ಖ್ಯಾತ ಹಾಸ್ಯ ಕಲಾವಿದೆ ಇಂದುಶ್ರೀಗೆ ಸೀಮಂತ; ಕೋಕಿಲಾ ಅಜ್ಜಿಗೆ ಬರ್ತಿದೆ ಮರಿಮಗು!
ಗೊಂಬೆಗಳನ್ನು ಮಾತಾಡಿಸುವ ವೆಂಟ್ರಿಲೋಕ್ವಿಸ್ಟ್ ಕಲಾವಿದೆ ಇಂದುಶ್ರೀ ರವೀಂದ್ರಗೆ ಸೀಮಂತ ಸಂಭ್ರಮ. ಈ ಸಮಯದಲ್ಲಿ ಅಜ್ಜಿ ಹಾಗೂ ಅಜ್ಜ ಇಂದುಗೆ ಹೇಳಿದ್ದೇನು ಕೇಳಿ..
ಮಾತನಾಡೋ ಗೊಂಬೆಗಳ ಜೊತೆಗೆ ಇಡಿ ಜಗತ್ತನ್ನೇ ಸುತ್ತಿರುವ ಇಂದುಶ್ರೀ ರವೀಂದ್ರ, ತಮ್ಮ ವಿಶಿಷ್ಠ ಕಲೆಗೆ ವಿಪರೀತ ಫೇಮಸ್. ಭಾರತದ ಏಕೈಕ ಮಹಿಳಾ ವೆಂಟ್ರಿಲೋಕ್ವಿಸ್ಟ್(ಧ್ವನಿಮಾಯೆ) ಎಂಬ ಹೆಗ್ಗಳಿಕೆ ಪಡೆದಿರುವ ಇಂದುಗೆ ಸೀಮಂತ ಸಂಭ್ರಮ.
ಹೊಸ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ ಇಂದುಶ್ರೀ ಹಾಗೂ ರವೀಂದ್ರ ದಂಪತಿ. ಇಂದುಶ್ರೀ ಸೀಮಂತದಲ್ಲಿ ಕುಟುಂಬ ಸದಸ್ಯರಷ್ಟೇ ಸಂಭ್ರಮದಲ್ಲಿದ್ದವರು ಅವರ ಕೋಕಿಲ ಅಜ್ಜಿ ಹಾಗೂ ತಾತ ಗೊಂಬೆಗಳು. ಇಂದುಶ್ರೀ ತಮ್ಮ ಸೀಮಂತದಲ್ಲೂ ಧ್ವನಿಮಾಯೆಯ ಹಾಸ್ಯ ಮೆರೆದಿದ್ದು, ಕೋಕಿಲ ಅಜ್ಜಿ ಮತ್ತು ತಾತ ಗೊಂಬೆಗಳು ಗರ್ಭಿಣಿ ಇಂದುವನ್ನು ಮಜವಾಗಿ ಮಾತನಾಡಿಸಿವೆ.
ದಕ್ಷಿಣ ಕೊರಿಯಾ ಮಹಿಳೆಯರಿಗೆ ಮಕ್ಕಳು ಬೇಡವಂತೆ! ಇದೇ ಸ್ಥಿತಿ ಭಾರತದಲ್ಲಿ ಬಂದರೂ ಅಚ್ಚರಿ ಇಲ್ಲ
ತಾತ ಇಂದು ಬಳಿ ಅಚ್ಚರಿಯ ಪ್ರಶ್ನೆಯೊಂದನ್ನು ಕೇಳಿದ್ದಾರೆ, 'ಏನಮ್ಮಾ ಮಗು ಹುಟ್ಟಿದ್ಮೇಲೆ ತಿರ್ಗಾ ಹೊಟ್ಟೆಯೊಳಗೆ ಹಾಕ್ಕೊಂಡು ಹೋಗಲ್ವಾ ನೀನು' ಎಂದು ತಮ್ಮ ಡೌಟ್ ಬಿಚ್ಚಿಟ್ಟಿದ್ದಾರೆ.
'ಇದೇನ್ ತಾತ, ಯಾರ್ ತಾನೇ ಹುಟ್ಟಿದ ಮಗುನ್ನ ವಾಪಸ್ ಹೊಟ್ಟೆಗೆ ಹಾಕಿಕೊಳ್ತಾರೆ' ಅಂದಿದ್ದಕ್ಕೆ ಘಾಟಿ ತಾತ, 'ಪ್ರೋಗ್ರಾಂ ಮುಗುದ್ಮೇಲೆ ಎಲ್ಲ ಗೊಂಬೆಗಳನ್ನು ಡಬ್ಬದಲ್ಲಿ ಹಾಕಿಕೊಂಡು ಹೋಗೋ ತರಾ ಮಗುನ್ನೂ ಹಾಕಿಕೊಳ್ತ್ಯೇನೋ ಅನ್ಕೊಂಡೆ' ಅಂತಾರೆ!
ತಾತನ ಈ ಪ್ರಶ್ನೆ ಸಮಂಜಸವಾಗೇ ಇದೆ ಎಂದು ಕೆಲ ಅಭಿಮಾನಿಗಳು ಇಂದುವಿನ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೋಕಿಲ ಅಜ್ಜಿಯಂತೂ ಮೊದಲೇ ನಾಟಿ. ಒಂದೇ ಒಂದು ಮಗುಗೆ ಸುಸ್ತಾಗ್ ಹೋಗಿರೋ ಇಂದು ಕಂಡು, 'ನನ್ನ ನೋಡು, ಅಮೇಜಾನ್ ಡೆಲಿವರಿ ಬಂದಂಗೆ 24 ಮಕ್ಕಳು ಬಂದಿದ್ವು ಗೊತ್ತಾ' ಎನ್ನುತ್ತಾಳೆ ಅಜ್ಜಿ. ಅಷ್ಟೇ ಅಲ್ಲ, ನಿಂಗಿನ್ನೂ 23 ಮಕ್ಳಾಗ್ಲಿ ಎಂದು ಆಶೀರ್ವಾದವನ್ನೂ ಮಾಡ್ತಾಳೆ. ಈ ವಿಡಿಯೋ ನೋಡಿದ ಜನರು ನಗುತ್ತಲೇ ಇಂದುಶ್ರೀಗೆ ಅಭಿನಂದನೆ ಹೇಳ್ತಿದಾರೆ. ಪುಟಾಣಿ ಡಿಂಕು ಆರಾಮಾಗಿ ಬರ್ಲಿ ಅಂತ ಹಾರೈಸ್ತಿದಾರೆ.