೇಶದಿಂದ ಈ ರೀತಿ ಕೆಟ್ಟ ಸುದ್ಧಿಗಳನ್ನು ಬಿತ್ತರಿಸುತ್ತಿದ್ದಾರೆ‘ ಎಂದು ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ. 

"ಈ ಸುದ್ದಿ ಎಲ್ಲಾ ಕಡೆ ಹಬ್ಬುತ್ತಿದ್ದಂತೆ ಅನೇಕ ಸ್ನೇಹಿತರು ಕರೆ ಮಾಡಿ ಆರಾಮಾಗಿದ್ದೀರಾ ಎಂದು ವಿಚಾರಿಸಿದ್ದಾರೆ. ಶ್ವೇತಾ ಶಿವಮೊಗ್ಗಕ್ಕೆ ತೆರಳಿದ್ದಾರೆ. ನಾನು ಬೆಂಗಳೂರಿನಲ್ಲೇ ಇದ್ದೀನಿ. ನಾವಿಬ್ಬರೂ ಸಂತೋಷವಾಗಿದ್ದೇವೆ‘ ಎಂದು ಪ್ರದೀಪ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.  

ಸುಳ್ಳು ಸುದ್ದಿ ವರದಿ ಮಾಡಿದ ವೆಬ್ ಸೈಟ್ ವಿರುದ್ಧ ಪ್ರದೀಪ್ ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ.