ʼಬಿಗ್‌ ಬಾಸ್‌ʼ ಮನೆಯಲ್ಲಿ ಒಪನ್‌ ಆಗಿ ಪ್ರೇಮ ನಿವೇದನೆ ಮಾಡ್ಕೊಂಡು, ಈಗ ಇಬ್ಬರು ಹೆಣ್ಣು ಮಕ್ಕಳ ಪಾಲಕರಾಗಿ ಖುಷಿಯಿಂದ ಬದುಕ್ತಿರೋ ಜೋಡಿ ಬಗ್ಗೆ ಸುಂದರವಾದ ಕಥೆ ಇಲ್ಲಿದೆ! 

ಬಿಗ್‌ ಬಾಸ್‌ ಮನೆಗೂ, ಪ್ರೀತಿಗೂ ನಂಟಿದೆ. ಎಷ್ಟೋ ಪ್ರೀತಿ ಕಥೆಗಳು ಇಲ್ಲಿ ಹುಟ್ಟಿವೆ, ಅಲ್ಲೇ ಕಮರಿ ಹೋಗಿವೆ. ಇನ್ನೂ ಕೆಲ ಬಾರಿ ಸ್ಪರ್ಧಿಗಳು ಹೊರಗಡೆ ಬಂದಮೇಲೆ ಅರಳಿದ ಉದಾಹರಣೆಯೂ ಇದೆ, ಮುದುಡಿ ಹೋದದ್ದೂ ಇದೆ. ಆದರೆ ಮಲಯಾಳಂ ಬಿಗ್‌ ಬಾಸ್‌ ಇತಿಹಾಸದಲ್ಲಿ ಒಂದು ಕ್ರೇಜಿ ಪ್ರಪೋಸಲ್‌ ನಡೆದಿತ್ತು. ಆ ಜೋಡಿ ಈಗ ಎರಡು ಮಕ್ಕಳ ಪಾಲಕರಾಗಿದ್ದಾರೆ.

ಕ್ರೇಜಿ ಪ್ರೇಮ ನಿವೇದನೆ! 
ʼಬಿಗ್‌ ಬಾಸ್‌ʼ ಶುರುವಾಗಿ ಐವತ್ತು ದಿನಗಳು ಕಳೆದಿತ್ತು. ಪರ್ಲೆ ಮಾನೇ ಹಾಗೂ ಶ್ರೀನಿಶ್‌ ಅರವಿಂದ್‌ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರು ಪರಸ್ಪರ ಇಷ್ಟಪಡುತ್ತಿದ್ದರು. ಅಲ್ಲಿಯೇ ಒಂದು ದಿನ ರಾತ್ರಿ ಪರ್ಲೆ ಮಾನೇ ಅವರೇ ಶ್ರೀನೀಶ್‌ ಬಳಿ ಬಂದು, “ನನಗೆ ನೀನು ಅಂದರೆ ತುಂಬ ಇಷ್ಟ. ನಾನು ಡೇಟ್‌ ಮಾಡೋಕೆ ಇಷ್ಟಪಡಲ್ಲ, ನಾನು ನಿನ್ನನ್ನು ಮದುವೆ ಆಗ್ತೀನಿ, ನನ್ನ ಮದುವೆ ಆಗ್ತೀಯಾ” ಅಂತ ಕೇಳಿದ್ದರು. ಅದಕ್ಕೆ ತಕ್ಷಣ ಶ್ರೀನೀಶ್‌ ಅವರು ʼಯೆಸ್”‌ ಎಂದು ಹೇಳಿದ್ದರು.

