BBK9 ಬಿಗ್ ಬಾಸ್ ಮನೆಯಿಂದ ಅನುಪಮಾ ಗೌಡ ಗೇಟ್ ಪಾಸ್
ದೊಡ್ಡ ಮನೆಯಿಂದ ಹೊರ ನಡೆದೆ ಕಿರುತೆರೆ ನಟಿ ಅನುಪಮಾ ಗೌಡ. ಎಲಿಮಿನೇಷನ್ ಶಾಕ್ ಇನ್ನಿತ್ತರ ಸ್ಪರ್ಧಿಗಳಿಗೆ ತಟ್ಟಿರುವುದು ನಿಜ....
ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಅನುಪಮಾ ಗೌಡ ಈಗ ಎರಡನೇ ಸಲ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಸುತ್ತಿದ್ದ ಅನುಪಮಾ ಗೌಡ ಇಂದು ಎಲಿಮಿನೇಟ್ ಅಗಿ ಹೊರ ಬಂದಿದ್ದಾರೆ.
ತುಂಬಾ ಟಫ್ ಫೈಟ್ ಕೊಟ್ಟು ಪ್ರತಿ ಗೇಮ್‌ನಲ್ಲೂ ಸೂಪರ್ ಅಗಿ ಸ್ಪರ್ಧಿಸುತ್ತಿದ್ದ ಅನುಪಮಾ ಗೌಡ ಹೊರ ಬಂದಿರುವುದು ಕೊಂಚ ಶಾಕಿಂಗ್ ವಿಚಾರವೇ.
ಅನುಪಮಾ ಗೌಡ ಯಾಕೆ ಎಲಿಮಿನೇಟ್ ಆಗಿರುವುದು ಏನಾಗುತ್ತಿದೆ? ಸರಿಯಾಗಿ ಮಾಹಿತಿ ಕೊಡಿ ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡುತ್ತಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ ರಿಯಾಲಿಟಿ ಶೋ ನಿರೂಪಣೆಯಿಂದ ಕಿರುತೆರೆ ವೀಕ್ಷಕರಿಗೆ ಅನುಪಮಾ ಹತ್ತಿರವಾದ್ದರು. ಯುಟ್ಯೂಬ್ ಚಾನೆಲ್ ಆರಂಭಿಸಿದ ದಿನದಿಂದಲೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು.
ಮೂರ್ನಾಲ್ಕು ಸಲ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅನುಪಮಾ ಗೌಡ ಆಡಿದ್ದರು. ಒಂದು ವಾರ ಕ್ಯಾಪ್ಟನ್ ಆಗಿ ಎರಡು ವಾರ ಕಿಚ್ಚನ ಅಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.