ಸೀತಾರಾಮ ಅಶೋಕ ಭರ್ಜರಿ ಡಾನ್ಸ್ ಮಾಡಿದ್ರೆ, ನಿಮ್ಮಂಥ ಗಂಡ ಬೇಕು ಎನ್ನೋದಾ ಲೇಡಿ ಫ್ಯಾನ್ಸ್?
ಸೀತಾರಾಮ ಸೀರಿಯಲ್ ಅಶೋಕ ಕ್ಯಾರೆಕ್ಟರ್ ಮಹಿಳೆಯರಿಗೆ ತುಂಬಾ ಇಷ್ಟ. ಅವರ ಭರ್ಜರಿ ಡಾನ್ಸ್ ನೋಡಿ ಹೀಗೆಲ್ಲಾ ಹೇಳಿದ್ದಾರೆ ನೋಡಿ ಮಹಿಳಾ ಮಣಿಗಳು
ಸೀತಾರಾಮ ಕಲ್ಯಾಣದ ಅಶೋಕ ಎಂದರೆ ಬಹುತೇಹ ಮಹಿಳೆಯರ ಕ್ರಷ್. ಇಂಥದ್ದೇ ಕೇರಿಂಗ್ ಗಂಡ ತಮಗೂ ಸಿಕ್ಕರೆ ಎಷ್ಟು ಚೆನ್ನ ಎಂದು ಅಂದುಕೊಳ್ಳುತ್ತಲೇ ಅದರ ಬಗ್ಗೆ ಥಹರೇವಾರಿ ಕಮೆಂಟ್ಸ್ ಸುರಿಮಳೆ ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಲೇ ಇರುತ್ತದೆ. ಪ್ರಿಯಾಳಂಥ ಮೊಂಡು ಪತ್ನಿಯನ್ನು ಸಂಭಾಳಿಸುವಲ್ಲಿ ಅಶೋಕ್ದು ಎತ್ತಿದ ಕೈ. ಮಹಿಳೆಯರೇ ಬೇಗ ಏಳಬೇಕು, ಇಂತಿಷ್ಟು ಕೆಲಸ ಹೆಂಡತಿಯಾದವಳೇ ಮಾಡಬೇಕು... ಎಂಬೆಲ್ಲಾ ಸಿದ್ಧಸೂತ್ರಗಳನ್ನು ಬದಿಗಿಟ್ಟು ಗಂಡಸರು ಇವೆಲ್ಲಾ ಯಾಕೆ ಮಾಡಬಾರದು ಎಂದುಪ್ರಶ್ನಿಸುತ್ತಲೇ ಲಲನೆಯರಿಗೆಲ್ಲಾ ಹತ್ತಿರ ಆಗ್ತಿರೋ ಕ್ಯಾರೆಕ್ಟರ್ ಇದು. ಹೀಗೆ ಮಹಿಳಾ ಅಭಿಮಾನಿಗಳ ಮನಸ್ಸನ್ನು ಕದ್ದು ಗೆದ್ದಿರುವ ಅಶೋಕ್ ನಿಜವಾದ ಹೆಸರು ಅಶೋಕ್ ಶರ್ಮಾ.
ಇವರು ಇತ್ತೀಚೆಗಷ್ಟೇ ಸಖಿಯೇ.. ಸಖಿಯೇ... ಹಾಡಿಗೆ ರೀಲ್ಸ್ ಮಾಡಿದ್ದರು. . ಇದು ಸಕತ್ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ನಿಮಗೆ ಇಷ್ಟೊಂದು ಚೆನ್ನಾಗಿ ಹಾಡಲು ಬರತ್ತೆ ಎಂದು ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಷ್ಟಕ್ಕೂ ಅಶೋಕ್ ಒಬ್ಬರು ಸಿಂಗರ್ ಎಂದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಇವರು ಹಲವಾರು ಆಕ್ರೆಸ್ಟ್ರಾ ಕಾರ್ಯಕ್ರಮಗಳಿಗೆ ಹಾಡಿದ್ದಾರೆ. ಕನ್ನಡ ಸಿನಿಮಾಗಳಿಗೂ ಹಿನ್ನೆಲೆ ಗಾಯಕರಾಗಿದ್ದಾರೆ. ಅಲ್ಲದೇ ಭಾರಿ ವೈರಲ್ ಆಗಿದ್ದ ಜಿಂಗ್ ಚಿಕ, ಜಿಂಗ್ ಚಿಕಾ ಹಾಡನ್ನು ಹಾಡಿದ್ದು ಕೂಡ ಇದೇ ಅಶೋಕ್. ಇದೀಗ ಇವರು ಥಿಂಕ್ ಇಂಡೇ ಸಿನಿಮಾದ ಆಸಾ ಕೂಡಾಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅವರ ಸ್ಟೆಪ್ಗೆ ಜನರು ಫಿದಾ ಆಗಿದ್ದು, ಮಹಿಳೆಯರು ತಮಗೂ ಇಂಥ ಗಂಡ ಬೇಕು ಎನ್ನುತ್ತಿದ್ದಾರೆ.
