Asianet Suvarna News Asianet Suvarna News

ಮುದ್ದು ರಾಕ್ಷಸಿ ಪೋಸ್ಟರ್ ನೋಡಿ ಶೆಡ್ ಗೆ ಹೋಗಿ ಎಂದ ಫ್ಯಾನ್ಸ್

ರಿಯಲ್ ಲೈಫ್ ನಲ್ಲಿ ಜೋಡಿಯಾಗಿ ಈಗ ಬೇರೆಯಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸ್ತಿದ್ದು, ರೀಲ್ ಯಾವ್ದು, ರಿಯಲ್ ಯಾವ್ದು ಅಂತ ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ಟ್ರೋಲರ್ಸ್ ಶೆಡ್ ನೆನಪು ಮಾಡ್ಕೊಂಡಿದ್ದಾರೆ. 

nivedita gowda new movie poster fans say go to shed roo
Author
First Published Aug 30, 2024, 5:03 PM IST | Last Updated Aug 30, 2024, 5:12 PM IST

ರ್ಯಾಪರ್ ಚಂದನ್ ಶೆಟ್ಟಿ (Rapper Chandan Shetty) ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ (Bigg Boss contestant Nivedita Gowda) ಡಿವೋರ್ಸ್ ಆದ್ಮೇಲೆ ಮತ್ತಷ್ಟು ಸುದ್ದಿಯಲ್ಲಿದ್ದಾರೆ. ನಿವೇದಿತಾ ಮಾಡಿದ್ದೆಲ್ಲ ಟ್ರೋಲ್ ಆಗ್ತಾನೆ ಇದೆ. ಚಂದನ್ ಬಿಟ್ಟಿರುವ ನಿವೇದಿತಾ ಮೇಲೆ ನೆಟ್ಟಿಗರಿಗೆ ಅದೇನೋ ಕೋಪ. ನಿವಿ ಏನೇ ಮಾಡಿದ್ರೂ ಕಾಲಳೆಯೋ ಜನ ಈಗ ಅವರ ಹೊಸ ಪೋಸ್ಟರ್ ನೋಡಿ, ಶೆಡ್ ವಿಷ್ಯ ತೆಗೆದಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಶೆಡ್ ಚರ್ಚೆ ನಡೀತಾನೆ ಇದೆ. ಡಿ ಬಾಸ್ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲಿಗೆ ಹೋದ್ಮೇಲೆ ಶೆಡ್ ಎಲ್ಲರ ಫೆವರೆಟ್ ವಿಷ್ಯ. ಈಗ ನಿವೇದಿತಾ ಇನ್ಸ್ಟಾ ಪೋಸ್ಟ್ ಗೂ ಟ್ರೋಲರ್ ಶೆಡ್ ವಿಷ್ಯ ತೆಗೆದಿದ್ದಾರೆ.  ಡಿವೋರ್ಸ್ ಆದ್ಮೇಲೆ ನಿವೇದಿತಾ ಮತ್ತು ಚಂದನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂದು ಅದ್ರ ಪೋಸ್ಟರ್ ರಿಲೀಸ್ ಆಗಿದೆ. ಇದನ್ನು ತಮ್ಮ ಖಾತೆಯಲ್ಲಿ ನಿವೇದಿತಾ ಹಂಚಿಕೊಂಡಿದ್ದಾರೆ. ಆದ್ರೆ ನಿವೇದಿತಾ ಹೆಚ್ಚಿನ ಡಿಟೇಲ್ ನೀಡದೆ, ನಿಮ್ಮ ಬೆಂಬಲ ಇರಲಿ ಅಂತ ಶೀರ್ಷಿಕೆ ಹಾಕಿದ್ದಾರೆ. ಇದ್ರಲ್ಲಿ ಚಂದನ್ ಶೆಟ್ಟಿ ಮಾತ್ರ ಕಾಣ್ತಿದ್ದು, ಅದನ್ನು ತಬ್ಬಿಕೊಂಡವರು ಯಾರು ಅನ್ನೋದು ಸ್ಪಷ್ಟವಾಗಿ ಕಾಣೋದಿಲ್ಲ.

Taimur Ali Khan: ಮೀಡಿಯಾಗೆ ಬೈದ ತೈಮೂರ್ ಆಲಿ ಖಾನ್, ಸೈಫ್ ಆಲಿ ಖಾನ್ ಮಗನ ಅಹಂಕಾರಕ್ಕೆ ನೆಟ್ಟಿಗರ ಕ್ಲಾಸ್

ಈ ಪೋಸ್ಟರ್ ನೋಡಿ ಕೋಪಗೊಂಡಿರುವ ಅಭಿಮಾನಿಗಳು, ಯಾಕೆ ಹೀಗೆಲ್ಲ ಮಾಡ್ತೀರಾ, ಶೆಡ್ ಗೆ ಹೋಗಿ ಸಮಸ್ಯೆ ಬಗೆಹರಿಸಿಕೊಂಡು ಬಂದು ಒಂದಾಗಿ ಬಾಳಿ ಅಂತ ಸಲಹೆ ನೀಡಿದ್ದಾರೆ. ಡಿವೋರ್ಸ್ ಗೆ ಮುನ್ನವೇ ಕ್ಯಾಂಡಿ ಕ್ರಶ್ (Candy Crush) ಸಿನಿಮಾವನ್ನು ಈ ಜೋಡಿ ಒಪ್ಪಿಕೊಂಡಿದ್ದರು. ಆಗ್ಲೇ ಚಿತ್ರದ ಶೂಟಿಂಗ್ ಶುರುವಾಗಿತ್ತು. ಆದ್ರೆ ಚಿತ್ರಕ್ಕೆ ತಾತ್ಕಾಲಿಕವಾಗಿ ಕ್ಯಾಂಡಿ ಕ್ರಶ್ ಅಂತ ನಾಮಕರಣ ಮಾಡಲಾಗಿತ್ತು. ಈಗ ಚಿತ್ರ ತಂಡ ಕ್ಯಾಂಡಿ ಕ್ರಶ್ ಹೆಸರನ್ನು ಬದಲಿಸಿದೆ. ಅದಕ್ಕೆ ಮುದ್ದು ರಾಕ್ಷಸಿ ಅಂತ ಮರು ನಾಮಕರಣ ಮಾಡಿದೆ. ಹಾಗಾಗಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಚಿತ್ರದ ಹೊಸ ಪೋಸ್ಟರನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ನ ಬಿಗ್ ಬಜೆಟ್ ಚಿತ್ರಗಳಲ್ಲಿ ಇದೂ ಒಂದು.

ನಿವೇದಿತಾ ಹಾಗೂ ಚಂದನ್ ಶೆಟ್ಟಿ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿರುವ ಚಿತ್ರ ಇದಾಗಿದ್ದು, ಇದೇ ಕೊನೆ ಚಿತ್ರವಾಗ್ಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಪುನೀತ್ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಂದನ್ ಹೇಳಿದಂತೆ ಬಹುತೇಕ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರಿನ ಸುತ್ತಮುತ್ತವೇ ಬಹುತೇಕ ಶೂಟಿಂಗ್ ನಡೆದಿದೆ ಎಂದು ಚಿತ್ರತಂಡ ಹೇಳಿದೆ. ಈ ಚಿತ್ರ ಲವ್ ಸ್ಟೋರಿ (Love Story) ಯಾಗಿದೆ. ಆದ್ರೆ ಸೈಕೋ ಥ್ರಿಲ್ಲರ್ ಲವ್ ಸ್ಟೋರಿಯಾಗಿರುವ ಕಾರಣ ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಇರಲಿದೆ ಎಂಬ ನಿರೀಕ್ಷೆ ಇದೆ. 

Shahrukh Khan: ವರ್ಷಕ್ಕೆ 1000 ಕೋಟಿ ಗಳಿಸೋ ಶಾರುಕ್ ಆದಾಯದ ಮೂಲ ಯಾವ್ದು?

ಈ ಹಿಂದೆಯೇ ಚಿತ್ರ ತಂಡ ಇಂದು ಚಿತ್ರದ ಟೈಟಲ್ ಬಿಡುಗಡೆ ಮಾಡೋದಾಗಿ ಘೋಷಣೆ ಮಾಡಿತ್ತು. ಅದರಂತೆ ಚಿತ್ರಕ್ಕೆ ಮುದ್ದು ರಾಕ್ಷಿಸಿ ಎಂಬ ಹೆಸರಿಟ್ಟಿದೆ. ಬಿಗ್ ಬಾಸ್ ನಲ್ಲಿ ಪರಿಚಯವಾಗಿ, ಮೈಸೂರಿನ ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಆಗ್ಲಿಂದಲೂ ಸುದ್ದಿಯಲ್ಲಿದ್ದ ನಿವೇದಿತಾ ಹಾಗೂ ಚಂದನ್ ಶೆಟ್ಟಿ, ಮದುವೆ ನಂತ್ರ ಅನೇಕ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದ್ರೆ ವಿಚ್ಛೇದನ ನಂತ್ರ ಇಬ್ಬರು ಬೇರೆಯಿದ್ದು, ತಮ್ಮ ಕೆಲಸದಲ್ಲಿ ಬ್ಯುಸಿ ಇದ್ದಾರೆ ಅಂದ್ಕೊಂಡಿದ್ದ ಅಭಿಮಾನಿಗಳಿಗೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ ಅನ್ನೋದನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ. 

Latest Videos
Follow Us:
Download App:
  • android
  • ios