Asianet Suvarna News Asianet Suvarna News

ಅಲ್ಲಿ ಜೈಲುಪಾಲಾಗಿದ್ರೆ ಇಲ್ಲಿ ಡ್ಯಾನ್ಸ್​ ಮಾಡ್ತಿದ್ದೀರಾ? 'ಪುಟ್ಟಕ್ಕನ ಮಕ್ಕಳು' ವಿಲನ್ಸ್​ಗೆ ಕಾಲೆಳೆದ ನೆಟ್ಟಿಗರು

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಲನ್ಸ್​ ರಾಜೇಶ್ವರಿ ಮತ್ತು ಕಾಳಿ ಅಕ್ಕ-ಅಮ್ಮ ಚಂದನ್​ ಶೆಟ್ಟಿಯವರ ಚೂ ಮಂತರ್​ ಹಾಡಿಗೆ ಸಕತ್ ಸ್ಟೆಪ್​ ಮಾಡಿದ್ದರೆ, ಫ್ಯಾನ್ಸ್​ ಇವರ ಕಾಲೆಯುತ್ತಿದ್ದಾರೆ. 
 

Puttakka Makkalu Serial  villians Rajeshwari and Kali reels fans react suc
Author
First Published Oct 1, 2023, 12:02 PM IST

ಟಿಆರ್​ಪಿಯಲ್ಲಿ ಟಾಪ್​ ಸ್ಥಾನವನ್ನು ಕಾಯ್ದುಕೊಂಡು ಬಂದಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಪುಟ್ಟಕ್ಕನ ಮೆಸ್​ಗೆ ಬೆಂಕಿ ಹಾಕಿದ್ದು ಕಂಠಿಯ ಅಮ್ಮ ಬಂಗಾರಮ್ಮ ಎನ್ನುವ ಆರೋಪದಿಂದ ಆಕೆ ಮುಕ್ತಳಾಗಿದ್ದಾಳೆ. ಪೊಲೀಸಪ್ಪನ ಬಾಯಿ ಬಿಡಿಸಿರೋ ಕಂಠಿಯಿಂದ ಮೆಸ್ಸಿಗೆ ಬೆಂಕಿ ಹಾಕಿದ್ದು ವಿಲನ್​ ಆಗಿರೋ ಕಾಳಿ ಎಂದು ಗೊತ್ತಾಗಿದ್ದು, ಆತನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ. ಪುಟ್ಟಕ್ಕನ ಮೆಸ್​ಗೆ ಬೆಂಕಿ ಬಿದ್ದಿದ್ದರಿಂದ ಖುಷಿಯಿಂದ ಕುಣಿದಾಡುತ್ತಿದ್ದ ಆಕೆಯ ಸವತಿ ರಾಜೇಶ್ವರಿಗೆ ತನ್ನ ತಮ್ಮದೇ ಬೆಂಕಿ ಹಾಕಿದ್ದು ಎಂದು ಕೇಳಿ ಶಾಕ್​ ಆಗಿದೆ. ತಮ್ಮನನ್ನು ಪೊಲೀಸರು ಕರೆದುಕೊಂಡು ಹೋಗಿದ್ದನ್ನು ಜೀರ್ಣಿಸಿಕೊಳ್ಳಲಾಗದೇ ಕೊತ ಕೊತ ಕುದಿಯುತ್ತಿದ್ದಾಳೆ ಆಕೆ. ಅದೇ ಇನ್ನೊಂದೆಡೆ ಗಂಡನನ್ನು ಕಂಡರೆ ಉರಿದು ಬೀಳುತ್ತಿದ್ದ ಸ್ನೇಹಾಗೆ ಕಂಠಿಯ ಮೇಲೆ ಪ್ರೀತಿ ಚಿಗುರೊಡೆಯುತ್ತಿದೆ. ಹಾವು-ಮುಂಗುಸಿಯಂತಿರೋ ಬಂಗಾರಮ್ಮ ಮತ್ತು ಸ್ನೇಹಾ ಅತ್ತೆ-ಸೊಸೆ ಹತ್ತಿರವಾಗುವ ಕಾಲವೂ ಹತ್ತಿರ ಬರುತ್ತಿದೆ. ಧಾರಾವಾಹಿಯಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗ ಇತ್ತ ಇದರ ಪಾತ್ರಧಾರಿಗಳು ಶೂಟಿಂಗ್ ಮಧ್ಯೆಯೇ ಸಕತ್​ ರೀಲ್ಸ್​ ಮಾಡಿ ಎಂಜಾಯ್​ ಮಾಡುತ್ತಿದ್ದಾರೆ.

ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap). 

ರಾಣಿಯ ರೂಪದಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ: ವಿಡಿಯೋ ನೋಡಿ ನೀವೇ ಶೀರ್ಷಿಕೆ ಕೊಡಿ ಎಂದ ನಟಿ

ಅದೇ ಇನ್ನೊಂದೆಡೆ, ಪುಟ್ಟಕ್ಕನ ದೊಡ್ಡ ಮಗಳ ಮೇಲೆ ಕಣ್ಣು ಹಾಕಿ, ಆಕೆಯ ಮದುವೆ ಬೇರೆ ಕಡೆ ಆಯಿತೆಂದು ಸಿಟ್ಟಿನಿಂದ ಮೆಸ್ಸಿಗೇ ಬೆಂಕಿ ಇಟ್ಟು ಜೈಲುಪಾಲಾಗಿರೋ ಕಾಳಿಯ ನಿಜವಾದ ಹೆಸರು ಅನಿರಿಶ್​. ಈ ಧಾರಾವಾಹಿಯಲ್ಲಿ ರಾಜೇಶ್ವರಿ ಹಾಗೂ ಅನಿರಿಶ್​ ಅವರದ್ದು ಅಕ್ಕ-ತಮ್ಮನ ಪಾತ್ರ. ಇದೀಗ ಈ ಅಕ್ಕ-ತಮ್ಮ ಸೇರಿ ಸಕತ್​ ರೀಲ್ಸ್​ ಮಾಡಿದ್ದಾರೆ. ಸಿನಿಮಾ ನಿರ್ದೇಶಕ ಚಂದನ್​  ಶೆಟ್ಟಿ ಅವರ ಚೂ ಮಂತರ್ ಹಾಡಿಗೆ ಇವರಿಬ್ಬರಿಗೂ ರೀಲ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿದೆ.

ಕೆಲವರು   ಧಾರಾವಾಹಿಯ ಅಕ್ಕ-ತಮ್ಮನಿಗೆ ಕಾಲೆಳೆಯುತ್ತಿದ್ದಾರೆ. ಕಾಳಿ ಜೈಲು ಪಾಲಾಗಿದ್ದು, ಅಕ್ಕ ನೋವಿನಿಂದ ಇರಬೇಕು. ಇಲ್ಲಿ ನೋಡಿದ್ರೆ ಇಬ್ಬರೂ ಸೇರಿ ಡ್ಯಾನ್ಸ್​ ಮಾಡ್ತಾ ಇದ್ದೀರಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ನಿಮ್ಮಿಬ್ಬರ ಪಾತ್ರ, ಆ್ಯಕ್ಟಿಂಗ್​ ಸೂಪರೋ ಸೂಪರ್​ ಎನ್ನುತ್ತಿದ್ದಾರೆ. ಖಳನಾಯಕ- ನಾಯಕಿಯಾಗಿ ಸಕತ್​ ಪಾತ್ರ ಮಾಡಿರುವಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಬಾಕ್ಸಿಂಗ್​ ಪಟು ಪುಟ್ಟಕ್ಕನ ಮಕ್ಕಳು ವಿಲನ್​ ರಾಜೇಶ್ವರಿ: ಪಂಚ್​ ನೋಡಿ ಉಫ್​ ಎಂದ ಫ್ಯಾನ್ಸ್​!

 

Follow Us:
Download App:
  • android
  • ios