ತರುಣ್-ಸೋನಲ್ ಮದುವೆಗೆ ಕ್ಷಣಗಣನೆ... ನಟಿಯ ಭರ್ಜರಿ ಬ್ಯಾಚುಲರ್ ಪಾರ್ಟಿ ಹೇಗಿತ್ತು ನೋಡಿ...!
ಇನ್ನು ಅಶೋಕ್ ಅವರ ಕುರಿತು ಹೇಳುವುದಾದರೆ, ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್, ಬಳಿಕ ಹಣಕ್ಕಾಗಿ ಆಕ್ರೆಸ್ಟ್ರಾ ಗಾಯಕರಾದರು, ಬಳಿಕ ಕೀಬೋರ್ಡ್ ಕಲಿತು, ಮಕ್ಕಳಿಗೆ ಹೇಳಿಯೂ ಕೊಡುತ್ತಿದ್ದರು, ಅದಾದ ಬಳಿಕ ನಿರೂಪಕರಾಗಿಯೂ ಅಶೋಕ್ ಗುರುತಿಸಿಕೊಂಡಿದ್ದಾರೆ. ಸುವರ್ಣ, ರಾಜ್ ಮ್ಯೂಸಿಕ್ ನಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡಿದ ಅನುಭವ ಕೂಡ ಇವರಿಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಖಾಸಾ ದೋಸ್ತ್ ಆಗಿರುವ ಅಶೋಕ್ ಶರ್ಮಾ, ಇವರಿಬ್ಬರ ಸ್ನೇಹ 20 ವರ್ಷಗಳಷ್ಟು ಹಳೆಯದ್ದೆಂದು ಹೇಳುತ್ತಾರೆ. ಯಶ್ ಅಭಿನಯದ ಮಿ, ಆಂಡ್ ಮಿಸಸ್ ರಾಮಾಚಾರಿಯಿಂದ ಹಿಡಿದು ಕೆಜಿಎಫ್ ವರೆಗೂ ಹಲವು ಸಿನಿಮಾಗಳಲ್ಲಿ ಸಹ ಅಶೋಕ್ ನಟಿಸಿದ್ದಾರೆ.
ಅಶೋಕ್ ಅವರು ರೀಲ್ ಲೈಫ್‌ನಲ್ಲಿ ಪ್ರಿಯಾ ಜೊತೆ ಮದ್ವೆಯಾಗಿದ್ದರೂ, ರಿಯಲ್ ಲೈಫ್ ಮದುವೆ ಇನ್ನೂ ಸಸ್ಪೆನ್ಸ್ ಆಗಿದೆ. ಪೂಜಾ ಎನ್ನುವವರ ಜೊತೆ ಮದುವೆಯಾಗಿದೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಗೊತ್ತಿಲ್ಲ, ಈ ಬಗ್ಗೆ ನಟ ಕೂಡ ಎಲ್ಲಿಯೂ ಬಹಿರಂಗಪಡಿಸಲಿಲ್ಲ. ನಟಿಸ್ತಿರೋರು ಅಶೋಕ್ ಶರ್ಮಾ (Ashok Sharma) ಅವರು ಇದಾಗಲೇ ಹಲವಾರು ಸೀರಿಯಲ್, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವಲಕ್ಕಿ ಪವಲಕ್ಕಿ, ವಾತ್ಸಲ್ಯ, SSLC ನನ್ ಮಕ್ಕಳು, ಮರಳಿ ಮನಸಾಗಿದೆ ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಅಶೋಕ್ ಗೆ ಭರ್ಜರಿ ಜನಪ್ರಿಯತೆ ತಂದುಕೊಟ್ಟಿದ್ದು ಸೀತಾ ರಾಮ ಸೀರಿಯಲ್ ಅಶೋಕ್ ಪಾತ್ರ.
ಕಂಠಿಗೆ ಖುಲಾಯಿಸಿದ ಅದೃಷ್ಟ! ರಾಕಿಂಗ್ ಸ್ಟಾರ್ ಯಶ್ ಮಾಡಿಯೇ ಬಿಟ್ರು ಫೋನ್ಕಾಲ್!