Asianet Suvarna News Asianet Suvarna News

ಪುಟ್ಟಕ್ಕನ ಮಕ್ಕಳು ಫ್ಯಾನ್ಸ್​ಗೆ ಗುಡ್​ನ್ಯೂಸ್​: ಭಾರಿ ಟ್ವಿಸ್ಟ್​ ಜೊತೆ ವಾರ ಪೂರ್ತಿ ಒಂದು ಗಂಟೆ ಸಂಚಿಕೆ!

ಪುಟ್ಟಕ್ಕನ ಮಕ್ಕಳು ಫ್ಯಾನ್ಸ್​ಗೆ ಗುಡ್​ನ್ಯೂಸ್​: ಭಾರಿ ಟ್ವಿಸ್ಟ್​ ಜೊತೆ ವಾರ ಪೂರ್ತಿ ಒಂದು ಗಂಟೆ ಸಂಚಿಕೆ ಮೂಡಿಬರಲಿದ್ದು, ಇದರ ಪ್ರೊಮೋ ಬಿಡುಗಡೆಯಾಗಿದೆ. 
 

One hour episode with a huge twist thoughour one week in Puttakkan Makkalu suc
Author
First Published Jan 7, 2024, 5:08 PM IST

ಈಗ ತಾನೇ ಸ್ನೇಹಾ ಮತ್ತು ಕಂಠಿಯ ಜೀವನದಲ್ಲಿ ಪ್ರೀತಿ ಚಿಗುರುತ್ತಿದೆ. ಸ್ನೇಹಾಗೆ ಕಂಠಿ ಮೇಲಿದ್ದ ವೈಮನಸ್ಸು ತಣ್ಣಗಾಗುತ್ತಿದ್ದು, ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅದೇ ಇನ್ನೊಂದೆಡೆ, ಸ್ನೇಹಾಳ ಮೇಲೆ ಕಿಡಿ ಕಾರುತ್ತಿದ್ದ ಅತ್ತೆ ಬಂಗಾರಮ್ಮ ಒಪ್ಪಿಕೊಳ್ಳದಿದ್ದರೂ ಆಕೆಯ ಯಾವುದೋ ಒಂದು ಮೂಲೆಯಲ್ಲಿ ಸ್ನೇಹಾಳ ಮೇಲೆ ಪ್ರೀತಿ ಮೂಡುತ್ತಿದೆ. ಇದಾಗಲೇ ಅತ್ತೆ ಬಂಗಾರಮ್ಮನ ಮೇಲೆ ಸ್ನೇಹಾಗೆ ಇದ್ದ ಕೋಪ ಹೋಗಿದ್ದು, ಅತ್ತೆಯ ಮನಸ್ಸನ್ನು ಗೆಲ್ಲಲು ಹಾತೊರೆಯುತ್ತಿದ್ದಾಳೆ. ಎಷ್ಟೋ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿರೋ ಅತ್ತೆ ಸ್ವಂತ ಮಗ ಕಂಠಿಗೇ ಶಾಲೆಗೆ ಏಕೆ ಕಳುಹಿಸಲಿಲ್ಲ ಎನ್ನುವ ಪ್ರಶ್ನೆಗೆ ಮಾತ್ರ ಸ್ನೇಹಂಗೆ ಇದುವರೆಗೆ ಉತ್ತರ ಸಿಗಲಿಲ್ಲ. ಆದರೂ ಇವರ ಪ್ರೀತಿಗೇನೂ ಕೊರತೆಯಿಲ್ಲ.

ಇಷ್ಟಾಗುತ್ತಿರುವಾಗಲೇ ಕಂಠಿಯನ್ನು ಪ್ರೀತಿಸಿ ಆತನನ್ನೇ ಮದ್ವೆಯಾಗಬೇಕೆಂದು ಹಾತೊರೆಯುತ್ತಿದ್ದ ರಾಧಾಳ ಎಂಟ್ರಿಯಾಗಿದೆ. ಇದೀಗ ಕುತೂಹಲದ ಘಟ್ಟದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ ತಲುಪಿದೆ. ಒಂದೆಡೆ ಪುಟ್ಟಕ್ಕನ ಗಂಡನಿಗೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದ ಕಾರಣ, ಹಿಂದಿನದ್ದನ್ನೆಲ್ಲಾ ಮರೆತು ಬಿಟ್ಟಿದ್ದಾನೆ. 20 ವರ್ಷಗಳ ಹಿಂದೆ ಹೋಗಿರುವ ಆತನಿಗೆ ಈಗ ಎರಡನೆಯ ಪತ್ನಿ ರಾಜಿ, ಮಕ್ಕಳು ಯಾರೂ ನೆನಪಿಲ್ಲ. ಪುಟ್ಟಕ್ಕ ಮತ್ತು ಮಕ್ಕಳು ಮಾತ್ರ ನೆನಪಿದ್ದಾರೆ. ಆದರೆ ಅದೇ ಇನ್ನೊಂದೆಡೆ, ಕಂಠಿಯ ಬಾಳಲ್ಲಿ ಕೋಲಾಹಲ ಎದ್ದುಬಿಟ್ಟಿದೆ. ರಾತ್ರಿ ಮಲಗಿದ್ದ ಕಂಠಿ ಬೆಳಿಗ್ಗೆ ಎದ್ದು ನೋಡಿದಾಗ ಪಕ್ಕದಲ್ಲಿ ಸ್ನೇಹಾ ಬದಲು ರಾಧಾ ಇದ್ದು ಕೋಲಾಹಲವೂ ಸೃಷ್ಟಿಯಾಗಿದೆ. ಅದೇ ಇನ್ನೊಂದೆಡೆ, ಪುಟ್ಟಕ್ಕನ ಗಂಡ ಗೋಪಾಲ ಅಪಘಾತದಲ್ಲಿ ತಲೆಗೆ ಏಟು ತಿಂದಿದ್ದಾನೆ. 20 ವರ್ಷಗಳ ಹಿಂದಿನದಷ್ಟೇ ನೆನಪಿದೆ ಎನ್ನುವಂತೆ ನಾಟಕ ಮಾಡಿದ್ದು, ಅದೀಗ ಬಯಲಾಗಿದೆ. ತಾನು ಎರಡನೆಯ ಮದುವೆಯಾಗಿರುವ ಬಗ್ಗೆ ನೆನಪೇ ಇಲ್ಲದಂತೆ ನಟಿಸಿ, ಮಕ್ಕಳ ಪ್ರೀತಿಯನ್ನು ಗಳಿಸಲು ಆತ ಮಾಡಿದ ಪ್ಲ್ಯಾನ್​ ಬಯಲಾಗಿದೆ.

ಪ್ರತಾಪ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ರಾ? ಅಂದು ಏನಾಗಿತ್ತೆಂದು ಸಂಪೂರ್ಣ ಮಾಹಿತಿ ನೀಡಿದ ಡ್ರೋನ್​

ಅದೇ ಇನ್ನೊಂದೆಡೆ ರಾಜಿಯ ತಮ್ಮ ಕಾಳಿಯ ಕುತಂತ್ರದಿಂದ ಸುಟ್ಟು ಬೂದಿಯಾಗಿದ್ದ ಪುಟ್ಟಕ್ಕನ ಮೆಸ್​ ಮತ್ತೆ ತಲೆ ಎತ್ತಿ ನಿಂತಿದೆ. ಎಲ್ಲರೂ ಪುಟ್ಟಕ್ಕನ ಮೆಸ್​ ಭರ್ಜರಿ ಓಪನಿಂಗ್ ಮಾಡಿದ್ದಾರೆ. ಇವೆಲ್ಲವುಗಳ ನಡುವೆ ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಫ್ಯಾನ್ಸ್​ಗೆ ಇನ್ನೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಅದೇನೆಂದರೆ,  ವಾರ ಪೂರ್ತಿ ಒಂದು ಗಂಟೆಯ ಮಹಾ ಸಂಚಿಕೆ ಸಂಜೆ 7.30 ಯಿಂದ 8.30ವರೆಗೆ ಪ್ರಸಾರ ಆಗಲಿದೆ. ಗಟ್ಟಿಮೇಳ ಸೀರಿಯಲ್​ ಮುಗಿದಿರುವ ಹಿನ್ನೆಲೆಯಲ್ಲಿ ಇದೀಗ ಮುಂದಿನ ಹೊಸ ಸೀರಿಯಲ್​ ಆರಂಭವಾಗುವವರೆಗೆ ಪುಟ್ಟಕ್ಕನ ಮಕ್ಕಳು ಹೊಸ ಹೊಸ ತಿರುವಿನ ಜೊತೆಗೆ ವೀಕ್ಷಕರ ಮುಂದೆ ಬರಲಿದ್ದು ಅದರ ಪ್ರೊಮೋ ರಿಲೀಸ್​ ಆಗಿದೆ.

ಇದರಲ್ಲಿ ಕಂಠಿ ಶಬರಿಮಲೆಗೆ ಹೋಗುವ ವೇಷ ತೊಟ್ಟಿದ್ದು, ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ಪ್ರೊಮೋ ಬಿಡುಗಡೆ ಮಾಡಲಾಗಿದ್ದು, ಇದು ಇನ್ನಷ್ಟು ಕುತೂಹಲ ಕೆರಳಿಸುತ್ತಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಇನ್ನೇನು ಹೊಸ ತಿರುವು ಬರಲಿದೆ ಎನ್ನುವುದನ್ನು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. 

ಬಿಗ್​ಬಾಸ್​ ಅಭಿಮಾನಿಗಳಿಗೆ ಭರ್ಜರಿ ಗುಡ್​​ ನ್ಯೂಸ್​: ದೊಡ್ಮನೆಯಲ್ಲಿ ಉಳಿದುಕೊಳ್ಳಲು ಫ್ಯಾನ್ಸ್​ಗೂ ಅವಕಾಶ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios