"ವೀಕೆಂಡ್ ವಿತ್ ರಮೇಶ್"ನಲ್ಲಿ ಪುನೀತ್ ರಾಜ್‌ಕುಮಾರ್, ತಮ್ಮ ಚಿತ್ರರಂಗ ಪ್ರವೇಶ ರಜನಿಕಾಂತ್‌ರ "ಅಪೂರ್ವ ರಾಗಂಗಳ್" ಜೊತೆಗೆ 1975ರಲ್ಲೇ ಆಗಿದ್ದನ್ನು ಸ್ಮರಿಸಿಕೊಂಡರು. ರಮೇಶ್ ಅರವಿಂದ್ ಪುನೀತ್‌ರ ಮೊದಲ ಚಿತ್ರ "ಪ್ರೇಮದ ಕಾಣಿಕೆ"ಯನ್ನೂ ನೆನಪಿಸಿಕೊಂಡರು. ಪುನೀತ್ ತಮ್ಮನ್ನು ರಜನಿಕಾಂತ್ ಜೊತೆಗೆ ಚಿತ್ರರಂಗಕ್ಕೆ ಬಂದವರು ಎಂದು ಹೇಳಿಕೊಳ್ಳುವುದಾಗಿ ಹಾಸ್ಯ ಚಟಾಕಿ ಹಾರಿಸಿದರು.

ಹಲವು ವರ್ಷಗಳ ಹಿಂದಿನ ಮಾತು. ಆಗ ಜೀ ಕನ್ನಡದಲ್ಲಿ 'ವೀಕೆಂಡ್ ವಿತ್ ರಮೇಶ್' ಶೋ ಪ್ರಸಾರ ಆಗುತ್ತಿತ್ತು. ಅದ್ರಲ್ಲಿ ಸಮಾಜದ ಬಹಳಷ್ಟು ಗಣ್ಯರು, ಕಲಾವಿದರು ಸೇರಿದಂತೆ ಬಹಳಷ್ಟು ಸಾಧಕರು ಭಾಗಿಯಾಗಿದ್ದರು. ಅದರ ಒಂದು ಸಂಚಿಕೆಯಲ್ಲಿ ನಟ, ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ (Puneeth Rajkumar) ಸಹ ಭಾಗವಹಿಸಿ ಅಪಾರ ಮೆಚ್ಚುಗೆ ಪಡೆದರು. ಪುನೀತ್ ಜೊತೆ ಅವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಸಹ ಭಾಗವಹಿಸಿದ್ದರು. ಅಲ್ಲಿ ಹತ್ತು ಹಲವು ಸಂಗತಿಗಳು ಚರ್ಚೆಯಾಗಿವೆ,. ಅದರಲ್ಲಿ ಕೆಲವು ಭಾರೀ ಸಂಚಲ ಮೂಡಿಸಿವೆ. 

ಹಾಗಿದ್ದರೆ, ವೀಕ್ ಎಂಡ್ ವಿತ್ ರಮೇಶ್ ಶೋದಲ್ಲಿ ನಟರಾದ ಪುನೀತ್ ಹಾಗೂ ರಮೇಶ್ (Ramesh Aravind) ಮಧ್ಯೆ ಅದೇನು ಮಾತುಕತೆ ನಡೆದಿದೆ. ತುಂಬಾ ಜನರಿಗೆ ಗೊತ್ತಿಲ್ಲದ ಯಾವ ಸಂಗತಿ ಅಲ್ಲಿ ಬಹಿರಂಗವಾಗಿದೆ ಎಂಬ ಕುತೂಹಲ ಸಹಜವಾಗಿ ಹಲವರಲ್ಲಿ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.. ನಟ ರಮೇಶ್ ಅರವಿಂದ್ ಅವರು ಅಪ್ಪುಗೆ '1975 ದಲ್ಲಿ ಬಂದ ಒಂದು ಬ್ರೇಕಿಂಗ್ ನ್ಯೂಸ್ ಹೇಳ್ಲಾ? ಅಮದು ಈ ಸೂಪರ್ ಸ್ಟಾರ್ ಜೊತೆ ಇನ್ನೊಬ್ಬ ಸೂಪರ್ ಸ್ಟಾರ್ ಎಂಟ್ರಿ ಕೊಟ್ರು. 

ಐದು ವರ್ಷಕ್ಕೇ ಇವ್ಳ ಮೇಲೆ ಕಣ್ಣು ಹಾಕಿದೀಯಲ್ಲ ನೀನು; ಅಂಬಿ ಡೈಲಾಗ್‌ಗೆ ಅಪ್ಪು ಬೆಪ್ಪು!

ಅವರ ಫಸ್ಟ್ ಸಿನಿಮಾ ಅಪೂರ್ವ ರಾಗಂಗಳ್, ನಿಮ್ಮ ಫಸ್ಟ್ ಫಿಲಂ ಪ್ರೇಮದ ಕಾಣಿಕೆ. ಈ ಎರಡೂ ಸಿನಿಮಾಗಳು ರಿಲೀಸ್ ಆಗಿದ್ದು 1975ದಲ್ಲಿ. ಎರಡೂ ಸಿನಿಮಾಗಳನ್ನು ನಾನು ಕ್ಯೂನಲ್ಲಿ ನಿತ್ಕೊಂಡು ನೋಡಿದೀನಿ. 'ನೀವು ಸೀನಿಯರ್ ನಮ್ಗೆ ನೀವು' ಎಂದಿದ್ದಾರೆ ನಟ ಹಾಗೂ ವೀಕೆಂಡ್ ವಿತ್ ರಮೇಶ್ ನಿರೂಪಕರಾದ ರಮೇಶ್ ಅರವಿಂದ್. ಅದಕ್ಕೆ ಪುನೀತ್ ರಾಜ್‌ಕುಮಾರ್ ಅವರು, 'ಅವ್ರು ಬಿಗ್ ಸೂಪರ್ ಸ್ಟಾರ್ ಸರ್.. ನಾನು ಜಸ್ಟ್ ಒಬ್ಬ ಆಕ್ಟರ್ ಸರ್..' ಎಂದಿದ್ದಾರೆ. 

ಮುಂದುವರೆದ ನಟ ಪುನೀತ್ 'ನಂಗೆ ಖುಷಿ ಸಮಾಚಾರ ಏನಂದ್ರೆ, ಮುಂದೆ ನಾನು ಯಾವತ್ತೂ ಗ್ರುಫ್‌ನಲ್ಲಿ ಒಂದು ಇಶ್ಯೂ ತಗೊಂಡಾಗ, ನಂಗೆ ಹೇಳೋಕೆ ಒಂದ್ ವಿಷ್ಯ ಆಯ್ತು ಇದು ಸರ್.. ನಾನು ಹಾಗೂ ರಜನಿ ಸರ್ ಇಬ್ರೂ ಫಿಲಂ ಫೀಲ್ಡಿಗೆ ಒಟ್ಟಿಗೇ ಬಂದಿದೀವಿ ಅಂತ ಹೇಳ್ಕೊಳ್ಳೊಕೆ ಆಯ್ತು..' ಎಂದಿದ್ದಾರೆ. ನಿಮ್ಗೆ ಆಗ ಆರು ತಿಂಗಳು.. ಆರು ತಿಂಗಳಿಗೆಲ್ಲಾ ಆಕ್ಟಿಂಗ್ ಯಾಕೆ ಸರ್?' ಎಂದು ರಮೇಶ್ ಅರವಿಂದ ತಮಾಷೆ ಮಾಡಿದ್ದಾರೆ. ಅದಕ್ಕೆ ಪುನೀತ್ ಅವರು 'ಗೊತ್ತಿಲ್ಲ ಸರ್..' ಎಂದು ತಮಾಷೆಗೆ ಹೇಳಿದ್ದಾರೆ. 

ಪುನೀತ್ ಜೊತೆ ದಿನಕರ್ ಮಾಡಬೇಕಿದ್ದ ಸಿನಿಮಾ ಅಪ್ಡೇಟ್; 'ಅಪ್ಪು' ಜಾಗದಲ್ಲಿ ಯಾರು?

ಆಗ ಪುನೀತ್ ಪಕ್ಕದಲ್ಲಿಯೇ ಇದ್ದ ಅವರ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಅವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತ ಮುಗುಳ್ನಗುತ್ತ, ಶೋವನ್ನು ಎಂಜಾಯ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಹಲವು ವರ್ಷಗಳ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಅವರು ವೀಕೆಂಟ್ ವಿತ್ ರಮೇಶ್ ಶೋನಲ್ಲಿ ಗೆಸ್ಟ್ ಆಗಿ ಕಾಣಿಸಿಕೊಂಡಿದ್ದರು. ಆ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

View post on Instagram