'ಮೊದಲಿನ ಮೂರು ಸೀಸನ್‌ನಲ್ಲಿ ಬಿಗ್ ಬಾಸ್ ಚೆನ್ನಾಗಿತ್ತು. ಆದರೆ ಆ ನಂತರ ಬಿಗ್ ಬಾಸ್ ಅನ್ನೋದು 'ಮ್ಯಾರೇಜ್ ಬ್ಯೂರೋ' ಆಗಿ ಬದಲಾಗುತ್ತಿದೆ. ಅಷ್ಟೇ ಅಲ್ಲ, ಅದು ಸಂಪೂರ್ಣವಾಗಿ ಸ್ಕ್ರಿಪ್ಟೆಡ್ ಹಾಗೂ ಹೇಳಿ ಮಾಡಿಸೋದು. ಇನ್ನು ಏನೇನು ಹೇಳಿದ್ದಾರೆ ನೋಡಿ..
'ಮ್ಯಾರೇಜ್ ಬ್ಯೂರೋ' ಎಂದಿದ್ದೂ ಆಯ್ತು!
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಸದ್ಯಕ್ಕೆ ವಿಕ್ಷಕರ ಅಚ್ಚುಮೆಚ್ಚಿನ ಶೋ ಆಗಿದೆ. 11 ಸೀಸನ್ ಮುಗಿಸಿರುವ ಕನ್ನಡದ ಬಿಗ್ ಬಾಸ್ 12 ಸೀಸನ್‌ನ ಮಧ್ಯಂತರಕ್ಕೆ ಕಾಲಿಡುತ್ತಿದೆ. ಬಿಗ್ ಬಾಸ್ ಬಗ್ಗೆ ಮನೆಮನೆಗಳಲ್ಲಿ, ಬೀದಿಬೀದಿಗಳಲ್ಲಿ ಚರ್ಚೆ ಆಗುತ್ತಿರೋದು ಹೊಸ ಸಂಗತಿಯೇನಲ್ಲ. ಬಿಗ್ ಬಾಸ್ ಅಂದ್ರೆ ಕಾಂಟ್ರೋವರ್ಸಿ ಕ್ರಿಯೇಟ್ ಮಾಡೋದು, ಅಲ್ಲಿ ಬಾಯಿಗೆ ಬಂದಂತೆ ಮಾತನಾಡಬೇಕು, ಕೊಟ್ಟ ಟಾಸ್ಕ್ ಮಾಡಬೇಕು ಅದೂ ಇದೂ ಅಂತ ಮಾಡಿ ಕೊನೆಗೆ ವಿನ್ನರ್ ಆಗ್ಬೇಕು ಅಷ್ಟೇ. ಇದೇ ಅಲ್ಲಿಗೆ ಹೋಗುವ ಸ್ಪರ್ಧಿಗಳ ಮೂಲಮಂತ್ರ ಅಂತ ಜನರು ಮಾತನ್ನಾಡೋದು ಹೊಸ ಸಂಗತಿಯೇನಲ್ಲ.
ಸ್ಕ್ರಿಪ್ಟೆಡ್ ಹಾಗೂ ಹೇಳಿ ಮಾಡಿಸೋದು!
ಇದೀಗ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ಕೊಟ್ಟಿರುವ ಜನಸಾಮಾನ್ಯರ ಪ್ರತಿನಿಧಿ ಎಂಬಂತಿರುವ ಅಂಕಲ್ ಒಬ್ಬರು ಈ ಬಿಗ್ ಬಾಸ್ ಕನ್ನಡ ಸಿನ್ 12 ಹಾಗೂ ಅಲ್ಲಿನ ಒಟ್ಟಾರೆ ಸ್ಪರ್ಧಿಗಳ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 'ಮೊದಲಿನ ಮೂರು ಸೀಸನ್‌ನಲ್ಲಿ ಬಿಗ್ ಬಾಸ್ ಚೆನ್ನಾಗಿತ್ತು. ಆದರೆ ಆ ನಂತರ ಬಿಗ್ ಬಾಸ್ ಅನ್ನೋದು 'ಮ್ಯಾರೇಜ್ ಬ್ಯೂರೋ' ಆಗಿ ಬದಲಾಗುತ್ತಿದೆ. ಅಷ್ಟೇ ಅಲ್ಲ, ಅದು ಸಂಪೂರ್ಣವಾಗಿ ಸ್ಕ್ರಿಪ್ಟೆಡ್ ಹಾಗೂ ಹೇಳಿ ಮಾಡಿಸೋದು. ಅದನ್ನು ನೋಡುವ ಜನರು ಮೂರ್ಖರು, ಅವರಿಗೆ ಇವೆಲ್ಲಾ ಗೊತ್ತಿಲ್ಲ.
