ಮತ್ತೊಂದು ಹಾಟ್ ವಿಡಿಯೋ ಹರಿಬಿಟ್ಟ ನಿವೇದಿತಾ ಗೌಡ: ಕಮೆಂಟಿಗರ ಸುರಕ್ಷತೆಗೆ 'ಹಿತ ರಕ್ಷಣಾ ವೇದಿಕೆ' ಶುರು!
ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಇನ್ನೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಇದನ್ನು ನೋಡಿದವರು ನಿಜಕ್ಕೂ ನಿಮ್ಮ ಮುಖನೇ ನೋಡ್ಬೇಕಾ ಎಂದು ಕೇಳುತ್ತಿದ್ದಾರೆ!
ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇರೋದ್ರಿಂದ ಸಿನಿಮಾ ತಾರೆಯರಿಗಿಂತಲೂ ಇಂಥ ಹಾಟ್ ಬ್ಯೂಟಿಗಳಿಗೇ ಹೆಚ್ಚು ಡಿಮಾಂಡ್ ಎನ್ನುವುದು ಕಮೆಂಟ್ಗಳಿಂದ ತಿಳಿದು ಬರುತ್ತದೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್. ಮೊಬೈಲ್ ಅನ್ನು ಸೆಲ್ಫೀ ಮೋಡ್ನಲ್ಲಿ ಸೊಟ್ಟ ಮೂತಿ ಮಾಡುವುದು, ಅತ್ತ-ಇತ್ತ ತಲೆಯಾಡಿವುದು... ಇಷ್ಟೇ ಸಾಕು ಫೇಮಸ್ ಆಗಲು. ಇಂಥವರ ವಿಡಿಯೋಗಳೇ ಸಾಕಷ್ಟು ಶೇರ್ ಆಗುತ್ತವೆ. ಟ್ರೋಲ್ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್ ಖುಷ್. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್, ನೆಗೆಟಿವ್ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.
ಇದೀಗ ಬಿಗ್‌ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಕೂಡ ಡಿವೋರ್ಸ್ ಬಳಿಕ ಇದೇ ಹಾದಿ ಹಿಡಿದಿದ್ದಾರೆ ಎಂಬುದು ಅವರ ಅಭಿಮಾನಿಗಳ ಮಾತು. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ನಿವೇದಿತಾ ಅವರು ಎಷ್ಟೇ ಒಳ್ಳೆಯ ರೀಲ್ಸ್ ಮಾಡಿದರೂ, ಗೊಂಬೆಯಂತೆ ಕಾಣಿಸುವ ವಿಡಿಯೋ ಶೇರ್ ಮಾಡಿದರೂ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಅದರಲ್ಲಿಯೂ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್ ಮಟ್ಟಿಗೂ ಬಂದು ನಿಂತಿದ್ದಾರೆ.
ಬೀಚ್ನಲ್ಲಿರೋ ನಿವೇದಿತಾ ಗೌಡ ವಿಡಿಯೋ ವೈರಲ್! ಪೂನಂ ಪಾಂಡೆಗೆ ಹೋಲಿಕೆ ಮಾಡೋದಾ ನೆಟ್ಟಿಗರು?
ಇದೀಗ ಇನ್ನೊಂದು ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ನೋಡಿದವರು ನೀವು ನಿಜಕ್ಕೂ ಮುಖ ತೋರಿಸಲು ವಿಡಿಯೋ ಮಾಡಿದ್ದಾ ಅಥ್ವಾ...? ಎಂದು ಪ್ರಶ್ನಿಸುತ್ತಿದ್ದಾರೆ. ಇವರ ಈ ವಿಡಿಯೋಗೆ ಥಹರೇವಾರಿ ಕಮೆಂಟ್ ಸುರಿಮಳೆಯಾಗುತ್ತಿದೆ. ಅದರಲ್ಲಿ ವಿಜೇತ್ ಎನ್ನುವ ಕಮೆಂಟಿಗರೊಬ್ಬರ ಕಮೆಂಟು ಹೈಲೈಟ್ ಆಗುತ್ತಿದೆ. ಈ ಹಾಟ್ ವಿಡಿಯೋ ಸಲುವಾಗಿ ಇಂಥದ್ದೊಂದು ಕಮೆಂಟ್ ಅನ್ನು ಅವರು ಹಾಕಿದ್ದಾರೆ. ನೂಕು - ನುಗ್ಗಲು ತಡೆಯಲು ಸಾಲು ಸಾಲಾಗಿ ಕಮೆಂಟ್ ಓದಲು ಮತ್ತು ಬರೆಯಲು ಬರಬೇಕಾಗಿ ವಿನಂತಿ... ಇಂತಿ ಕಮೆಂಟ್ ಹಿತ ರಕ್ಷಣಾ ವೇದಿಕೆ ಎಂದು ಬರೆದುಕೊಂಡಿದ್ದಾರೆ! ಈ ಹಿಂದೆ ಏನೂ ಕಮೆಂಟ್ ಹಾಕಬೇಡ್ರಪ್ಪೋ ಶೆಡ್ಗೆ ಹೋಗಬೇಕಾದೀತು ಎಂದು ಕೆಲವರು ಬರೆದಿದ್ದರು. ಇದೀಗ ಕಮೆಂಟ್ ಹಾಕುವವರಿಗೂ ಪದೇ ಪದೇ ಅದನ್ನು ಬರೆದು ಸಾಕಾಗಿದ್ದು, ಕಮೆಂಟ್ ಹಿತ ರಕ್ಷಣಾ ವೇದಿಕೆ ಎಂದು ಬರೆದಿರುವುದು ಎಲ್ಲರ ಗಮನ ಸೆಳೆಯುತ್ತಿದೆ!
ಆದರೆ ಯಾರು ಏನೇ ಹೇಳಿದ್ರೂ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಕೆಲ ದಿನಗಳ ಹಿಮದೆ ಬೀಚ್ನಲ್ಲಿ ನಿವೇದಿತಾ ಅವರು ಡೀಸೆಂಟ್ ಆಗಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಇಲ್ಲಿ ಅವರ ಬಟ್ಟೆ ಬೀಚ್ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಇದಕ್ಕೆ ಹಲವರು ಹಾರ್ಟ್ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದರು. ಒಳ್ಳೆಯ ಡ್ರೆಸ್ ಮಾಡಿದರೂ ತೆಗಳಿಕೆ ತಪ್ಪಿದ್ದಲ್ಲ ಎನ್ನುತ್ತಲೇ ಈಗ ಸಾಧ್ಯವಾದಷ್ಟು ಹಾಟ್ ವಿಡಿಯೋ ಶೇರ್ ಮಾಡುತ್ತಿದ್ದಾರೆ.
ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್ ಗರಂ...