'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾಳ ಮೇಲಿನ ಆರೋಪ ತೊಡೆದುಹಾಕಲು ಪುಟ್ಟಕ್ಕ ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ರವಿಚಂದ್ರನ್ ರಕ್ಷಿಸುತ್ತಾರೆ. ಕಂಠಿ ಮತ್ತು ಇತರರು ಸೇರಿ ಸಿಂಗಾರಮ್ಮನ ಕುತಂತ್ರ ಬಯಲು ಮಾಡುತ್ತಾರೆ. ರೌಡಿಗಳ ವಿರುದ್ಧ ಪುಟ್ಟಕ್ಕನ ಮಕ್ಕಳು ಹೋರಾಡುತ್ತಾರೆ. ಸಹನಾ ಪಾತ್ರಧಾರಿ ಅಕ್ಷರಾ ಫೈನಾನ್ಸ್‌ನಲ್ಲಿ ಎಂಬಿಎ ಪದವೀಧರೆ, ಈ ಹಿಂದೆ ಹಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಕ್ಷರಾ ಮಾಡೆಲಿಂಗ್‌ನಲ್ಲಿಯೂ ಸಕ್ರಿಯರಾಗಿದ್ದು, ಉಮಾಶ್ರೀಯವರಿಂದ ನಟನೆಯಲ್ಲಿ ಸಲಹೆ ಪಡೆಯುತ್ತಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಇದಾಗಲೇ ಕ್ರೇಜಿಸ್ಟಾರ್​ ರವಿಚಂದ್ರನ್​ ಎಂಟ್ರಿ ಆಗಿದ್ದು, ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ಪುಟ್ಟಕ್ಕನನ್ನು ರಕ್ಷಿಸಿಯಾಗಿದೆ. ಅಷ್ಟಕ್ಕೂ, ಸ್ನೇಹಾಳಿಗೆ ಅಂಟಿರುವ ಕಳಂಕವನ್ನು ತೊಡೆದು ಹಾಕಲು ಪುಟ್ಟಕ್ಕ ಪಣತೊಟ್ಟಿದ್ದಳು. ರಾಜಿಯ ಕುತಂತ್ರದಿಂದ ಡಿಸಿಯಾಗಿದ್ದ ಸಂದರ್ಭದಲ್ಲಿ ಸ್ನೇಹಾ ಮೋಸ ಮಾಡಿದ್ದಾಳೆ ಎಂದೇ ಜನರು ಅಂದುಕೊಂಡಿದ್ದರು. ಆದರೆ ತನ್ನ ಮಗಳು ನಿಷ್ಠಾವಂತಳು, ಅವಳು ಯಾವ ತಪ್ಪೂ ಮಾಡಿಲ್ಲ ಎಂದು ಪುಟ್ಟಕ್ಕ ಹೋರಾಟ ಮಾಡುತ್ತಿದ್ದಳು. ಒಂದು ಹಂತದಲ್ಲಿ ಸೋತ ಪುಟ್ಟಕ್ಕ ನಡುಬೀದಿಯಲ್ಲಿ ಬೆಂಕಿಹಚ್ಚಿಕೊಳ್ಳಲು ಮುಂದಾಗಿದ್ದಳು. ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಇನ್ನೇನು ಕಡ್ಡಿಗೀರಬೇಕು ಎನ್ನುವಷ್ಟರಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಎಂಟ್ರಿಯಾಗಿತ್ತು. ಪುಟ್ಟಕ್ಕ ಸಾಯುವುದರಿಂದ ರವಿಚಂದ್ರನ್​ ತಡೆದಿದ್ದರು. ಪುಟ್ಟಕ್ಕನ ಜೊತೆಯಲ್ಲಿ ತಾವೂ ಸ್ನೇಹಾಳಿಗೆ ನ್ಯಾಯ ಒದಗಿಸಲು ಕುಳಿತಿದ್ದರು. ಕೊನೆಗೆ ಕಂಠಿ ಮತ್ತು ಇತರರು ಸೇರಿ ಸಿಂಗಾರಮ್ಮಾ ಮತ್ತು ಟೀಂ ಕುತಂತ್ರ ಬಯಲು ಮಾಡಿದ್ದಾರೆ. ಪುಟ್ಟಕ್ಕನಿಗೆ ಜಯ ಸಿಕ್ಕಿದೆ.

ಇದೀಗ ಸಿಂಗಾರಮ್ಮ ಆ್ಯಂಡ್ ಟೀಮ್​ ಕುತಂತ್ರ ಬಯಲಾಗುತ್ತಿದ್ದಂತೆಯೇ ಎಲ್ಲರೂ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪುಟ್ಟಕ್ಕನ ಮೇಲೆ ಕೈ ಮಾಡಲು ಬಂದ ರೌಡಿಗಳಿಗೆ ಪುಟ್ಟಕ್ಕನ ಮಕ್ಕಳೇ ಏಟು ನೀಡಿದ್ದಾರೆ. ಇದಾಗಲೇ ಕರಾಟೆ ಕಲಿತಿರೋ ಸಹನಾ ಕೂಡ ಚೆನ್ನಾಗಿ ಫೈಟ್​ ಮಾಡಿದ್ದಾಳೆ. ಈ ಫೈಟಿಂಗ್​ ಶೂಟಿಂಗ್​ನ ವಿಡಿಯೋ ಈಗ ವೈರಲ್​ ಆಗಿದೆ. ಡಿವಿ ಡ್ರೀಮ್ಸ್​ ಎನ್ನುವ ಯೂಟ್ಯೂಬ್​ ಚಾನೆಲ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಈ ಶೂಟಿಂಗ್​ ಸಮಯದಲ್ಲಿ ರೌಡಿ ಪಾತ್ರಧಾರಿಗೆ ಕಾಳಿ ಏಟು ಕೊಟ್ಟಾಗ ಅವರ ಹೊಟ್ಟೆಗೆ ಪೆಟ್ಟು ಬಿದ್ದು ನೋವಿನಿಂದ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅದೇ ಸಂದರ್ಭದಲ್ಲಿ ಸಹನಾ ಪಾತ್ರಧಾರಿ ನಟಿ ಅಕ್ಷರಾ ಅವರಿಗೂ ಏಟು ಬಿದ್ದಿದೆ. ಈ ಬಗ್ಗೆ ಕೇಳಿದಾಗ ಅವರು ಸ್ವಲ್ಪ ಏಟು ಬಿದ್ದಿದೆ ಎಂದು ತರಚಿದ ಗಾಯಗಳನ್ನು ತೋರಿಸಿದ್ದಾರೆ.

'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ವಿಡಿಯೋ ಇಲ್ಲಿದೆ...

ಒಟ್ಟಿನಲ್ಲಿ ಒಂದು ದೃಶ್ಯವನ್ನು ತೆರೆಯ ಮೇಲೆ ತರುವ ಸಂದರ್ಭದಲ್ಲಿ ಎಷ್ಟೊಂದು ಕಷ್ಟಪಡುತ್ತಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್ನು ಸಹನಾ ಪಾತ್ರಧಾರಿ ಅಕ್ಷರಾ ಕುರಿತು ಹೇಳುವುದಾದರೆ, ಪುಟ್ಟಕ್ಕನ ಮಗಳು ಸೀರಿಯಲ್​ನಲ್ಲಿ ಹೆಚ್ಚು ಕಲಿಯದೇ ಇರುವ ಸಹನಾ, ನಿಜ ಜೀವನದಲ್ಲಿ ಫೈನಾನ್ಸ್​ನಲ್ಲಿ ಎಂಬಿಎ ಪದವೀಧರೆ. ಈ ಸೀರಿಯಲ್​ಗೂ ಬರುವ ಮುನ್ನೆ ಕೆಲವು ಧಾರಾವಾಹಿಯಲ್ಲಿ ಅಕ್ಷರಾ ನಟಿಸಿದ್ದಾರೆ. ‘ಅಮ್ನೋರು’ (Amnoru) ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರಿಗೆ ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸಕತ್​ ಹೆಸರು ತಂದುಕೊಡುತ್ತಿದೆ. ರಕ್ಷಾ ಬಂಧನ ಸೀರಿಯಲ್​ನಲ್ಲಿಯೂ ನಟಿಸಿದ್ದಾರೆ. ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಅಕ್ಷರಾ ಅವರು ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರೋ ಇವರು, ಅವರನ್ನು ನೋಡಿಯೇ ತಾನು ಇವರಂತೆ ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೆಂದು ಬಯಸಿದರಂತೆ.