ಕೈಮೇಲೆ ಹಾಕಿರೋ ಟ್ಯಾಟೂ ರಹಸ್ಯ ಬಿಚ್ಚಿಡುತ್ತಲೇ ಮಕ್ಕಳ ಬಗ್ಗೆಯೂ ರಿವೀಲ್​ ಮಾಡಿದ ಬಿಗ್​ಬಾಸ್​ ನಮ್ರತಾ ಗೌಡ

ಖುಷಿಯಿಂದ ಬದುಕುತ್ತಿದೆ! 
ಆ ಶೋ ನಿರೂಪಕ ಕೂಡ ಈ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲದೆ ಎಲ್ಲ ಸ್ಪರ್ಧಿಗಳ ಮುಂದೆ ಪ್ರೇಮ ನಿವೇದನೆ ಮಾಡಿದ ವಿಡಿಯೋ ಪ್ಲೇ ಆಗಿತ್ತು. ಆಗ ಪರ್ಲೆ ಅವರು ಮೋಹನ್‌ಲಾಲ್‌ಗೆ “ನನಗೆ ಶ್ರೀನೀಶ್‌ ಅಂದರೆ ತುಂಬ ಇಷ್ಟ. ನನ್ನ ಜೀವನವನ್ನು ಅವರ ಜೊತೆ ಕಳೆಯುವೆ” ಎಂದು ಗಟ್ಟಿಯಾಗಿ ಹೇಳಿದ್ದರು. ಪರ್ಲೆ ಮಾನೇ ಹಾಗೂ ಶ್ರೀನಿಶ್‌ ಅವರ ಧರ್ಮ ಬೇರೆ ಬೇರೆ. ಹೀಗಾಗಿ ಇವರಿಬ್ಬರ ಮನೆಯಲ್ಲೂ ಒಪ್ಪೋದು ಡೌಟ್.‌ ಎಷ್ಟೋ ಲವ್‌ಸ್ಟೋರಿಗಳು ಮದುವೆವರೆಗೆ ಹೋಗೋದಿಲ್ಲ, ಮದುವೆವರೆಗೂ ಹೋದರೂ ಕೊನೇ ತನ ಉಳಿಯೋದಿಲ್ಲ ಎಂದು ಅನೇಕರು ಕಾಮೆಂಟ್‌ ಮಾಡಿದ್ದರು. ಆದರೆ ಈ ಜೋಡಿ ಇಂದು ಖುಷಿಯಿಂದ ಬದುಕುತ್ತಿದೆ. 

ಸ್ಮಶಾನದಲ್ಲಿ ಸುತ್ತಾಡಿದ ಬಿಗ್​ಬಾಸ್​ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?

ಎರಡೂ ಧರ್ಮವನ್ನು ಗೌರವಿಸ್ತಾರೆ! 
2018ರಲ್ಲಿ ಈ ಜೋಡಿ ಬಿಗ್‌ ಬಾಸ್‌ ಮನೆಯಲ್ಲಿ ಭೇಟಿ ಆಗಿತ್ತು. 2019ರಲ್ಲಿ ಇವರಿಬ್ಬರು ಮದುವೆಯಾದರು. ಹಿಂದು, ಕ್ರಿಶ್ಚಿಯನ್‌ ಧರ್ಮದ ಪ್ರಕಾರ ಈ ಮದುವೆ ನಡೆದಿತ್ತು. ನಟ ಮಮ್ಮುಟ್ಟಿ ಅವರು ಈ ಮದುವೆಗೆ ಹಾಜರಾಗಿ ನವಜೋಡಿಗೆ ಶುಭ ಹಾರೈಸಿತ್ತು. ಪರ್ಲೆ ಅವರು ಮದುವೆಯಾದ ಬಳಿಕ ಇಂದು ಹಿಂದು ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ, ಗೌರವಿಸುತ್ತಾರೆ, ಸೀಮಂತವನ್ನು ಕೂಡ ಮಾಡಿಕೊಂಡಿದ್ದರು. ಇನ್ನು ಇವರಿಬ್ಬರಿಗೆ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.

ನಿರೂಪಕಿ ಪರ್ಲೆ ಅವರು ಮಲಯಾಳಂ ಚಿತ್ರರಂಗದಲ್ಲಿ ಯಶಸ್ವಿ ಇನ್‌ಫ್ಲುಯೆನ್ಸರ್‌, ಯುಟ್ಯೂಬರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ.