ಜನಪ್ರಿಯ ವೆಬ್‌ಸೀರಿಸ್ ಪಂಚಾಯತ್‌ನ ೫ನೇ ವಾರ್ಷಿಕೋತ್ಸವದ ಅಂಗವಾಗಿ, ೪ನೇ ಸೀಸನ್ ಜುಲೈ ೨, ೨೦೨೫ ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಜಿತೇಂದ್ರ ಕುಮಾರ್ ಸೇರಿದಂತೆ ತಾರಾಗಣದ ಪ್ರೋಮೋ ಬಿಡುಗಡೆಯಾಗಿದೆ. ಸಚೀವ್ ಜಿ ಕೆಲಸ ಕಳೆದುಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ. ವೈರಲ್ ಫೀವರ್ ನಿರ್ಮಾಣದ ಈ ಸೀಸನ್, ಗ್ರಾಮೀಣ ಹಾಸ್ಯ ಮತ್ತು ಭಾವನೆಗಳ ಮಿಶ್ರಣವನ್ನು ಮುಂದುವರೆಸಲಿದೆ.

ಮುಂಬೈ(ಏ.03) ಅತ್ಯಂತ ಜನಪ್ರಿಯ ವೆಬ್‌ಸೀರಿಸ್ ಪಂಚಾಯಚ್‌ಗೆ 5ನೇ ವಾರ್ಷಿಕೋತ್ಸವ. ವೆಬ್‌ಸೀರಿಸ್ ಮೂಲಕ ಅಪಾರ ವೀಕ್ಷರ ಮೆಚ್ಚುಗೆಳಿಸಿದ ಸೀರಿಸ್ ಇದೀಗ ಮತ್ತೊಂದು ಅಪ್‌ಡೇಟ್ ನೀಡಿದೆ. ಪಂಚಾಯತ್ ಸೀಸನ್ 4 ಒಟಿಟಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪಂಚಾಯತ್ ಸೀಸನ್ 4 ಜುಲೈ 2, 2025ರಂದು ಪ್ರೀಮಿಯರ್ ಆಗಲಿದೆ. ಪ್ರೈಮ್ ವಿಡಿಯೋ ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದೆ. ಜಿತೇಂದ್ರ ಕುಮಾರ್ ಸೇರಿದಂತೆ ಕೆಲ ತಾರಾಗಣದ ಪ್ರೋಮೋ ಭಾರಿ ಸಂಚಲನ ಸೃಷ್ಟಿಸಿದೆ. ಕಳೆದ 5 ವರ್ಷದಿಂದ ಭಾರಿ ಜನಮನ್ನಣೆ ಗಳಿಸಿರುವ ಪಂಚಾಯತ್ ಇದೀಗ ಮತ್ತೆ ವೀಕ್ಷರ ಮೋಡಿ ಮಾಡಲು ಸಜ್ಜಾಗಿದೆ.

5ನೇ ವರ್ಷಕ್ಕೆ ಬಂಪರ್
ಜೀತೇಂದ್ರ ಕುಮಾರ್, ನೀನಾ ಗುಪ್ತಾ, ರುಘಬೀರ್ ಯಾದವ್, ಚಂದನ್ ರಾಯ್, ಸಾನ್ವಿಕಾ ಫೈಸಲ್ ಮಲಿಕ್, ದುರ್ಗೇಶ್ ಕುಮಾರ್, ಸುನಿತಾ ರಾಜ್ವಾರ್, ಪಂಕಜ್ ಜಾ ಸೇರಿದಂತೆ ತಾರಣಗಣ ಒಳಗೊಂಡಿರುವ ಪಂಚಾಯತ್ 4 ಈಗಾಗಲೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಕಳೆದ 5 ವರ್ಷದಲ್ಲಿ ಪಂಚಾಯಚ್ ವೆಬ್ ಸೀರಿಸ್ ಪ್ರತ್ಯೇಕ ಅಭಿಮಾನಿ ಬಳಕ ಸಷ್ಟಿಸಿದೆ. ಇತ್ತೀಚೆಗೆ ನಡೆದ ಒಟಿಟಿ ಪ್ರಶಸ್ತಿ ಸಮಾರಂಭದಲ್ಲಿ ಪಂಚಾಯತ್ ಹಾಗೂ ಪಂಚಾಯಾತ್ ನಟರು ಹಲವು ಪ್ರಶಸ್ತಿ ಪಡೆದುಕೊಂಡಿದ್ದರು. 

ಪೋಷಕರ ತಲೆಕೆಡಿಸುತ್ತಿರುವ ಟ್ರೆಂಡ್ ಸೆಟರ್ ವೆಬ್ ಸಿರೀಸ್ ಅಡಾಲಸೆನ್ಸ್‌ ಕತೆ ಏನು?

ಅತ್ಯಂತ ಜನಪ್ರಿ ಕಾಮಿಡಿ ಡ್ರಾಮ ಸೀರಿಸ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಎಂಜಿನೀಯರಿಂಗ್ ಪದವಿ ಮುಗಿಸಿದ ಅಭ್ಯರ್ಥಿ ಕೊನೆಗೆ ಪಂಚಾಯತ್ ಕಾರ್ಯದರ್ಶಿಯಾಗಿ ಸೇರಿಕೊಂಡ ಬಳಿಕ ನಡೆಯುವ ಘಟನೆಗಳೇ ಪಂಚಾಯಚ್ ವೆಬ್ ಸೀರಿಸ್. ಉತ್ತರ ಪ್ರದೇಶದ ಫುಲೇರಾ ಗ್ರಾಮದ ಪಂಚಾಯತ್ ಕಾರ್ಯದರ್ಶಿಯಾದ ಬಳಿಕ ಪಂಚಾಯತ್, ಗ್ರಾಮ ಅಲ್ಲಿನ ವ್ಯವಸ್ಥೆ, ಗ್ರಾಮಸ್ಥರ ನಡುವೆ ಕತೆ ಇದಾಗಿದೆ. ಪಂಚಾಯತ್ ಆಡಳಿತ, ತನ್ನ ಎಂಜಿನೀಯರಿಂಗ್ ಕನಸು ಸೇರಿದಂತೆ ಹಲವು ದೃಷ್ಣಕೋನಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಪ್ರತಿ ಹಂತದಲ್ಲೂ ಕುತೂಹಲ, ಹಳ್ಳಿಯ ಸೊಗಡು, ಭಾಷೆ, ಗ್ರಾಮಸ್ಥರ ಕುತೂಹಲ ಹಾಗೂ ಆತಂಕ ಎಲ್ಲವವನ್ನು ಮಿಳಿತಗೊಂಡಿದೆ.

ಕುತೂಹಲವೇನು? 
ಪಂಚಾಯತ್ ಸೀಸನ್ 4 ಇದೀಗ ಜುಲೈ 2ರಂದು ಬಿಡುಗಡೆಯಾಗುತ್ತಿದೆ. ಪಂಚಾಯತ್ 4 ನಿರ್ಮಾಣವನ್ನು ವೈರಲ್ ಫೀವರ್ ಸಂಸ್ಥೆ ಮಾಡಿದೆ. ಇನ್ನು ದೀಪಕ್ ಕುಮಾರ್ ಮಿಶ್ರಾ ಇದರ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ವಿಶೇಷ ಅಂದರೆ ಈ ಬಾರಿ ಸಚೀವ್ ಜಿ ಕೆಲಸ ಕಳೆದಕೊಳ್ಳುತ್ತಾರಾ? ನಾಲ್ವರು ಗೆಳೆಯರು ಮತ್ತೆ ಬೇರೆಯಾಗುತ್ತಾರಾ ಸೇರಿದಂತೆ ಹಲವು ಕುತೂಹಲ ಹುಟ್ಟು ಹಾಕಿದೆ. ಪ್ರೈಮ್ ವೀಡಿಯೋದಲ್ಲಿ ಪಂಚಾಯತ್ 4 ಸೀರಿಸ್ ವೀಕ್ಷಣೆಗೆ ಅವಕಾಶವಿದೆ.

OTT ಯಲ್ಲಿ ಟಾಪ್‌ ನಲ್ಲಿರುವ, ನಿಮ್ಗೆ ಹುಚ್ಚು ಹಿಡಿಸೋ ಸಸ್ಪೆನ್ಸ್ ಥ್ರಿಲ್ಲರ್ ಮೂವೀಸ್ ಹಾಗು ವೆಬ್ ಸೀರೀಸ್!