ದಕ್ಷಿಣ ಕೊರಿಯಾವು ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿದೆ ಮತ್ತು ಅದು ಕುಸಿಯುತ್ತಲೇ ಇದೆ. ಇದಕ್ಕೆ ಇಲ್ಲಿನ ಬಹುತೇಕ ಮಹಿಳೆಯರು ಮಕ್ಕಳು ಬೇಡ ಎಂದು ನಿರ್ಧರಿಸುತ್ತಿರುವುದು ಕಾರಣ. ಇಷ್ಟಕ್ಕೂ ಇವರಿಗೇಕೆ ತಾಯ್ತನ ಬೇಡ?

ದಕ್ಷಿಣಾ ಕೊರಿಯಾದ ಮಹಿಳೆಯರು ಹೆಚ್ಚಾಗಿ ಮಕ್ಕಳು ಮುಕ್ತ ಜೀವನದತ್ತ ಹೊರಳುತ್ತಿದ್ದಾರೆ. ಡೈನಾಸರ್‌ನಂತೆ ತಮ್ಮ ಜೀವನವೂ ಅಳಿದು ಹೋಗಿಬಿಡಬಹುದು ಎಂದು ಅಂಜುತ್ತಲೇ ಮಕ್ಕಳು ಬೇಡ ಎಂಬ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಬಹಳ ಮುಂದುವರಿದ ರಾಷ್ಟ್ರ ದಕ್ಷಿಣ ಕೊರಿಯಾ. ಅಲ್ಲಿ ಎಲ್ಲವೂ ಇದೆ. ಮಹಿಳೆಯರು ಉತ್ತಮ ಶಿಕ್ಷಣ, ಉದ್ಯೋಗ ಹೊಂದುತ್ತಿದ್ದಾರೆ. ಆದರೆ, ದಕ್ಷಿಣ ಕೊರಿಯಾವು ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿದೆ ಮತ್ತು ಅದು ಕುಸಿಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ತನ್ನದೇ ಆದ ದಾಖಲೆಯನ್ನು ಸೋಲಿಸುತ್ತದೆ. ಈ ಪ್ರವೃತ್ತಿ ಮುಂದುವರಿದರೆ, ಕೊರಿಯಾದ ಜನಸಂಖ್ಯೆಯು 2100 ರ ವೇಳೆಗೆ ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.

'ರಾಷ್ಟ್ರೀಯ ತುರ್ತು ಪರಿಸ್ಥಿತಿ'
ಜಾಗತಿಕವಾಗಿ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನನ ದರಗಳು ಕಡಿಮೆಯಾಗುತ್ತಿವೆ, ಆದರೆ ದಕ್ಷಿಣ ಕೊರಿಯಾದಂತಹ ವಿಪರೀತ ರೀತಿಯಲ್ಲಿ ಯಾವ ದೇಶವೂ ಇಲ್ಲ. 50 ವರ್ಷಗಳಲ್ಲಿ, ದುಡಿಯುವ ವಯಸ್ಸಿನ ಜನರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ, ದೇಶದ ಕಡ್ಡಾಯ ಮಿಲಿಟರಿ ಸೇವೆಯಲ್ಲಿ ಭಾಗವಹಿಸಲು ಅರ್ಹತೆ ಹೊಂದಿರುವ ಜನಸಂಖ್ಯೆ 58% ರಷ್ಟು ಕುಗ್ಗುತ್ತದೆ ಮತ್ತು ಸುಮಾರು ಅರ್ಧದಷ್ಟು ಜನಸಂಖ್ಯೆಯು 65ಕ್ಕಿಂತ ಹೆಚ್ಚು ವಯಸ್ಸಾಗಿರುತ್ತದೆ. ಇದು ದೇಶದ ಆರ್ಥಿಕತೆ ಮತ್ತು ಭದ್ರತೆಗೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತೆಂದರೆ, ರಾಜಕಾರಣಿಗಳು ಇದನ್ನು 'ರಾಷ್ಟ್ರೀಯ ತುರ್ತುಸ್ಥಿತಿ' ಎಂದು ಘೋಷಿಸಿದ್ದಾರೆ.

