Shahrukh Khan: ವರ್ಷಕ್ಕೆ 1000 ಕೋಟಿ ಗಳಿಸೋ ಶಾರುಕ್ ಆದಾಯದ ಮೂಲ ಯಾವ್ದು?
ಬಾಲಿವುಡ್ ನಟ ಶಾರುಖ್ ಖಾನ್ ಅವರ ಒಟ್ಟು ಆಸ್ತಿ ಸುಮಾರು 7,300 ಕೋಟಿ ರೂಪಾಯಿಗಳು. ಸಿನಿಮಾಗಳ ನಟನೆಯ ಜೊತೆಗೆ, ಅವರು ಪ್ರೊಡಕ್ಷನ್ ಹೌಸ್, ಐಪಿಎಲ್ ತಂಡ ಮತ್ತು ಇತರ ವ್ಯವಹಾರಗಳಿಂದ ಹಣ ಗಳಿಸುತ್ತಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Bollywood King Khan Shah Rukh Khan) ಗಳಿಕೆ ಬೆಟ್ಟದಷ್ಟಿದೆ. ಜೀರೋದಿಂದ ಹೀರೋ (Zero to Hero) ಆದ ನಟರಲ್ಲಿ ಶಾರುಖ್ ಖಾನ್ ಒಬ್ಬರು. ಈಗ ಬಾಲಿವುಡ್ ನ ಶ್ರೀಮಂತ ಆಕ್ಟರ್ (Bollywoods richest actor) ಪಠಾಣ್. ಒಂದು ಮೂಲದ ಪ್ರಕಾರ ಶಾರುಕ್ ಖಾನ್ ನೆಟ್ ವರ್ತ್ (Net Worth) 7,300 ಕೋಟಿ ರೂಪಾಯಿ. ಬರೀ ಸಿನಿಮಾದಿಂದ ಇಷ್ಟೊಂದು ಬಂತಾ ಅಂತ ನೀವು ಕೇಳ್ಬಹುದು. ಶಾರುಕ್ ಫಿಲ್ಮ್ ಗೆ ಮಾತ್ರ ಸೀಮಿತ ಆಗಿಲ್ಲ. ಅವರ ದುಡಿಮೆ ಸೋರ್ಸ್ ಬೇರ್ ಬೇರೆ ಇದೆ. 58 ವರ್ಷದ ಶಾರುಕ್ ಖಾನ್ ಈಗ್ಲೂ ಫಿಟ್ ಆಂಡ್ ಫೈನ್. ನಟನೆ ಜೊತೆ ಸಭ್ಯ ನಟ ಎಂಬ ಹೆಸರು ಗಳಿಸಿದ್ದಾರೆ.
ಶಾರುಕ್ ಖಾನ್ ಗಳಿಕೆ ಮೂಲಗಳು :
ಪ್ರೊಡಕ್ಷನ್ ಹೌಸ್ : ಬಾಲಿವುಡ್ ನಲ್ಲಿ ದೊಡ್ಡ ಸಾಮ್ರಾಜ್ಯ ಹೊಂದಿರುವ ಶಾರುಖ್ ಖಾನ್, ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. ಅವರ ಪ್ರೊಡಕ್ಷನ್ ಹೌಸ್ ಹೆಸರು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್. ಶಾರುಕ್ ಹಾಗೂ ಪತ್ನಿ ಗೌರಿ ಖಾನ್ ನಡೆಸುತ್ತಿರುವ ಈ ಪ್ರೊಡಕ್ಷನ್ ಹೌಸ್ ಪ್ರತಿ ವರ್ಷ 500 ಕೋಟಿ ಗಳಿಸುತ್ತದೆ.
Chaitra Achar : ಚೈತ್ರಾ ಆಚಾರ್ ಹೃದಯದ ಮಾತು ಲವ್ ಆಗಿತ್ತು, ಬ್ರೇಕ್ ಅಪ್ ಆಯ್ತು !
ಐಪಿಎಲ್ ತಂಡದ ಮಾಲೀಕ : ಕಿಂಗ್ ಖಾನ್ ಕೋಲ್ಕತ್ತಾ ನೈಟ್ ರೈಡರ್ಸ್ ಜವಾಬ್ದಾರಿ ಹೊತ್ತಿದ್ದಾರೆ. ನಟಿ ಜೂಹಿ ಚಾವ್ಲಾ ಅವರೊಂದಿಗೆ ತಂಡದ ಸಹ-ಮಾಲೀಕರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಕೆಕೆಆರ್ ಪ್ರತಿ ವರ್ಷ 250 ರಿಂದ 270 ಕೋಟಿ ರೂಪಾಯಿ ಗಳಿಸುತ್ತದೆ. ಇವುಗಳಲ್ಲಿ ಆಟಗಾರರ ಖರೀದಿ ಮತ್ತು ನಿರ್ವಹಣೆಗೆ 100 ಕೋಟಿ ಖರ್ಚು ಮಾಡಿದ್ರೂ ಆದಾಯ ವರ್ಷಕ್ಕೆ 150 ಕೋಟಿ. ಶಾರುಕ್ ಖಾನ್ ಇದ್ರಲ್ಲಿ ಶೇಕಡಾ 55 ರಷ್ಟು ಪಾಲನ್ನು ಹೊಂದಿದ್ದಾರೆ. ಟೀಂನಿಂದ ಶಾರುಖ್ ಖಾನ್ ಬ್ಯಾಂಕ್ ಗೆ 80 ಕೋಟಿ ರೂಪಾಯಿ ಪ್ರತಿ ವರ್ಷ ಸೇರುತ್ತೆ.
ಕಿಡ್ಜಾನಿ ಷೇರು : ಶಾರುಖ್ ಖಾನ್ ಕಿಡ್‌ಜಾನಿಯಾದ ಫ್ರಾಂಚೈಸಿ ಇಮ್ಯಾಜಿನೇಶನ್ ಎಡ್ಯೂಟೈನ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹ ಮಾಲೀಕರಾಗಿದ್ದಾರೆ. ಆದ್ರೆ ಇದ್ರಲ್ಲಿ ಶಾರುಕ್ ಗಳಿಕೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ.
ಶಾರುಕ್ ಸಿನಿಮಾ : ಸಿನಿಮಾಗಳಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಶಾರುಕ್ ಖಾನ್ ಒಬ್ಬರು. ವರ್ಷಕ್ಕೊಂದು ಎರಡು ಸಿನಿಮಾ ಮಾಡಿದ್ರೂ ಕಿಂಗ್ ಖಾನ್ ಗಳಿಗೆ ಸಿಕ್ಕಾಪಟ್ಟೆ ಇದೆ. ಪ್ರತಿ ಚಿತ್ರಕ್ಕೆ 150 ಕೋಟಿಗಿಂತ ಹೆಚ್ಚು ಚಾರ್ಜ್ ಮಾಡುವ ಶಾರುಕ್ ಪಠಾಣ್ ಚಿತ್ರಕ್ಕೆ ಸಂಭಾವನೆ ಪಡೆಯದೇ ಲಾಭದಲ್ಲಿ ಪಾಲು ಪಡೆದಿದ್ದರು. ಪಠಾಣ್ (Pathan) ಚಿತ್ರವೊಂದರಲ್ಲೇ ಶಾರುಕ್ 200 ಕೋಟಿ ಗಳಿಸಿದ್ದಾರೆ.
ಜಾಹೀರಾತಿನಿಂದ ಬರುತ್ತೆ ಆದಾಯ : ಶಾರುಕ್ ಖಾನ್ ಸಿನಿಮಾ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ತಾರೆ. ಮೂಲಗಳ ಪ್ರಕಾರ ಒಂದು ಜಾಹೀರಾತಿಗೆ ಶಾರುಕ್ 3.5 ರಿಂದ 4 ಕೋಟಿ ಚಾರ್ಜ್ ಮಾಡ್ತಾರೆ.
ಸೋಶಿಯಲ್ ಮೀಡಿಯಾ (Social Media) ಗಳಿಕೆ : ಇಷ್ಟೇ ಅಲ್ಲ ಶಾರುಕ್ ಖಾನ್ ಸೋಶಿಯಲ್ ಮೀಡಿಯಾ ಮೂಲಕವೂ ಹಣ ಸಂಪಾದನೆ ಮಾಡ್ತಿದ್ದಾರೆ. ಎಕ್ ನಲ್ಲಿ ಶಾರುಕ್ ಖಾನ್ ಫಾಲೋವರ್ಸ್ ಸಂಖ್ಯೆ 44.1 ಮಿಲಿಯನ್ ಇದೆ. ಸೆಲೆಬ್ರಿಟಿ, ಬಿಲಿಯನೇರ್ ಕೆಟಗರಿಗೆ ಬಂದ್ರೆ ಎಕ್ಸ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರಲ್ಲಿ ಶಾರುಕ್ ಅಗ್ರ ಸ್ಥಾನದಲ್ಲಿದ್ದಾರೆ.
Dr. Bro : ಯೂಟ್ಯೂಬಿನಿಂದ ಬರೋ ಆದಾಯ ರಿವೀಲ್ ಮಾಡಿದ ಡಾ.ಬ್ರೋ, ಸುಳ್ಳು 25 ಲಕ್ಷಕ್ಕೂ ಹೆಚ್ಚು ಬರುತ್ತೆಂದ ನೆಟ್ಟಿಗರು
ಒಂದು ವರ್ಷದಲ್ಲಿ 1000 ಕೋಟಿ ಗಳಿಕೆ : ಶಾರುಕ್ ಖಾನ್ ವರ್ಷಕ್ಕೆ 1000 ಕೋಟಿ ಗಳಿಸ್ತಾರೆ. ಹಿಂದಿನ ವರ್ಷ ಫೋರ್ಬ್ಸ್ ಇಂಡಿಯಾ (Forbes India) ಶಾರುಕ್ ಖಾನ್ ಆದಾಯ 6300 ಕೋಟಿ ಎಂದು ವರದಿ ಮಾಡಿತ್ತು. ಈ ಬಾರಿ ಶಾರುಕ್ ಖಾನ್ ನಿವ್ವಳ ಆದಾಯ 7300 ಕೋಟಿಯಾಗಿದೆ.