ರೆಡ್ ಲೆಹಂಗಾ ತೊಟ್ಟು ನಿವೇದಿತಾ ಗೌಡ ಪೋಸ್ ಕೊಟ್ರೆ, ಸೊಂಟ ಚೆನ್ನಾಗಿದೆ ಅನ್ನೋದಾ!
ಚಂದನ್ ಶೆಟ್ಟಿಗೆ ವಿಚ್ಛೇದನ ನೀಡಿದ ಬಳಿಕ ನಿವೇದಿತಾ ಗೌಡ ಬಾಳಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳು ಆಗುತ್ತಿವೆ. ಮೊದಲಿಗಿಂತ ಹೆಚ್ಚಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎಕ್ಸ್‌ಪೋಸ್ ಆಗುತ್ತಿದ್ದಾರೆ.
ಬೆಂಗಳೂರು (ಅ.23): ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್‌ಗಳು ಫೋಟೋಗಳ ಮೂಲಕವೇ ಫಾಲೋವರ್ಸ್‌ಗಳ ಜೊತೆ ನಂಟು ಬೆಳೆಸಿರುವ ನಿವೇದಿತಾ ಗೌಡ ಜೀವನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಸಂಗೀತ ನಿರ್ದೇಶಕ ಹಾಗೂ ರಾಪರ್ ಚಂದನ್ ಶೆಟ್ಟಿಗೆ ವಿಚ್ಚೇದನ ನೀಡಿದ ಬಳಿಕ ಕೆಲ ದಿನ ಸೋಶಿಯಲ್ ಮೀಡಿಯಾದಿಂದ ಮರೆಯಾಗಿದ್ದ ನಿವೇದಿತಾ ಗೌಡ ಬಳಿಕ ಹಾಟ್ ಡ್ರೆಸ್‌ನೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದರು. ಆದರೆ, ಅವರು ಪೋಸ್ಟ್ ಮಾಡಿದ ಪ್ರತಿ ಫೋಟೋಗಳಿಗೂ ಚಂದನ್ ಶೆಟ್ಟಿ ಕುರಿತಾದ ಕಾಮೆಂಟ್‌ಗಳು ಬರುವುದು ಸಾಮಾನ್ಯವಾಗಿದ್ದವು. ಇತ್ತೀಚೆಗೆ ಅವರು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬರಲಿರುವ ಮನಸಾರೆ ನಿನ್ನೆ ಅನ್ನೋ ಆಲ್ಬಮ್ ಸಾಂಗ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಈ ಆಲ್ಬಮ್ ಸಾಂಗ್ ರಿಲೀಸ್ ಆಗುವ ಸಾಧ್ಯತೆಗಳೂ ಇವೆ. ಇತ್ತೀಚೆಗೆ ಆಕರ್ಷಕವಾದ ಕೆಂಪು ಬಣ್ಣದ ಲೆಹಂಗಾ ತೊಟ್ಟು ಅವರು ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಕೂಡ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ನಿವೇದಿತಾ ಹಾಕಿರುವ ಲೆಹಂಗಾಕ್ಕಿಂತ ಅವರ ಸೊಂಟದ ಬಗ್ಗೆಯೇ ನೆಟ್ಟಿಗರ ದೃಷ್ಟಿ ಹೋಗಿದೆ.
'ಅವಳು ಜೀವನವನ್ನು ಆನಂದಿಸಲಿ ಹುಡುಗರೇ ಸಾಕು. ಟ್ರೋಲಿಂಗ್ ನಿಲ್ಲಿಸಿ. ಅವರ ಜೀವನದಲ್ಲಿ ಏನಾಗಿದೆ ಅನ್ನೋದು ಯಾರಿಗೆ ತಿಳಿದಿದೆ. ಅದರ ಬಗ್ಗೆ ಮಾತನಾಡಲು ನಾವು ಯಾರೂ ಇಲ್ಲ. ಅದರ ಬಗ್ಗೆ ಯೋಚಿಸುವುದು ಸಹ ಸ್ವೀಕಾರಾರ್ಹವಲ್ಲ ..' ಎಂದು ನಿವೇದಿತಾ ಪರವಾಗಿ ಒಬ್ಬರು ಬರೆದಿದ್ದಾರೆ. 'ತಲೆಗೆ ಸ್ನಾನ ಮಾಡಿರಬೇಕು. ಅದಕ್ಕೆ ತಲೆ ಒಣಗಿಸಿಕೊಳ್ತಾ ಇದ್ದಾಳೆ. ಇಲ್ಲ ತಲೆಯಲ್ಲಿ ಹೇನು ಆಗಿರಬೇಕು' ಎಂದು ತಮಾಷೆ ಮಾಡಿದ್ದಾರೆ. ಚಂದನ್ ಶೆಟ್ಟಿ ರೆಸ್ಪೆಕ್ಟ್ ಬಟನ್, ಚಂದನ್ ಶೆಟ್ಟಿ, ಚಂದನ್ ಶೆಟ್ಟಿ ಎಲ್ಲಿ ಎನ್ನುವ ಕಾಮೆಂಟ್‌ಗಳು ನಿವೇದಿತಾ ಪೋಸ್ಟ್‌ಗೆ ಸಾಮಾನ್ಯವಾಗಿವೆ.
'ನೀವು ಇದೇ ಡ್ರೆಸ್‌ನಲ್ಲಿ ನಮ್ಮೂರಿನಲ್ಲಿ ಒಂದು ಮದುವೆಗೆ ಬಂದಿದ್ರಲ್ಲ ಎಂದು ಅಭಿಮಾನಿಯೊಬ್ಬರು ನೆನಪು ಮಾಡಿಕೊಂಡಿದ್ದಾರೆ. 'ನಿವೇದಿತಾ ಅವರ ಸೊಂಟಕ್ಕೆ ನಾನು ಅಭಿಮಾನಿ..' ಎಂದು ಮತ್ತೊಬ್ಬರು ಬರೆದಿದ್ದಾರೆ.
ಹೊಸಬರ ಜೊತೆ ನಿವೇದಿತಾ ಗೌಡ ರೊಮ್ಯಾನ್ಸ್, ರಸಿಕರ ರಾಣಿಯಾಗಲು ಹೊರಟ 'ರೀಲ್ಸ್ ರಾಣಿ'!
ಹೀಗೇ ಹೋದ್ರೆ ಮುಂದೊಂದು ದಿನ ನಿಮ್ಮ ಬಿಕಿನಿ ಫೋಟೋಗಳೂ ಬರಬಹುದು. 'ಕ್ಯಾಮರಾಮನ್ ಕಂಡ್ರೆ ತುಂಬಾ ಅಸೂಯೆ ಫೀಲ್ ಆಗುತ್ತೆ...... ಸಿಕ್ಕಾಪಟ್ಟೆ ಅದೃಷ್ಟವಂತ ಕ್ಯಾಮರಾಮನ್.. ಎಂದು ಕಾಮೆಂಟ್ ಮಾಡಲಾಗಿದೆ.
ಗಮನ ಸೆಳೆಯೋಕೆ ಹಾಸಿಗೆನೇ ಬೇಕಾ?; ಸೆರಗು ಹಾಕಿದ್ರೂ ನಿವೇದಿತಾಗೆ ತಪ್ಪಿಲ್ಲ ನೆಟ್ಟಿಗರ ಕಾಟ!
ಇನ್ನು ನಿವೇದಿತಾ ಗೌಡ ಅವರು ಸದ್ಯದಲ್ಲೇ 'ವಾಲು ಕಳ್ಳತಾ (ತೆಲುಗು), ಹಾಗೂ 'ಮನಸಾರೆ ನಿನ್ನ (ಕನ್ನಡ)' ಮ್ಯೂಸಿಕ್ ಆಲ್ಬಂ ಮೂಲಕ ಮಿಂಚಲಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ನಿವೇದಿತಾ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಗೌರಿ ನಾಯ್ದು ಹಾಗು ನಿವೇದಿತಾ ಗೌಡ ಜೋಡಿಯ ಈ ಹಾಡು, ಸದ್ಯದಲ್ಲೇ ಬಿಡುಗಡೆ ಆಗಲಿದೆ.