14 ವರ್ಷಕ್ಕೇ ಬಾಲಿವುಡ್‌ಗೆ ಬಂದು ಸಲ್ಮಾನ್ ಜೊತೆ ಹಿಟ್ ಚಿತ್ರ ಕೊಟ್ಟ ಈ ನಟಿ, ಪ್ರೀತಿಗಾಗಿ ನಟನೆ, ಧರ್ಮ ಬಿಟ್ಳು, ಈಗ ಹೇಗಿದಾಳೆ?

ಇಷ್ಟಕ್ಕೂ ದಕ್ಷಿಣ ಕೊರಿಯಾದ ಮೇಣದ ಸುಂದರಿಯರೇಕೆ ತಾಯ್ತನವನ್ನು ತೊರೆಯುತ್ತಿದ್ದಾರೆ? ಪ್ರಾಕೃತಿಕ ಭಾವನೆಗಳನ್ನು ಹತ್ತಿಕ್ಕುತ್ತಿದ್ದಾರೆ?

ಕೆಲಸ ಹಂಚಿಕೊಳ್ಳದ ಗಂಡಸರು
ಕೊರಿಯಾದಲ್ಲಿ ಡೇಟಿಂಗ್ ಮಾಡಬಹುದಾದ ವ್ಯಕ್ತಿಯನ್ನು ಕಂಡುಹಿಡಿಯುವುದು ಕಷ್ಟ - ಮನೆಗೆಲಸ ಮತ್ತು ಮಗುವಿನ ಆರೈಕೆಯನ್ನು ಸಮಾನವಾಗಿ ಹಂಚಿಕೊಳ್ಳುವವನು ಸಿಗುವುದಿಲ್ಲ ಎನ್ನುತ್ತಾರೆ ಮಹಿಳೆಯರು. ತಾವೊಬ್ಬರೇ ಮನೆ, ಮಕ್ಕಳು, ಕಚೇರಿ ಎಲ್ಲವನ್ನೂ ನಿಭಾಯಿಸಲಾಗುವುದಿಲ್ಲ ಎಂಬುದು ಅವರ ಅಳಲು. 

ಉದ್ಯೋಗವಿಲ್ಲದಿದ್ದರೆ ಕಷ್ಟ
ಹಾಗಂಥ ಕಚೇರಿ ಕೆಲಸ ಬಿಡುವಷ್ಟು ಸುಲಭವಿಲ್ಲ. ಅಲ್ಲಿನ ಜೀವನಶೈಲಿ ವೆಚ್ಚ ಎಷ್ಟು ದುಬಾರಿ ಎಂದರೆ ಮಹಿಳೆಯರು ಕೆಲಸ ಬಿಡುವುದೆಂದರೆ ಅದೊಂದು ದುಸ್ವಪ್ನದಂತೆ ಬೆದರುತ್ತಾರೆ. ಆದರೆ, ಕೆಲಸದ ಸಮಯವೂ ಕೊರಿಯಾದಲ್ಲಿ ಧೀರ್ಘ. 9-5 ಕೆಲಸ ಎಂದರೂ ಸಮಯ ಮುಗಿದ ಮೇಲೂ 2-3 ಗಂಟೆ ಉದ್ಯೋಗದ ಸಮಯ ಎಳೆಯಲಾಗುತ್ತದೆ. ಅಂಥದರಲ್ಲಿ ಮಕ್ಕಳನ್ನು ಮಾಡಿಕೊಂಡರೆ ಅವರಿಗಾಗಿ ಸಮಯ ಕೊಡಲಾಗುವುದಿಲ್ಲ ಎಂಬುದು ಮಹಿಳೆಯರ ಅಳಲು. 

ಪಿಂಕ್ ಸೀರೆಯಲ್ಲಿ ರಾಧಿಕಾ ರೀಲ್ಸ್; ವಯಸ್ಸೇ ಆಗದ ಬ್ಯೂಟಿ ನಮ್ಮ ಸ್ಯಾಂಡಲ್‌ವುಡ್ ಸ್ವೀಟಿ ಅಂದ್ರು ಫ್ಯಾನ್ಸ್

