BBK9 ಈ ಬಾರಿ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿನ? ಸಂಬರಗಿ ಭವಿಷ್ಯವನ್ನು ನೀವೂ ಒಪ್ತೀರಾ?
ಬಿಗ್‌ಬಾಸ್ ಸೀಸನ್ 9 ಇನ್ನೇನು ಎರಡು ವಾರಗಳಲ್ಲಿ ಮುಕ್ತಾಯವಾಗುತ್ತೆ. ಇದೀಗ ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿನೇ ಅಂತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಈ ಭವಿಷ್ಯದ ಬಗ್ಗೆ ಜನ ಏನಂತಾರೆ?
ಬಿಗ್‌ಬಾಸ್ ಸೀಸನ್ 9 ಈ ಬಾರಿ ವಿಭಿನ್ನ ರೀತಿಯಲ್ಲಿ ನಡೆಯಿತು. ಬಿಗ್‌ಬಾಸ್ ಟಿವಿ ಶೋಗೂ ಮೊದಲೇ ಓಟಿಟಿ ಶೋ ನಡೆಯಿತು. ಅದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವವರು ಪಾಲ್ಗೊಂಡು ಒಂದಿಷ್ಟು ದಿನ ದೊಡ್ಡ ಮನೆಯಲ್ಲಿ ಕಳೆದುಬಂದರು. ಆ ಬಳಿಕದ್ದು ಎಂದಿನಂತೆ ಬಿಗ್‌ಬಾಸ್ ಸೀಸನ್ 9 ಟಿವಿ ಶೋ. ಬಿಗ್‌ಬಾಸ್ ಓಟಿಟಿಯಿಂದ ಸೆಲೆಕ್ಟ್ ಆದವರು, ಹಿಂದಿನ ಸ್ಪರ್ಧಿಗಳಿಂದಲೇ ತುಂಬಿದ್ದ ಈ ಶೋನಲ್ಲಿ ಈ ಬಾರಿ ಸರ್ಪೈಸ್ ಎಲಿಮೆಂಟ್ ಕಡಿಮೆ ಇತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಯಾಕೋ ಬಿಗ್‌ಬಾಸ್ ಅಂದುಕೊಂಡಷ್ಟು ಜನಪ್ರಿಯತೆ ಪಡೆಯಲಿಲ್ಲ. ಆದರೆ ಇದೀಗ ಕೊನೆಯ ಹಂತಕ್ಕೆ ಬರುತ್ತಿದೆ. ಇನ್ನೇನು ಹದಿನಾಲ್ಕು ದಿನ ಕಳೆದರೆ ಗ್ರ್ಯಾಂಡ್ ಫಿನಾಲೆ. ಈ ಬಾರಿ ಬಿಗ್‌ಬಾಸ್ ಸೀಸನ್ ೯ನ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಈ ನಡುವೆ ಪ್ರಶಾಂತ್ ಸಂಬರಗಿ ಭವಿಷ್ಯ ನುಡಿದಿದ್ದಾರೆ. ಈ ಸಲ ರೂಪೇಶ್ ಶೆಟ್ಟಿನೇ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮುತ್ತಾರೆ ಅಂತ. ಅದೆಷ್ಟರ ಮಟ್ಟಿಗೆ ನಿಜವಾಗಬಹುದು, ಕೊನೆಯ ಹಂತದವರೆಗೆ ಯಾರು ಮನೆಯಲ್ಲಿರಬಹುದು?
ಸದ್ಯಕ್ಕೀಗ ಪ್ರಶಾಂತ್ ಸಂಬರಗಿ ದೀಪಿಕಾ ಪಡುಕೋಣೆ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪಠಾಣ್ ಸಿನಿಮಾವನ್ನು ಬೈಕಾಟ್ ಮಾಡಬೇಕು ಅಂತ ಗುಡುಗಿದ್ದಾರೆ. ಎರಡನೇ ಬಾರಿ ಬಿಗ್‌ಬಾಸ್ ಮನೆಗೆ ಹೋಗಿ ಹೊರಬಂದಿರುವ ಸಂಬರಗಿ ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾಕ್ಕೆ ಕೇಸರಿ ಬಿಕಿನಿ ಹಾಕಿರೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ದೀಪಿಕಾ ಅವರಿಗೆ ಬೇಕು ಬೇಕಂತಲೇ ಈ ಕೇಸರಿ ಬಣ್ಣದ ಬಿಕಿನಿ ತೊಡಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ. ಇದರ ಜೊತೆಗೆ ಶಾರೂಕ್ ಖಾನ್ ಜನ್ಮ ಜಾಲಾಡಿದ್ದಾರೆ. ಪಠಾಣ್ ಬಾಯ್ಕಾಟ್ ಮಾಡಲೇ ಬೇಕು ಅಂತ ಒತ್ತಾಯಿಸುತ್ತಿದ್ದಾರೆ.
BBK9 ಬಿಗ್ ಬಾಸ್ ಮನೆಯಿಂದ ಅನುಪಮಾ ಗೌಡ ಗೇಟ್ ಪಾಸ್
ಹೀಗಿರೋ ಪ್ರಶಾಂತ್ ಸಂಬರಗಿಗೆ ಎರಡನೇ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು ಅಲ್ಲಿ ಇಷ್ಟು ದಿನ ಇದ್ದು ಬಂದಿದ್ದು ಖುಷಿ ಕೊಟ್ಟಿದೆಯಂತೆ. ಈ ಬಾರಿಯೂ ಅಲ್ಲಿನ ಅನುಭವ ಬಹಳ ಚೆನ್ನಾಗಿತ್ತು ಅನ್ನೋದು ಅವರ ಅಭಿಪ್ರಾಯ. ಆದರೆ ತಾನು ಇಷ್ಟು ಬೇಗ ಹೊರಗೆ ಬರ್ತೀನಿ ಅಂತ ಅವರು ಕನಸಲ್ಲೂ ಅಂದುಕೊಂಡಿರಲಿಲ್ಲವಂತೆ. ಅಟ್‌ಲೀಸ್ಟ್ ಕೊನೆಯ ಹಂತದವರೆಗಾದ್ರೂ ಹೋಗ್ತೀನಿ ಅನ್ನೋ ಭರವಸೆ ಅವರಿಗಿತ್ತು. ಹಾಗೆ ನೋಡಿದರೆ ಸಂಬರಗಿ ಈ ಬಾರಿ ಬಿಗ್‌ಬಾಸ್‌ನಲ್ಲಿ ಚೆನ್ನಾಗಿಯೇ ಆಟ ಆಡ್ತಾ ಇದ್ರು. ಹಲವರು ಹೇಳೋ ಪ್ರಕಾರ ಅವರು ಈ ಬಾರಿ ಕಳೆದ ಸಲಕ್ಕಿಂತಲೂ ಚೆನ್ನಾಗಿ ಆಡಿದರು. ಆದರೆ ಮನೆಯಿಂದ ಆಚೆ ಹೋಗಿ ಮತ್ತೆ ಒಳಬಂದ ದೀಪಿಕಾ ದಾಸ್ ರಂಥಾ ಲಕ್ ಇವರಿಗಿರಲಿಲ್ಲ. ಹೀಗಾಗಿ ಸಂಬರಗಿ ವಾಪಾಸ್ ದೊಡ್ಡಮನೆಗೆ ಹೋಗಲಿಲ್ಲ.
ಇಂಥಾ ಟೈಮಲ್ಲಿ ಈ ಬಾರಿ ಬಿಗ್‌ಬಾಸ್ ವಿನ್ನರ್ ಯಾರಾಗಬಹುದು ಅನ್ನೋದನ್ನು ಸಂಬರಗಿ ಪ್ರೆಡಿಕ್ಟ್ ಮಾಡಿದ್ದಾರೆ. ಅವರ ಪ್ರಕಾರ ಈ ಬಾರಿ ರೂಪೇಶ್ ಶೆಟ್ಟಿ ವಿನ್ನರ್(Winner). ರಾಕೇಶ್ ಅಡಿಗ ರನ್ನರ್ ಅಪ್. ದಿವ್ಯಾ ಉರುಡುಗ ಕೊನೇವರೆಗೆ ನಿಲ್ಲೋದು ಡೌಟು. ಏಕೆಂದರೆ ಅವರ ಆಟ ಇತ್ತೀಚೆಗೆ ಡಲ್(Dull) ಹೊಡೀತಿದೆ.
BBK9 ಮಿಣಿ ಮಿಣಿ ಮೀನಾಕ್ಷಿ ಆದ ದೀಪಿಕಾ ದಾಸ್; ಗಂಡು ಬೇಕಂದವರಿಗೆ ಸೊಪ್ಪಿದೆ ಎಂದ ನೆಟ್ಟಿಗರು
ಸಂಬರಗಿ ಭವಿಷ್ಯ ನಿಜವಾಗಬಹುದು ಅಂತ ನೆಟಿಜನ್ಸ್(Netizens) ಕೂಡ ಹೇಳ್ತಿದ್ದಾರೆ. ಏಕೆಂದರೆ ರೂಪೇಶ್ ಶೆಟ್ಟಿ ಬಹಳ ಚೆನ್ನಾಗಿ ಆಟ ಆಡ್ತಿದ್ದಾರೆ. ರಾಕೇಶ್ ಅಡಿಗ ಕೂಡ ತಾನೇನು ಕಮ್ಮಿ ಇಲ್ಲ ಅನ್ನೋದನ್ನು ತೋರಿಸುತ್ತಲೇ ಇದ್ದಾರೆ. ಆದರೆ ದಿವ್ಯಾ ಉರುಡುಗ ಫಾರ್ಮ್ ನಲ್ಲಿ ಇದ್ದಂಗಿಲ್ಲ. ಅಮೂಲ್ಯ ಆಟನೂ ಅಂಥಾ ಚೆನ್ನಾಗೇನಿಲ್ಲ. ಹೀಗಾಗಿ ಸಂಬರಗಿ ಪ್ರೆಡಿಕ್ಷನ್(Prediiction) ನಿಜ ಆಗಬಹುದು ಅಂತ ನೆಟಿಜನ್ಸ್ ಹೇಳ್ತಿದ್ದಾರೆ. ರಿಯಲ್ ಫಲಿತಾಂಶಕ್ಕೆ(Result) ಕ್ಷಣಗಣನೆ ಶುರುವಾಗಿದೆ. ಕೊನೆಯ ಹಂತದಲ್ಲಿ ಯಾರು ವಿಜಯಿಯಾಗ್ತಾರೆ ಅನ್ನೋದನ್ನು ಊಹಿಸಬಹುದಾದ್ರೂ ಖಡಾಖಂಡಿತವಾಗಿ ಹೇಳೋದು ಕಷ್ಟ. ಸೋ, ಅಲ್ಲೀವರೆಗೆ ಕಾಯದೇ ದಾರಿಯಿಲ್ಲ.