Asianet Suvarna News Asianet Suvarna News

ರಾಣಿಯ ರೂಪದಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ: ವಿಡಿಯೋ ನೋಡಿ ನೀವೇ ಶೀರ್ಷಿಕೆ ಕೊಡಿ ಎಂದ ನಟಿ

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಮೂಲಕ ಮನೆಮಾತಾಗಿರುವ ನಟಿ ಸಂಜನಾ ಬುರ್ಲಿಯವರ ರಾಣಿಯ ಈ ವಿಡಿಯೋ ನೋಡಿ ಏನಂತೀರಾ?
 

Puttakkana Makkalu serial fame Sneha Burli in Ranis attire suc
Author
First Published Sep 23, 2023, 5:09 PM IST

ಕಿರುತೆರೆಯ ಮೂಲಕ ಮನೆಮಂದಿಗೆ ಹತ್ತಿರವಾಗುವ ಕೆಲ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಅಂಥವರಲ್ಲಿ ಒಬ್ಬರು ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್​ ಖ್ಯಾತಿಯ ಸ್ನೇಹಾ. ಸ್ನೇಹಾ ಅವರ ಅಸಲಿ ಹೆಸರು ಸಂಜನಾ  ಬುರ್ಲಿ. ಈ ಧಾರಾವಾಹಿಯಲ್ಲಿ ಹೈಲೈಟ್​ ಆಗಿರೋದು ಪುಟ್ಟಕ್ಕನ ಮೂವರು ಹೆಣ್ಣುಮಕ್ಕಳು. ಅದರಲ್ಲಿ ಸ್ನೇಹಾ ನಾಯಕಿಯೇ. ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಈಕೆ. ಧಾರಾವಾಹಿಯಲ್ಲಿನ ಸಂಜನಾ ಅವರ ಪಾತ್ರ ಎಷ್ಟೋ ಮಂದಿಗೆ ಮಾದರಿಯಾಗಿದೆ.  ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇಂತಿಪ್ಪ ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಇತ್ತೀಚೆಗೆ ಅವರು, ಜೈಲರ್​ ಚಿತ್ರದ ಕಾವಾಲಯ್ಯ ಹಾಡಿಗೆ  ಡ್ಯಾನ್ಸ್​ ಮಾಡಿದ್ದು, ಅದರನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು.  ಮಿನಿ ಸ್ಕರ್ಟ್​ (Mini skirt) ಧರಿಸಿ ಅವರು ಸಕತ್​ ಸ್ಟೆಪ್​ ಹಾಕಿದ್ದಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತ್ತು. ಇದೇ ರೀತಿ ಹಲವಾರು ವಿಡಿಯೋ, ಫೋಟೋಗಳನ್ನು ಅವರು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. 

ಸ್ನೇಹಾ  ಮತ್ತು ಕಂಠಿಯ ನಡುವಿನ ಸ್ನೇಹ ಇನ್ನಷ್ಟು ಗಟ್ಟಿಯಾಗಿದ್ದು, ಇವರ ದಾಂಪತ್ಯ ಜೀವನದ ಹಾದಿಯೂ ಸುಗಮವಾಗುವ ಸನ್ನಿವೇಶ ಹತ್ತಿರವಾಗಿದೆ. ಇದಾಗಲೇ ಸಂಜನಾ ಧಾರಾವಾಹಿಯಲ್ಲಿ ಮದುಮಗಳಾಗಿ ಮಿಂಚಿದ್ದಾರೆ. ಇದೀಗ ನಟಿ ರಾಣಿಯಂತೆ ವೇಷ ಧರಿಸಿಕೊಂಡು ಸಕತ್​ ಕ್ಯೂಟ್​ ಆಗಿ ಕಾಣಿಸುತ್ತಿದ್ದಾರೆ. ರಾಣಿಯ ಪಾತ್ರದಂತೆಯೇ ಸಂಪೂರ್ಣ ಡ್ರೆಸ್​ಅಪ್​ ಆಗಿರೋ ಸಂಜನಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದರ ವಿಡಿಯೋ  ಶೇರ್​ ಮಾಡಿಕೊಂಡಿದ್ದಾರೆ. ತಾವು ಹೇಗೆ ಕಾಣಿಸುತ್ತಿದ್ದೇವೆ ಎಂದು ಹೇಳುವಂತೆ ಅವರು ಕೇಳಿಕೊಂಡಿದ್ದಾರೆ. ಇದಕ್ಕೆ ಸಹಸ್ರಾರು ಮಂದಿ ಕ್ಯೂಟ್​ ಎಂದು ಕಮೆಂಟ್​  ಮಾಡುತ್ತಿದ್ದಾರೆ. ಹಾರ್ಟ್​ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ. 

'ಬಾದಲ್​ ಬರ್ಸಾ'ಗೆ ಪುಟ್ಟಕ್ಕನ ಮಕ್ಕಳ ಸೂಪರ್​ ಡ್ಯಾನ್ಸ್​: ಮೆಸ್​ ಸುಟ್ಟೋದ್ರೂ ಹೀಗ್​ ಮಾಡೋದಾ ಅಂದ ಫ್ಯಾನ್ಸ್

ಇನ್ನು ಸಂಜನಾ ಅವರ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಿರುವ ಕುರಿತು ಹೇಳುವುದಾದರೆ, ಈ ಹಿಂದೆ ಅವರೇ ಸಂದರ್ಶನವೊಂದರಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದರು. ಇವರ ಮೊದಲ ಧಾರಾವಾಹಿ  'ಲಗ್ನಪತ್ರಿಕೆ'. ಕಾರಾಣಾಂತರಗಳಿಂದ  ಪ್ರಸಾರ ನಿಲ್ಲಿಸಿತ್ತು. ನಂತರ ಧಾರಾವಾಹಿಯ ಉಸಾಬರಿ ಬೇಡ ಎಂದು  ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟಿದ್ದರು ನಟಿ.  ಆರೂರು ಜಗದೀಶ್‌ ಅವರು  'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದ್ದರೂ ಸ್ನೇಹಾ ಅದಕ್ಕೆ ಒಪ್ಪಿರಲಿಲ್ಲ. ಕೊರೋನಾ ಮುಗಿದು  ಕಾಲೇಜು ಶುರುವಾಗಿದ್ದರಿಂದ ವಿದ್ಯಾಭ್ಯಾಸಕ್ಕೆ ಕಷ್ಟ ಆಗುತ್ತೆ ಎಂದು ಬೇಡ ಎಂದರು. ನಂತರ ಪುನಃ ಕೊರೋನಾದಿಂದ ಆನ್​ಲೈನ್​ ತರಗತಿ ಶುರುವಾದ ಕಾರಣ, ಈ ಧಾರಾವಾಹಿಗೆ ಅವರು ಒಪ್ಪಿದರು.  ನಟನೆ ಮತ್ತು ಓದನ್ನು ಬ್ಯಾಲೆನ್ಸ್‌ ಮಾಡಬಹುದು ಎಂದು ಧೈರ್ಯ ಮಾಡದೇ ಹೋಗಿದ್ದರೆ ಪಾತ್ರದ ಯಶಸ್ಸನ್ನು ನಾನು ಕಳೆದುಕೊಳ್ಳುತ್ತಿದ್ದೆ ಎನ್ನುತ್ತಾರೆ ಸಂಜನಾ. 

ಇನ್ನು ಈ ಧಾರಾವಾಹಿ ಕುರಿತು ಹೇಳುವುದಾದರೆ, ಝೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಸದಾ ಟಿಆರ್​ಪಿಯಲ್ಲಿ ಟಾಪ್​ಮೋಸ್ಟ್​ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ  ಸಹನಾ,  ಸ್ನೇಹಾ ಮತ್ತು  ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್​ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ. 

ಪುಟ್ಟಕ್ಕನ ಮಗಳು ಸ್ನೇಹಾಳ ಮದುವೆ ಶೂಟಿಂಗ್​ ಹೀಗಿತ್ತು ನೋಡಿ: ಪ್ಲೀಸ್​ ಇಬ್ರೂ ಒಂದಾಗಿ ಅಂತಿದ್ದಾರೆ ಫ್ಯಾನ್ಸ್​

Follow Us:
Download App:
  • android
  • ios