ಆ ನಿರ್ಮಾಪಕರ ಜೊತೆ ಕೆಲಸ ಮಾಡುವುದಕ್ಕೆ ವಶೀಕರಣ ಮಾಡಿಸಿದೆ: ನಟಿ ಶಾಕಿಂಗ್ ಹೇಳಿಕೆ!

ಲಾಕಪ್ ರಿಯಾಲಿಟಿ ಶೋನಲ್ಲಿ ತಮ್ಮ ಜೀವನದ ಕರಾಳ ಸತ್ಯವನ್ನು ಬಿಚ್ಚಿಟ್ಟ ಖ್ಯಾತ ನಟಿ ಪಾಯಲ್. ಮಾಟ ಮಂತ್ರ ಮಾಡಿಸೋ ಅಗತ್ಯವೇನು? ಎಂದು ನೆಟ್ಟಿಗರು. 

Payal Rohatgi reveals doing vashikaran puja to save her career in lock upp show vcs

ಏಕ್ತಾ ಕಪೂರ್ ಮತ್ತು ಕಂಗನಾ ರಣಾವತ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಲಾಕಪ್ ರಿಯಾಲಿಟಿ ಶೋ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದರೂ ಮನೆ ಮಾತಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋಗಿಂತ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಕಾರಣ ಟಿವಿಯಲ್ಲಿ ಪ್ರಸಾರ ಶುರು ಮಾಡಿ ಎಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಾರೇ ಎಲಿಮಿನೇಷನ್ ಹಂತ ತಲುಪಿದರೂ ಸತ್ಯ ಹೇಳಿ ಎಲಿಮಿನೇಷ್‌ನಿಂದ ಸೇಫ್ ಆಗಬಹುದು. ಆ ಸತ್ಯ ಯಾರಿಗೂ ಗೊತ್ತಿರಬಾರದು.

ಪಾಯಲ್ ರೋಹಟಗಿ ಎಲಿಮಿನೇಷನ್‌ ಹಂತಕ್ಕೆ ಬಂದಾಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. '15 ವರ್ಷಗಳಿಂದ ನಾನು ಚಿತ್ರರಂಗದಲ್ಲಿರುವೆ ಒಂದ ಹಂತದಲ್ಲಿ ನನ್ನ ವೃತ್ತಿ ಜೀವನ ಮುಳುಗುತ್ತಿತ್ತು. ಗೊತ್ತು ಗೊತ್ತಿಲ್ಲದೆ ನಾನು ಮಾಟ ಮಂತ್ರ ಮಾಡಿಸಲು ಮುಂದಾದೆ. ನನ್ನ ವೃತ್ತಿ ಜೀವನ ನನಗೆ ತುಂಬಾನೇ ಮುಖ್ಯವಾಗಿತ್ತು. ವಿದ್ಯಾವಂತ ಮಹಿಳೆಯರು ಈ ರೀತಿ ಎಂದೂ ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ನನಗೆ ಗೊತ್ತು. ಪೂಜಾರಿಯನ್ನು ಹಿಡಿದು ನಾನು ದೆಹಲಿಯಲ್ಲಿ ವಶೀಕರಣ ಮಾಡಿಸಿದೆ. ಈ ವಶೀಕರಣದಿಂದ ನನ್ನ ವೃತ್ತಿ ಜೀವನ ಮುಳುಗಿತ್ತು ಉಳಿಯಿತ್ತು ಅನ್ನೋದು ಬೇರೆ ವಿಚಾರ. ಒಬ್ಬ ನಿರ್ಮಾಪಕ ಜೊತೆ ಕೆಲಸ ಮಾಡುವುದಕ್ಕೆ ಈ ರೀತಿ ಮಾಡಿದೆ. ಈ ಸತ್ಯವನ್ನು ನಾನು ಯಾರಿಗೂ ಹೇಳಿಲ್ಲ. ನನ್ನ ತಾಯಿಗೂ ಗೊತ್ತಿಲ್ಲ' ಎಂದು ಪಾಯಲ್ ಹೇಳಿದ್ದಾರೆ.

Payal Rohatgi reveals doing vashikaran puja to save her career in lock upp show vcs

ಕಂಗನಾ ಮಾತು:

' ಏನು ಮಾಡಿಸಿದೆ? ಮಾಟ ಮಂತ್ರನಾ? ವಶೀಕರಣ ನಾ? ನೀನು ಚಿತ್ರರಂಗದಲ್ಲಿ ಉಳಿದುಕೊಳ್ಳಲು ಈ ರೀತಿ ಮಾಡುವ ಅಗತ್ಯವಿಲ್ಲ ಹುಡುಗಿ. ನೀನು ಸುಂದರವಾಗಿರುವ ಹಾಗೂ ಪ್ರತಿಭೆ ಇದೆ ನೀನು ಎಲ್ಲೇ ಹೋದರು ಕೆಲಸ ಕೊಡುತ್ತಾರೆ ನಿನ್ನನ್ನು ಮೆಚ್ಚಿಕೊಳ್ಳುತ್ತಾರೆ. ಏನೂ ಮಾಡದೆ ಒಬ್ಬರನ್ನು influence ಮಾಡುವ ಸಾಮರ್ಥ್ಯ ನಿನಗಿದೆ. ಚಿತ್ರರಂಗದಲ್ಲಿ ಈ ವಿಚಾರದ ಬಗ್ಗೆ ಸಾಕಷ್ಟು ಕೇಳಿರುವೆ. ಅನೇಕರು ಹೇಳಿದ್ದಾರೆ ಚಿತ್ರರಂಗದಲ್ಲಿ ಉಳಿದುಕೊಳ್ಳುವುದಕ್ಕೆ ಹೆಣ್ಣು ಮಕ್ಕಳು ವಶೀಕರಣ ಮಾಡಿಸುತ್ತಾರೆಂದು. ಒಬ್ಬ ಹೆಣ್ಣು ಜೀವನದಲ್ಲಿ ಯಶಸ್ವಿಯಾದರು ಆಕೆ ಸಾಮರ್ಥ್ಯವನ್ನು ಪ್ರಶ್ನಿಸುವ ಜನರಿದ್ದಾರೆ. ಹೇಗೆ ಆಕೆ ಇಷ್ಟೊಂದು ಹೆಸರು ಮಾಡಿದಳು ಆಕೆ ಬಳಿ ಏನೋ ಪವರ್ ಇದೆ. ಈ ಸತ್ಯ ಹೇಳುವ ಮೂಲಕ ನೀನು ನಮಗೆ ಶಾಕ್ ಕೊಟ್ಟಿರುವೆ' ಎಂದು ಕಂಗನಾ ಹೇಳಿದ್ದಾರೆ. 

ತಾಯಿ ನೆನೆದು ಭಾವುಕರಾದ ಮುನಾವರ್ ಫಾರುಕಿ, ತಬ್ಬಿಕೊಂಡು ಧೈರ್ಯ ಕೊಟ್ಟ ಕರಣ್ ಕುಂದ್ರಾ!

2016ರಲ್ಲಿ ಕಂಗನಾ ವಿರುದ್ಧ ಕೂಡ ಬ್ಲ್ಯಾಕ್ ಮ್ಯಾಜಿಕ್ ಆರೋಪ ಕೇಳಿ ಬಂದಿತ್ತು. ಚಿತ್ರರಂಗದಲ್ಲಿ ಉಳಿಯುವುದಕ್ಕೆ ಕಂಗನಾ ಬ್ಲ್ಯಾಕ್ ಮ್ಯಾಜಿಕ್ ಮಾಡಿಸುತ್ತಾಳೆಂದು ಎಕ್ಸ್‌ ಬಾಯ್‌ಫ್ರೆಂಡ್‌ ಸುಮನ್‌ ಖಾಸಗಿ ಸಂದರ್ಶನದಲ್ಲಿ ಹೇಳಿದ್ದರು. 'ಒಂದು ದಿನ ರಾತ್ರಿ ನನಗೆ ಕಂಗನಾ ಕರೆ ಮಾಡಿ ನಾನು ಪೂಜೆ ಮಾಡಿಸಬೇಕು ಮನೆಗೆ ಬಾ ಎಂದು ಕರೆದರು. ರಾತ್ರಿ 12 ಗಂಟೆಗೆ ಪೂಜೆ ಇತ್ತು 11.30ಗೆ ನಾನು ಮನೆ ತಲುಪಿದೆ. ಆಕೆ ಮನೆಯಲ್ಲಿ ಒಂದು ಸಣ್ಣ ಗೆಸ್ಟ್‌ ರೂಮ್‌ ಇತ್ತು ಅದನ್ನು ಕಪ್ಪು ಬಣ್ಣದ ಬಟ್ಟೆಯಿಂದ ಮುಚ್ಚಿದಳು' ಎಂದು ಹೇಳಿಕೆ ನೀಡಿದ್ದರು. ಈ ಘಟನೆಯನ್ನು ಕಂಗನಾ ಮತ್ತೆ ನೆನಪಿಸಿಕೊಂಡು ಮಾತನಾಡಿದ್ದಾರೆ.

ಬಿಟ್ಟೋದ್ ಗಂಡ ಎದುರು ಬಂದಾಗ ಕಷ್ಟ, ಒಟ್ಟಿಗೆ ಇದ್ದರೆ ಹಿಂಸೆ; Lockupp ಸಾರಾ ಖಾನ್ ಮಾತು!

'ಪಾಯಲ್, ನಿನ್ನ ಮಾತುಗಳನ್ನು ಕೇಳಿ ನಿನ್ನ ಬಾಯ್‌ಫ್ರೆಂಡ್‌ ಸಂಗ್ರಾಮ ಈ ಚಿಂತಿಸುತ್ತಿರುತ್ತಾನೆ ನಿಜಕ್ಕೂ ನನಗೆ ಪಾಯಲ್‌ ಮೇಲೆ ಪ್ರೀತಿ ಆಯ್ತಾ ಅಥವಾ ಅದೂ ವಶೀಕರಣ ನಾ ಎಂದು. ನಿಮ್ಮನ್ನು ನೀವು ಹಿಂದೂ ಧರ್ಮದ ರಾಯಭಾರಿ ಎಂದು ಕರೆಯುತ್ತೀರಿ, ಇವೆಲ್ಲವನ್ನೂ ಮಾಡಬೇಡಿ' ಎಂದು ಕಂಗನಾ ಹೇಳುತ್ತಾರೆ. ತಕ್ಷಣವೇ ಪಾಯಲ್ 'ಸಂಗ್ರಾಮ ಮತ್ತು ನಾನು ವಶೀಕರಣದ ಪ್ರಾಡೆಕ್ಟ್‌ ಅಲ್ಲ' ಎಂದಿದ್ದಾರೆ. 

ಕಳೆದ ವಾರ ಸಂಗ್ರಾಮ ಟ್ವಿಟರ್‌ನಲ್ಲಿ ಪಾಯಲ್‌ ಬಗ್ಗೆ ಟ್ವೀಟ್ ಮಾಡಿದ್ದರು. 'ಪಾಯಲ್ ತುಂಬಾನೇ ಒಳ್ಳೆಯ ಹುಡುಗಿ. ನಾವಿಬ್ಬರು ಜೀವನದಲ್ಲಿ ಸಮವಾಗಿದ್ದೀವಿ. ಪ್ರತಿಯೊಂದು ಜೋಡಿನೂ ಒಂದೇ ರೀತಿ ಚಿಂತಿಸಿ ಜೀವನ ನಡೆಸುತ್ತಾರೆ. ನಾವು ಮಾರ್ಚ್‌ ಕೊನೆಯಲ್ಲಿ ಮದುವೆ ಆಗಬೇಕು ಅಂದುಕೊಂಡೆವು ಆದರೆ ಕೆಲಸದಿಂದ ಜುಲೈ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ಸಮೀಪದ ದಿನ ದಿನಾಂಕ ನೋಡಿ ಮದುವೆ ಆಗುತ್ತೀವಿ' ಎಂದು ಮದುವೆ ವಿಚಾರವನ್ನು ಅಧಿಕೃತ ಮಾಡಿದ್ದರು.

Latest Videos
Follow Us:
Download App:
  • android
  • ios