ಸೋಷಿಯಲ್​ ಮೀಡಿಯಾದಲ್ಲಿಯೂ ಇಬ್ಬರೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಅಕ್ಷರಾ ಅವರು, ಮಾಡರ್ನ್​ ಡ್ರೆಸ್​ನಲ್ಲಿ ಮಿಂಚಿದರೆ ಅಬ್ಬಬ್ಬಾ ನಮ್ಮ ಸಹನಾ ಇವರೇನಾ ಎಂದು ನಿಬ್ಬೆರಗಾಗಿ ನೋಡಬೇಕು. ಪುಟ್ಟಕ್ಕನ ಮಗಕ್ಕಳು ಸೀರಿಯಲ್​ನಲ್ಲಿ ಸೀರೆಯುಟ್ಟು ಹಳ್ಳಿ ಹುಡುಗಿ ಲುಕ್‌ನಲ್ಲಿ ಕ್ಯೂಟ್​ ಆಗಿ ಕಾಣುವ ಅಕ್ಷರ, ಮಾಡೆಲಿಂಗ್‌ನಲ್ಲಿಯೂ ಎತ್ತಿದ ಕೈ. ಅಂದಹಾಗೆ ಇವರು ಹುಟ್ಟಿದ್ದು, ಬೆಂಗಳೂರಿನಲ್ಲಿ. ಸೀರಿಯಲ್​ಗೆ ಪದಾರ್ಪಣೆ ಮಾಡಲು ಅಪ್ಪ-ಅಮ್ಮನೇ ಕಾರಣ ಎಂದಿರುವ ಅಕ್ಷರಾ ಅವರು, ತಮಗೆ ಅವರೇ ಸಪೋರ್ಟ್​ ಮಾಡುತ್ತಾರೆ ಎಂದಿದ್ದಾರೆ. ಇನ್ನು ಈ ಸೀರಿಯಲ್​ನಲ್ಲಿ ಉಮಾಶ್ರೀಯಂಥ ಹಿರಿಯ ನಟಿಯ ಜೊತೆ ನಟಿಸುವ ಭಾಗ್ಯ ತಮಗೆ ಲಭಿಸಿದ್ದು, ಪುಣ್ಯ ಎನ್ನುವ ಅಕ್ಷರಾ ಅವರ, ಯಾವುದೇ ತಪ್ಪುಗಳು ಸಂಭವಿಸಿದರೂ ಅಲ್ಲಿ ಅದನ್ನು ಸರಿಪಡಿಸಿ ಉತ್ತಮವಾಗಿ ನಟಿಸಲು ಸಲಹೆಗಳನ್ನು ನೀಡುತ್ತಾರೆ ಎನ್ನುತ್ತಾರೆ.

ಪುಟ್ಟಕ್ಕನ ಮಕ್ಕಳು ಸಹನಾ, ಡಾನ್ಸ್​ ಕರ್ನಾಟಕ ಡಾನ್ಸ್​ ಷೋದಿಂದ ಹೊರ ಬಂದ ಕಾರಣವೇ ಬೇರೆ! ಸತ್ಯ ತಿಳಿಸಿದ ನಟಿ

YouTube video player