"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯ ಕಂಠಿ ಪಾತ್ರಧಾರಿ ಧನುಷ್‌ಗೆ ಹುಟ್ಟುಹಬ್ಬದ ಸಂಭ್ರಮ. ಯುವತಿಯರ ಕ್ರಶ್‌ ಆಗಿರುವ ಧನುಷ್, ಕೋಲಾರದವರಾಗಿದ್ದು, ಎಂಜಿನಿಯರಿಂಗ್ ಪದವೀಧರರು. ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿರುವ ಧನುಷ್, ಮಂಡ್ಯ ಭಾಷೆಯನ್ನು ಸುಲಭವಾಗಿ ಅಳವಡಿಸಿಕೊಂಡಿದ್ದಾರೆ. ಸೆಟ್‌ನಲ್ಲಿ ಕಲಾವಿದರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.

ಕಂಠಿ ಎಂದರೆ ಸಾಕು... ಎಲ್ಲರ ಕಣ್ಣೆದುರಿಗೆ ಬರುವುದು ಪುಟ್ಟಕ್ಕನ ಮಕ್ಕಳು ಸೀರಿಯಲ್​ ನಾಯಕ. ಸ್ನೇಹಾಳ ಪ್ರೇಮಿಯಾಗಿ, ಪತಿಯಾಗಿ, ಪುಟ್ಟಕ್ಕನ ಅಳಿಯನಾಗಿ ಎಲ್ಲಕ್ಕಿಂತಲೂ ಮಿಗಿಲಾಗಿ ಬಂಗಾರಮ್ಮನ ಮಗನಾಗಿ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸುತ್ತಾ ಇರುವ ಕಂಠಿಯನ್ನು ಕಂಡರೆ ಸೀರಿಯಲ್​ ಪ್ರಿಯರಿಗಂತೂ ಸಿಕ್ಕಾಪಟ್ಟೆ ಪ್ರೀತಿ. ಇದೀಗ ಪತ್ನಿ ಸ್ನೇಹಾಳನ್ನು ಕಳೆದುಕೊಂಡು ದುಃಖಿತನಾಗಿರುವ ಕಂಠಿ ಇದೀಗ ಮತ್ತೆ ರೌಡಿಯಾಗಿದ್ದಾನೆ. ಹೀಗೆ ಹಲವಾರು ಪಾತ್ರಗಳಿಗೆ ಜೀವ ತುಂಬುತ್ತಿರುವ ಕಂಠಿಯ ಮೇಲೆ ಯುವತಿಯರಿಗೆ ಸಿಕ್ಕಾಪಟ್ಟೆ ಕ್ರಶ್​. ಕಂಠಿ ಎಲ್ಲಿ ಹೋದರೂ ಯುವತಿಯರು ಮುತ್ತಿಕೊಳ್ಳುವುದನ್ನು ನೋಡಿದರೆ ಇವರ ಮೇಲೆ ಎಷ್ಟು ಕ್ರಶ್​ ಇದೆ ಎನ್ನುವುದು ತಿಳಿಯುತ್ತದೆ.

ಅಂದಹಾಗೆ, ಎಲ್ಲರ ಮನಸ್ಸನ್ನು ಗೆದ್ದು, ಕದ್ದಿರುವ ಕಂಠಿಯ ನಿಜವಾದ ಹೆಸರು ಧನುಷ್​. ಇಂದು (ಫೆ.18) ಧನುಷ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಪುಟ್ಟಕ್ಕನ ಮಕ್ಕಳು ಸೆಟ್​ನಲ್ಲಿ ಧನುಷ್​ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ಅದರ ವಿಡಿಯೋ ಅನ್ನು ಡಿವಿ ಡ್ರೀಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಸೆಟ್​ನಲ್ಲಿ ಕಲಾವಿದರ ಜೊತೆ ಕೇಕ್​ ಕಟ್​ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಧನುಷ್​. 

ಬಾವಿಯ ತಣ್ಣೀರು ಮೈಮೇಲೆ ಸುರಿದುಕೊಳ್ಳುವಾಗ ಬಿಸಿಯಾಗೋದು ಹೇಗೆ? ಶೂಟಿಂಗ್​ನಲ್ಲಿ ಏನೇನಾಗತ್ತೆ ನೋಡಿ!

ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡದ್ದ ಧನುಶ್ ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಆ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದಾಗಲೇ ಧನುಷ್​ ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ನಟಿಸುವುದಕ್ಕೂ ಮುನ್ನ ಇವರು ಧನುಷ್‌, 'ಅನಿರೀಕ್ಷಿತ', '18+2' ಕಿರುಚಿತ್ರಗಳನ್ನು, 'ನನ್ನ ನಗು' ಹಾಡಿನ ಆಲ್ಬಂ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು. ಕೋಲಾರ ಜಿಲ್ಲೆಯ ಸಂತೆಹಳ್ಳಿ ಇವರ ಊರು. ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು. ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕಿದವರು ಇವರು.

 ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಮಂಡ್ಯದ ಭಾಷೆಯನ್ನೇ ಬಳಸಲಾಗುತ್ತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಧನುಷ್​ ಅವರು ತಮ್ಮದು ಕೋಲಾರವಾದ್ದರಿಂದ ಇಲ್ಲಿಯ ಭಾಷೆಗೂ ಮಂಡ್ಯ ಭಾಷೆಗೂ ಸಾಮ್ಯತೆ ಇದೆ. ಆದ್ದರಿಂದ ಸೀರಿಯಲ್​ನಲ್ಲಿ ಮಂಡ್ಯದ ಭಾಷೆ ಬಳಸುವುದು ಕಷ್ಟವಾಗಲಿಲ್ಲ ಎಂದಿದ್ದಾರೆ. ಇದೀಗ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅಂದಹಾಗೆ ಇವರು ಸಿವಿಲ್​ ಎಂಜಿನಿಯರಿಂಗ್​ ಮುಗಿಸಿದ್ದಾರೆ. 

ಸ್ನೇಹಾ ಸತ್ತ ವಿಷ್ಯ ಕೇಳಿ ಶಾಕ್​ನಿಂದ ಬಿದ್ದ ಬಂಗಾರಮ್ಮನಿಗೆ ಶೂಟಿಂಗ್​ ವೇಳೆ ಆಗಿದ್ದೇನು? ವಿಡಿಯೋ ವೈರಲ್​

YouTube video player