ಚಂದನ್​-ನಿವೇದಿತಾ ರೊಮ್ಯಾನ್ಸ್​ ವಿಡಿಯೋ: ಬೆಸ್ಟ್​ ಕಪಲ್ ಎನ್ನುತ್ತಲೇ ಉದ್ದ ಕೂದ್ಲು ಮಿಸ್ ಮಾಡ್ಕೊಂಡ ಫ್ಯಾನ್ಸ್!

ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಹೊಸ ರೀಲ್ಸ್​ ಒಂದನ್ನು ಶೇರ್​ ಮಾಡಿದ್ದಾರೆ. ಇವರ ರೊಮ್ಯಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಜೊತೆಗೆ ಥಹರೇವಾರಿ ಕಮೆಂಟ್ಸ್​ಗಳು ಬರುತ್ತಿವೆ. 
 

Nivedita Gowda and Chandan Shetty share romance reels fans comment  suc

ಬಿಗ್​ಬಾಸ್ ಸುಂದರಿ, ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಅವರು ಸೋಷಿಯಲ್ ಮೀಡಿಯಾದಲ್ಲಿ  ಸಕತ್​ ಆ್ಯಕ್ಟಿವ್. ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್​ಟೈನ್​ಮೆಂಟ್ ