ಪುಟ್ಟಕ್ಕನ ಮಕ್ಕಳು ಸಹನಾ, ಡಾನ್ಸ್ ಕರ್ನಾಟಕ ಡಾನ್ಸ್ ಷೋದಿಂದ ಹೊರ ಬಂದ ಕಾರಣವೇ ಬೇರೆ! ಸತ್ಯ ತಿಳಿಸಿದ ನಟಿ
ಪುಟ್ಟಕ್ಕನ ಮಕ್ಕಳು ಸಹನಾ ಅರ್ಥಾತ್ ನಟಿ ಅಕ್ಷರಾ ಡಾನ್ಸ್ ಕರ್ನಾಟಕ ಡಾನ್ಸ್ನಿಂದ ಹೊರ ಬಂದದ್ದೇಕೆ? ನಟಿ ಹೇಳಿದ ಮಾತು ಕೇಳಿ...
ಸಹನಾ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ಪುಟ್ಟಕ್ಕನ ಮಗಳು. ಮನೆಯಿಂದ ದೂರವಾಗಿ ತನ್ನದೇ ಮೆಸ್ ನಡೆಸುತ್ತ ಸ್ವಾವಲಂಬಿಯಾಗಿದ್ದ ಸಹನಾ, ಪತಿಯನ್ನೇ ಬಿಟ್ಟುಕೊಟ್ಟು ಬೇರೆ ಮದುವೆ ಮಾಡಿಸಿದಾಕೆ. ಅತ್ತೆ ವಿಷ ಹಾಕಿ ಕೊಲ್ಲಲು ನೋಡಿದ್ದಳು ಎನ್ನುವ ಸತ್ಯ ಪತಿಗೆ ತಿಳಿಸಿದರೂ ಪತ್ನಿಯನ್ನು ನಂಬದ ಗಂಡ ತನಗೆ ಬೇಡ ಎಂದುಕೊಂಡು ಅವನನ್ನು ಬಿಟ್ಟು ಹೋದಳು. ಕೊನೆಗೆ ಗಂಡ ಮತ್ತೊಂದು ಮದುವೆ ಆಗುತ್ತಿದ್ದಾನೆ ಎಂದು ತಿಳಿದರೂ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಸದ್ಯ ಕಾಳಿ ಮತ್ತು ವಿದೇಶಿಗ ಮ್ಯಾಕ್ಸಿ ಸಹನಾಳನ್ನು ಲವ್ ಮಾಡುತ್ತಿದ್ದು, ಮುಂದೇನಾಗುತ್ತದೆಯೋ ನೋಡಬೇಕಿದೆ.
ಇದು ಒಂದೆಡೆಯಾದರೆ, ಸಹನಾ ಪಾತ್ರಧಾರಿಯಾಗಿರುವ ಅಕ್ಷರಾ, ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿಯೂ ಕೆಲವು ವಾರ ಮಿಂಚಿದ್ದರು. ಅವರು ಫೈನಲಿಸ್ಟ್ ಆಗುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಏಕಾಏಕಿ ಅಕ್ಷರಾ ಷೋನಿಂದ ಕಣ್ಮರೆಯಾದರು. ಇವರು ಯಾಕೆ ಷೋ ಬಿಟ್ಟರು ಎಂಬ ಬಗ್ಗೆ ಫ್ಯಾನ್ಸ್ಗೆ ಸಕತ್ ನಿರಾಸೆಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಪ್ರಶ್ನಿಸಿದವರೇ ಹೆಚ್ಚು. ಆದರೆ ಯಾರಿಗೂ ಸೂಕ್ತ ಉತ್ತರ ಸಿಕ್ಕಿರಲಿಲ್ಲ. ಸೀರಿಯಲ್ಗಾಗಿ ನಟಿ ಡಾನ್ಸ್ ಷೋ ಬಿಟ್ಟರು ಎಂದು ಕೆಲವರು ಅಂದುಕೊಂಡರೂ ಅದು ಸಂಪೂರ್ಣ ನಿಜವಲ್ಲ. ಇದೀಗ ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನಲ್ಲಿ ಅಕ್ಷರಾ ಅವರು ತಾವು ಷೋ ಬಿಟ್ಟ ಕಾರಣವನ್ನು ತಿಳಿಸಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ತೊರೆದ ಬಿಗ್ಬಾಸ್ ಹಂಸಾ ಪ್ರತಾಪ್ ಹೊಸ ವರ್ಷದ ರೆಸಲ್ಯೂಷನ್ ಕೇಳಿ...
ಅಷ್ಟಕ್ಕೂ ಅಕ್ಷರಾ ಅವರಿಗೆ ಡಾನ್ಸ್ ಪ್ರಾಕ್ಟೀಸ್ ಮಾಡುವ ಸಮಯದಲ್ಲಿ ಕಾಲಿಗೆ ತುಂಬಾ ಏಟಾಯಿತಂತೆ. ಡಾನ್ಸ್ ಮಾಡಲೇಬಾರದು ಎಂದು ವೈದ್ಯರು ಹೇಳಿದರು. ಒಂದು ವೇಳೆ ಡಾನ್ಸ್ ಮುಂದುವರೆಸಿದರೆ ಕಾಲಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ ಕಾರಣದಿಂದ, ತಮ್ಮ ಆರೋಗ್ಯಕ್ಕೂ ಜೊತೆ ಸೀರಿಯಲ್ಗೂ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಈ ರಿಯಾಲಿಟಿ ಷೋನಿಂದ ತಾವು ಹೊರಕ್ಕೆ ಬಂದಿರುವುದಾಗಿ ಅಕ್ಷರಾ ತಿಳಿಸಿದ್ದಾರೆ. ಇನ್ನು ನಟಿಯ ಕುರಿತು ಹೇಳುವುದಾದರೆ, ಪುಟ್ಟಕ್ಕನ ಮಗಳು ಸೀರಿಯಲ್ನಲ್ಲಿ ಹೆಚ್ಚು ಕಲಿಯದೇ ಇರುವ ಸಹನಾ, ನಿಜ ಜೀವನದಲ್ಲಿ ಫೈನಾನ್ಸ್ನಲ್ಲಿ ಎಂಬಿಎ ಪದವೀಧರೆ. ಈ ಸೀರಿಯಲ್ಗೂ ಬರುವ ಮುನ್ನೆ ಕೆಲವು ಧಾರಾವಾಹಿಯಲ್ಲಿ ಅಕ್ಷರಾ ನಟಿಸಿದ್ದಾರೆ. ‘ಅಮ್ನೋರು’ (Amnoru) ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರಿಗೆ ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸಕತ್ ಹೆಸರು ತಂದುಕೊಡುತ್ತಿದೆ. ರಕ್ಷಾ ಬಂಧನ ಸೀರಿಯಲ್ನಲ್ಲಿಯೂ ನಟಿಸಿದ್ದಾರೆ. ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಅಕ್ಷರಾ ಅವರು ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರೋ ಇವರು, ಅವರನ್ನು ನೋಡಿಯೇ ತಾನು ಇವರಂತೆ ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೆಂದು ಬಯಸಿದರಂತೆ.
ಸೋಷಿಯಲ್ ಮೀಡಿಯಾದಲ್ಲಿಯೂ ಇಬ್ಬರೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಅಕ್ಷರಾ ಅವರು, ಮಾಡರ್ನ್ ಡ್ರೆಸ್ನಲ್ಲಿ ಮಿಂಚಿದರೆ ಅಬ್ಬಬ್ಬಾ ನಮ್ಮ ಸಹನಾ ಇವರೇನಾ ಎಂದು ನಿಬ್ಬೆರಗಾಗಿ ನೋಡಬೇಕು. ಪುಟ್ಟಕ್ಕನ ಮಗಕ್ಕಳು ಸೀರಿಯಲ್ನಲ್ಲಿ ಸೀರೆಯುಟ್ಟು ಹಳ್ಳಿ ಹುಡುಗಿ ಲುಕ್‌ನಲ್ಲಿ ಕ್ಯೂಟ್ ಆಗಿ ಕಾಣುವ ಅಕ್ಷರ, ಮಾಡೆಲಿಂಗ್‌ನಲ್ಲಿಯೂ ಎತ್ತಿದ ಕೈ. ಅಂದಹಾಗೆ ಇವರು ಹುಟ್ಟಿದ್ದು, ಬೆಂಗಳೂರಿನಲ್ಲಿ. ಸೀರಿಯಲ್ಗೆ ಪದಾರ್ಪಣೆ ಮಾಡಲು ಅಪ್ಪ-ಅಮ್ಮನೇ ಕಾರಣ ಎಂದಿರುವ ಅಕ್ಷರಾ ಅವರು, ತಮಗೆ ಅವರೇ ಸಪೋರ್ಟ್ ಮಾಡುತ್ತಾರೆ ಎಂದಿದ್ದಾರೆ. ಇನ್ನು ಈ ಸೀರಿಯಲ್ನಲ್ಲಿ ಉಮಾಶ್ರೀಯಂಥ ಹಿರಿಯ ನಟಿಯ ಜೊತೆ ನಟಿಸುವ ಭಾಗ್ಯ ತಮಗೆ ಲಭಿಸಿದ್ದು, ಪುಣ್ಯ ಎನ್ನುವ ಅಕ್ಷರಾ ಅವರ, ಯಾವುದೇ ತಪ್ಪುಗಳು ಸಂಭವಿಸಿದರೂ ಅಲ್ಲಿ ಅದನ್ನು ಸರಿಪಡಿಸಿ ಉತ್ತಮವಾಗಿ ನಟಿಸಲು ಸಲಹೆಗಳನ್ನು ನೀಡುತ್ತಾರೆ ಎನ್ನುತ್ತಾರೆ.
ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್ಬಾಸ್ ಹಂಸಾ ಮೋಸ! ದೂರು ಕೊಟ್ಟ ನಿರ್ದೇಶಕ ಹೇಳಿದ್ದೇನು?