ಪುಟ್ಟಕ್ಕನ ಮಕ್ಕಳು ಸ್ನೇಹಾ ಮತ್ತು ಸುಮಾ ಮೇರೆ ಮೆಹಬೂಬ್‌ ಮೇರೆ ಸನಮ್‌ ಹಾಡಿಗೆ ಭರ್ಜರಿ ಸ್ಟೆಪ್‌ ಹಾಕಿದ್ದಾರೆ. ಫ್ಯಾನ್ಸ್‌ ಏನೆಲ್ಲಾ ಹೇಳಿದ್ರು ನೋಡಿ... 

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಮಕ್ಕಳೇ ಹೈಲೈಟ್‌ ಎಂದು ಬೇರೆ ಹೇಳಬೇಕಾಗಿಲ್ಲ. ಅದರಲ್ಲಿಯೂ ಸ್ನೇಹಾ ಈ ಸೀರಿಯಲ್‌ ಹೀರೋಯಿನ್‌ ಆದರೆ, ಚಿಕ್ಕಮಗಳು ಸುಮಾ ಕೂಡ ಕಾಲೇಜಿನ ಚಿತ್ರಣವನ್ನು ನೀಡುತ್ತಿದ್ದಾಳೆ. ಇದೀಗ ಸ್ನೇಹಾ ಮತ್ತು ಸುಮಾ ಸಹೋದರಿಯರು ಸೇರಿ ಭರ್ಜರಿ ರೀಲ್ಸ್‌ ಮಾಡಿದ್ದು, ಇವರ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶಾರುಖ್‌ ಖಾನ್‌ ಮತ್ತು ಜೂಹಿ ಚಾವ್ಲಾ ಅಭಿನಯದ ಮೇರೆ ಮೆಹಬೂಬ್‌ ಮೇರೆ ಸನಮ್‌ ಸಿನಿಮಾದ ಹಾಡು ಇದಾಗಿದ್ದು, ಅಲ್ಲಿ ಹೀರೋ ಮತ್ತು ಹೀರೊಯಿನ್‌ ರೊಮಾನ್ಸ್‌ ಮಾಡಿದ್ರೆ, ಇಲ್ಲಿ ಅಕ್ಕ-ತಂಗಿ ವಿಭಿನ್ನ ರೀತಿಯ ಸ್ಟೆಪ್‌ ಹಾಕಿದ್ದಾರೆ. 

ಅಂದಹಾಗೆ ಸ್ನೇಹಾ ಪಾತ್ರಧಾರಿಯ ಹೆಸರು ​ ಸಂಜನಾ ಬುರ್ಲಿ ಹಾಗೂ ಸುಮಾ ಪಾತ್ರಧಾರಿಯ ಹೆಸರು ಶಿಲ್ಪಾ ಸವಸೆರೆ. ಪುಟ್ಟಕ್ಕನ ಮಗಳು ಸ್ನೇಹಾ, ಎಷ್ಟೋ ಮಂದಿಗೆ ಮಾದರಿ ಹೆಣ್ಣು. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇಂತಿಪ್ಪ ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.

ಹುಸನ ತೆರಾ ತೌಬಾ ತೌಬಾ... ಪುಟ್ಟಕ್ಕನ ಮಗಳು ಸ್ನೇಹಾ ಭರ್ಜರಿ ಸ್ಟೆಪ್​- ಡಿಕೆಡಿಯಲ್ಲಿ ಯಾಕಿಲ್ಲಾ ಕೇಳ್ತಿದ್ದಾರೆ ಫ್ಯಾನ್ಸ್​


ಸಂಜನಾ ಕುರಿತು ಹೇಳುವುದಾದರೆ, ಇವರಿಗೆ ಮೊದಲಿಗೆ 'ಲಗ್ನಪತ್ರಿಕೆ' ಸೀರಿಯಲ್​ನಲ್ಲಿ ಅವಕಾಶ ಸಿಕ್ಕಿತು. ಆದರೆ ಕಾರಾಣಾಂತರಗಳಿಂದ ಪ್ರಸಾರ ನಿಲ್ಲಿಸಿತ್ತು. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿದ್ದು ಅದೃಷ್ಟದಿಂದ! ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಿರುವುದು ಹೇಗೆ ಎಂದು ನಟಿ ಈ ಹಿಂದೆ ಹೇಳಿದ್ದರು. 'ಲಗ್ನಪತ್ರಿಕೆ'. ಕಾರಾಣಾಂತರಗಳಿಂದ ಪ್ರಸಾರ ನಿಲ್ಲಿಸಿತ್ತು. ನಂತರ ಧಾರಾವಾಹಿಯ ಉಸಾಬರಿ ಬೇಡ ಎಂದು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟೆ. ಬಳಿಕ ಆರೂರು ಜಗದೀಶ್‌ ಅವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದ್ದರೂ ಸ್ನೇಹಾ ಅದಕ್ಕೆ ಒಪ್ಪಿರಲಿಲ್ಲ. ಕೊರೋನಾ ಮುಗಿದು ಕಾಲೇಜು ಶುರುವಾಗಿದ್ದರಿಂದ ವಿದ್ಯಾಭ್ಯಾಸಕ್ಕೆ ಕಷ್ಟ ಆಗುತ್ತೆ ಎಂದು ಬೇಡ ಎಂದರು. ನಂತರ ಪುನಃ ಕೊರೋನಾದಿಂದ ಆನ್​ಲೈನ್​ ತರಗತಿ ಶುರುವಾದ ಕಾರಣ, ಈ ಧಾರಾವಾಹಿಗೆ ಅವರು ಒಪ್ಪಿದರು. ನಟನೆ ಮತ್ತು ಓದನ್ನು ಬ್ಯಾಲೆನ್ಸ್‌ ಮಾಡಬಹುದು ಎಂದು ಧೈರ್ಯ ಮಾಡದೇ ಹೋಗಿದ್ದರೆ ಪಾತ್ರದ ಯಶಸ್ಸನ್ನು ನಾನು ಕಳೆದುಕೊಳ್ಳುತ್ತಿದ್ದೆ ಎಂದಿದ್ದರು ಸಂಜನಾ. 

ಇನ್ನು, ಶಿಲ್ಪಾ ಸವಸೆರೆ ಅವರ ಕುರಿತು ಹೇಳುವುದಾದರೆ, ಇವರು ಮಾಡೆಲ್​ ಹಾಗೂ ಫ್ಯಾಷನ್​ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇದೀಗ ಧಾರಾವಾಹಿ ಅಕ್ಕ ಸ್ನೇಹಾ ಜೊತೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಈ ಹಿಂದೆ ಕೂಡ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ರೀಲ್ಸ್​ ಮಾಡಿದ್ದಾರೆ. ತುಂಬಾ ದಿನಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯ ಈ ಜೋಡಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಹಲವು ತಿಂಗಳ ಬಳಿಕ ಅಕ್ಕ-ತಂಗಿಯಂದಿರನ್ನು ನೋಡಿ ಖುಷಿಯಾಗುತ್ತಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ಜೋಡಿಗೆ ಕಾಲೆಳೆಯುತ್ತಿದ್ದಾರೆ. ರೊಮಾನ್ಸ್‌ ಹಾಡಿಗೆ ಅಕ್ಕ-ತಂಗಿ ಡಾನ್ಸ್‌ ಮಾಡ್ತೀರಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. 

ಪ್ರತಿಯೊಂದು ಮನೆಯ ಕಪಾಟಿನಲ್ಲಿ ವಿಷದ ಬಾಟ್ಲಿ ಇರೋದು ಕಡ್ಡಾಯನಾ? ಇದೇನು ಚಿನ್ನ-ಬೆಳ್ಳಿನಾ?

View post on Instagram