ಕೊರಿಯನ್ ಮನಸ್ಥಿತಿ
ನೀವು ನಿರಂತರವಾಗಿ ಸ್ವಯಂ-ಸುಧಾರಣೆಗಾಗಿ ಕೆಲಸ ಮಾಡದಿದ್ದರೆ, ನೀವು ಹಿಂದೆ ಉಳಿಯುತ್ತೀರಿ ಮತ್ತು ವೈಫಲ್ಯ ಅನುಭವಿಸುತ್ತೀರಿ ಎಂಬ ಮನಸ್ಥಿತಿ ಎಲ್ಲ ಕೊರಿಯನ್ನರಲ್ಲಿದೆ. ಈ ಭಯ ಹತ್ತಿಕ್ಕಲೋಸುಗವೇ ಕೊರಿಯನ್ನರು ಸಿಕ್ಕ ಸಮಯದಲ್ಲಿ ಅಧ್ಯಯನ ಮಾಡುವುದು, ಕೆಲಸಕ್ಕಾಗಿ ಮತ್ತಷ್ಟು ಉತ್ತಮಗೊಳ್ಳುವ ಕೋರ್ಸ್ ಮಾಡುವುದು ಹೀಗೆ ಬ್ಯುಸಿಯಾಗುತ್ತಾರೆ. ಮಗುವನ್ನು ಹೊಂದಲು ಸಮಯ ತೆಗೆದುಕೊಂಡರೆ, ಕೆಲಸಕ್ಕೆ ಮರಳಲು ಸಾಧ್ಯವಾಗುವುದಿಲ್ಲ ಎಂಬ ಭಯ ಮಗುವೇ ಬೇಡ ಎಂಬ ನಿರ್ಧಾರಕ್ಕೆ ಮಹಿಳೆಯರನ್ನು ತಳ್ಳುತ್ತಿದೆ. 

ಕಂಪನಿಗಳಿಂದ ಒತ್ತಡ
'ನಾವು ಮಕ್ಕಳನ್ನು ಹೊಂದಿರುವಾಗ, ನಾವು ನಮ್ಮ ಕೆಲಸವನ್ನು ಬಿಡಬೇಕು ಎಂದು ಕಂಪನಿಗಳಿಂದ ಸೂಚ್ಯವಾದ ಒತ್ತಡವಿದೆ' ಎನ್ನುತ್ತಾರೆ ಕೊರಿಯನ್ ಮಹಿಳೆಯೊಬ್ಬರು. ಅಂದರೆ ಮಕ್ಕಳೆಂದರೆ ಹೆಚ್ಚು ಖರ್ಚು ಮತ್ತು ಇರುವ ಕೆಲಸವನ್ನೂ ಬಿಡಬೇಕಾದ ಅನಿವಾರ್ಯತೆ. ಇಲ್ಲಿ ಮಕ್ಕಳನ್ನು ಹೊಂದಿರುವ ಮಹಿಳೆಯರನ್ನು ದಯೆಯಿಂದ ನೋಡುವುದಿಲ್ಲ ಎಂಬುದು ಅವರ ದೂರು. 

ತಿಂಗಳಿಗೆ 35 ಲಕ್ಷ ತರುತ್ತಿದ್ದ ಟಿವಿ ಉದ್ಯೋಗ ಬಿಟ್ಟು ಸಿನಿಮಾಗೆ ಹಾರಿದ ವಿಕ್ರಾಂತ್ ಮಾಸ್ಸೆ; ಈಗ ಪಡೆವ ಸಂಭಾವನೆ ಎಷ್ಟು?

ವೃತ್ತಿಜೀವನ ಅಥವಾ ಕುಟುಂಬ
ಕೊರಿಯಾದ ಈ ಎಲ್ಲ ಸಾಮಾಜಿಕ ವ್ಯವಸ್ಥೆಗಳು ಮಹಿಳೆಗೆ ವೃತ್ತಿಜೀವನ ಇಲ್ಲವೇ ಕುಟುಂಬ ಎಂದು ಒಂದನ್ನು ಆಯ್ದುಕೊಳ್ಳಲು ಒತ್ತಡ ಹೇರುತ್ತಿದೆ. ಅವರು ವೃತ್ತಿಯನ್ನು ಆರಿಸಿಕೊಳ್ಳುತ್ತಿದ್ದಾರೆ.

ಕೊರಿಯನ್ ಮಹಿಳೆಯರ ಈ ಎಲ್ಲ ಕಾರಣಗಳನ್ನು ನೋಡುವಾಗ, ಭಾರತದಲ್ಲಿ ಕೂಡಾ ಇದೇ ಪರಿಸ್ಥಿತಿ ಉದ್ಭವಿಸುವ ಸಮಯ ದೂರವಿಲ್ಲ ಎನಿಸದಿರದು.