ಶಾಪಿಂಗ್ ಅಂದ್ರೆ ಮಾಲ್‌ಗೆ ಹೋಗುವ ನಿವೇದಿತಾ ಗೌಡ ಮೊದಲ ಬಾರಿ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಬಜೆಟ್ ಶಾಪಿಂಗ್ ಮಾಡಿದ್ದಾರೆ.
ಕನ್ನಡ ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ಸ್ಟೈಲಿಂಗ್, ಟಾಕಿಂಗ್, ವಾಕಿಂಗ್ ಹೀಗೆ ಪ್ರತಿಯೊಂದನ್ನು ಗಮನಿಸುವ ಜನರು ಆಕೆ ಹೈ ಮೈಂಟೆನೆನ್ಸ್ ಅಂತ ಹೇಳುತ್ತಾರೆ. ಶಾಪಿಂಗ್ ಅಂದ್ರೆ ಮಾಲ್‌ಗೆ ಓಡಿ ಹೋಗುವ ನಿವೇದಿತಾ ಗೌಡ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್‌ಗೆ ಹೋದ್ದರೆ ಏನೆಲ್ಲಾ ಖರೀದಿಸಬಹುದು? ಯೂಟ್ಯೂಬ್ ಚಾನೆಲ್ ಫಾಲೋವರ್ಸ್ ಥ್ರಿಲ್ ಹೆಚ್ಚಿಸಲು ನಿವೇದಿತಾ ಗೌಡ ಬಜೆಟ್ ಶಾಪಿಂಗ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಚೌಕಾಸಿ ಮಾಡಿ ಮಾಡಿ ಮನೆ ಏನೆಲ್ಲಾ ತಂದಿದ್ದಾರೆ....
'ನನ್ನ ಯೂಟ್ಯೂಬ್ ತಂಡ ನನಗೆ ಒಂದು ಚಾಲೆಂಜ್ ಕೊಟ್ಟಿದ್ದಾರೆ. ಸಾವಿರ ರೂಪಾಯಿಯಲ್ಲಿ ನಾನು ಕಮರ್ಷಿಯಲ್ ರಸ್ತೆಯಲ್ಲಿ ಶಾಪಿಂಗ್ ಮಾಡಬೇಕು.1000 ರೂಪಾಯಿಯಲ್ಲಿ ಏನು ಬರುತ್ತೆ ಅನೋ ಕುತೂಹಲ ನನಗೆ ಇದೆ. ಶಾಪಿಂಗ್‌ಗೆ ಹೋದಾಗ ನಾನು ಬಜೆಟ್ ಇಟ್ಕೊಂಡಿದ್ದರೂ ಹೆಚ್ಚಾಗುತ್ತೆ ಕೆಲವೊಮ್ಮೆ ಬಜೆಟ್ ಇಲ್ಲದೆ ಶಾಪಿಂಗ್ ಮಾಡುವೆ. 1000ಕ್ಕೆ ಎಷ್ಟು ವಸ್ತು ತೆಗೆದುಕೊಳ್ಳಬೇಕು ಅನ್ನೋ ಲೆಕ್ಕಚಾರ ಹಾಕಿರುವೆ. ಈ ಸಲ ನಾನು ಚೌಕಾಸಿ ಮಾಡುವೆ' ಎಂದು ನಿವೇದಿತಾ ಗೌಡ ಹೇಳಿದ್ದಾರೆ.

'ಇವತ್ತು ನಾನು ಶಾಪಿಂಗ್ ಮಾಡುವ ದಿನ ಸಖತ್ ಬಿಸಿಲು ಇದೆ. ಹೇರ್ ಕ್ಲಿಪ್ ಮರೆತು ಬಂದಿರುವೆ ಅದಿಕ್ಕೆ ಮೊದಲು ಕ್ಲಿಪ್ ಖರೀದಿಸಬೇಕು. ಕೆಲವೊಂದು ಹೇರ್ ಕ್ಲಿಪ್ ಪಳ ಪಳ ಇದೆ' ಎಂದು ಒಂದು ಕ್ಲಿಪ್ ಖರೀದಿಸಿದ್ದಾರೆ. 100 ರೂಪಾಯಿ ಹೇಳುವ ಕ್ಲಿಪ್‌ನ ಚೌಕಾಸಿ ಮಾಡಿ ಮಾಡಿ 50 ರೂ. ಕೊಟ್ಟಿದ್ದಾರೆ. 'ನನಗೆ ಸಖತ್ ಖುಷಿಯಾಗುತ್ತಿದೆ. ನಾನು ಚೌಕಾಸಿ ಮಾಡಿ ಮಾಡಿ 50% ಡಿಸ್ಕೌಂಟ್‌ನಲ್ಲಿ ಕ್ಲಿಪ್ ತೆಗೆದುಕೊಂಡಿರುವೆ. ಮೊದಲ ಸಲ ನಾನು ಚೌಕಾಸಿ ಮಾಡಿರುವುದು ಹೀಗಾಗಿ ಸಖತ್ ಖುಷಿಯಾಗುತ್ತಿದೆ. ರಸ್ತೆಯಲ್ಲಿ ಎಲ್ಲಾ ಬೀಳಿಸಿಕೊಂಡು ಹೋಗುತ್ತಿರುವೆ' ಎಂದು ರಸ್ತೆಯಲ್ಲಿ ನಿವಿ ಕುಣಿದಿದ್ದಾರೆ.
ರಾತ್ರಿ ಮನೆಯಲ್ಲಿ ಒಬ್ಬಳೆ ಇರೋಕೆ ಭಯ ಭಯ; ಮತ್ತೊಂದು ಕಥೆ ಬಿಚ್ಚಿಟ್ಟ ನಿವೇದಿತಾ ಗೌಡ!
'ನಾನು ಬಜೆಟ್ ಶಾಪಿಂಗ್ ಮಾಡಬೇಕು 100 ರೂಪಾಯಿಗೆ ಯಾವ ಓಲೆ ಬರುತ್ತೆ ತೋರಿಸಿ' ಎಂದು 195 ರೂಪಾಯಿ ಓಲೆ ಆಯ್ಕೆ ಮಾಡಿಕೊಂಡು 95ಕ್ಕೆ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅಂಗಡಿ ಅವರು ಕಡಿಮೆಗೆ ಕೊಡದ ಕಾರಣ 135 ರೂ. ಕೊಟ್ಟು ಒಂದು ಜೊತೆ ಓಲೆ ಮತ್ತೊಂದು ಕ್ಲಿಪ್ ಖರೀದಿಸಿದ್ದಾರೆ. ಈ ನಡುವೆ ಒಂದೆರಡು ಅಂಗಡಿಗೆ ಭೇಟಿ ಕೊಟ್ಟಿ ಬ್ಯಾಗ್ ರೇಟ್ ವಿಚಾರಿಸಿದ್ದಾರೆ. ಇದಾದ ಮೇಲೆ ಗೊಂಬೆ ಅಂಗಡಿಗೆ ಭೇಟಿ ಕೊಟ್ಟು ಮತ್ತೊಮ್ಮೆ ಚೌಕಾಸಿ ಮಾಡಿ ಗೊಂಬೆ ಖರೀದಿಸಿದ್ದಾರೆ. ಬಿಗ್ ಬಾಸ್ ವೈಷ್ಣವಿ ಅವರು ಇದೇ ಗೊಂಬೆ ಅಂಗಡಿಗೆ ಭೇಟಿ ಕೊಟ್ಟಿ ಖರೀದಿಸಿರುವುದು ನೀವು ನನಗೆ ಕಡಿಮೆ ಕೊಡಬೇಕು ಎಂದೇಳಿ ಒಂದು ಜೊತೆ ಗೊಂಬೆ ತೆಗೆದುಕೊಂಡಿದ್ದಾರೆ.
30 ಜೊತೆ ಬಟ್ಟೆ, ಚಪ್ಪಲಿ ಬೇಕೆ ಬೇಕು; Mrs India ಸತ್ಯ ಬಯಲು ಮಾಡಿದ ನಿವೇದಿತಾ ಗೌಡ!
ರಸ್ತೆಯಲ್ಲಿ ನಡೆದುಕೊಂಡು ಹೋಗುವಾದ ಜ್ಯಾಕೇಟ್ ಖರೀದಿಸಿದ್ದಾರೆ. ಮೊದಲ ಗಿರಾಕಿ ಆಗಿರುವ ಕಾರಣ ಹೆಚ್ಚಿಗೆ ಚೌಕಾಸಿ ಮಾಡದೆ 200 ಕೊಟ್ಟಿದ್ದಾರೆ. ಅಲ್ಲಿದೆ ಮನೆಗೆ ಅಲಂಕಾರ ಮಾಡುವ ಗಾಜಿನ ಬಾಟಲ್‌ಗಳಿಗೆ 200 ರೂ ಕೊಟ್ಟು ಖರೀದಿಸಿದ್ದಾರೆ. ಎಲ್ಲಾ ಖರ್ಚು ಮಾಡಿ 150 ರೂಪಾಯಿ ಉಳಿಸಿಕೊಂಡು ಮತ್ತೊಂದು ಗೊಂಬೆ ಖರೀದಿ ಮಾಡಲು ಮುಂದಾಗಿದ್ದಾರೆ. ಆದಷ್ಟು ಅಂಗಡಿ ಅವರಿಗೆ ಮಸ್ಕಾ ಹೊಡೆದಿದ್ದಾರೆ ಗೊಂಬೆ ಇಷ್ಟವಾದ ಕಾರಣ ಬಜೆಟ್‌ಗೂ ಮೀರಿ 60 ರೂ ಹೆಚ್ಚಿಗೆ ಕೊಟ್ಟು ಮತ್ತೊಂದು ಗೊಂಬೆ ಖರೀದಿಸಿದ್ದಾರೆ.
'1060 ರೂಪಾಯಿಗೆ ನಾನು ಎರಡು ಗೊಂಬೆ, ಎರಡು ಹೇರ್‌ಕ್ಲಿಪ್, ಒಂದು ಓಲೆ, ಮನೆ ಅಲಂಕಾರ ಮಾಡುವ ಗಾಜಿನ ಬಾಟಲ್ ಎರಡು ಮತ್ತು ಒಂದು ಚಾಕೆಟ್ ಖರೀದಿಸಿರುವೆ. ನಾನು ಚೌಕಾಸಿ ಮಾಡಿ ಹೆಚ್ಚಿಗೆ ಖರೀದಿಸಿದ್ದೀನಾ ಅಥವಾ ಕಡಿಮೆ ಖರೀದಿಸಿದ್ದೀನಾ ಅಂತ ನೋಡಿ ಹೇಳಿ' ಎಂದು ವಿಡಿಯೋ ಮುಗಿಸಿದ್ದಾರೆ.