ಎಲ್ಲರೂ ಒಂದೊಂದು ರೀತಿಯಲ್ಲಿ ಬಲಿಪಶುಗಳು!
ಈ ಬಿಗ್ ಬಾಸ್ ಸೀಸನ್ 12 ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಅಶ್ವಿನಿ ಗೌಡ (Ashwini Gowda) ಅವರು ಕನ್ನಡಪರ ಸಂಘಟನೆ ಹೋರಾಟಗಾರರು ಅಂತಾರೆ. ಆದರೆ ಅವರು ಯಾವುದಕ್ಕೆ ಎಲ್ಲಿ ಹೋರಾಟ ಮಾಡಿದ್ದಾರೆ ಅಂತರ ಯಾರಾದರೂ ಹೇಳಬಹುದೇ? ಬಿಗ್ ಬಾಸ್ ಶೋದಲ್ಲಿ ಹೋಗಿ ಅಲ್ಲಿ ಅವರಿವರನ್ನು ಟಾರ್ಗೆಟ್ ಮಾಡಿ, ಕೆಟ್ಟಕೆಟ್ಟ ಮಾತುಗಳನ್ನು ಆಡುತ್ತಿದ್ದರೆ ಜನರು ಅವರನ್ನು ಗೆಲ್ಲಿಸುತ್ತಾರೆಯೇ? ಅವರು ಅಂತಲ್ಲ, ಅಲ್ಲಿರುವ ಎಲ್ಲರೂ ಕೂಡ ಒಂದೊಂದು ರೀತಿಯಲ್ಲಿ ಬಲಿಪಶುಗಳೇ ಆಗಿದ್ದಾರೆ. ಎಲ್ಲವೂ ಹೇಳಿಹೇಳಿ ಮಾಡಿಸೋದು ಅಷ್ಟೇ.
ಬಿಗ್ ಬಾಸ್ ಅನ್ನೋದು ಈಗ ಮೂರ್ಖರ ಆಟ
'ನನ್ನ ಪ್ರಕಾರ, ಬಿಗ್ ಬಾಸ್ ಅನ್ನೋದು ಈಗ ಮೂರ್ಖರ ಆಟವಾಗಿದೆ. ಅದನ್ನು ನೋಡುವರೂ ಕೂಡ ಮೂರ್ಖರೇ' ಎಂದಿದ್ದಾರೆ ಈ ಅಂಕಲ್. ಜತೆಗೆ, ಇನ್ನುಮುಂದಾದರೂ ಬಿಗ್ ಬಾಸ್ ಮನೆಯನ್ನು 'ಮದುವೆ ಮಾಡಿಸುವ ಮನೆ' ಎಂದು ಹೆಸರು ಬದಲಾಯಿಸಿದರೆ ಒಳ್ಳೆಯದು. ಬರಬರುತ್ತಾ ಬಿಗ್ ಬಾಸ್ ಮನೆ ಎನ್ನುವುದು ಸ್ಪರ್ಧಿಗಳಾಗಿ ಹೋಗಿ ಅಲ್ಲಿ ಲವ್ ಮಾಡಿ ಮದುವೆಗೆ ರೆಡಿಯಾಗಿ ಹೊರಬರುವುದು ಎನ್ನುವಂತಾಗಿದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ. ನೀವೇನಂತೀರಿ?

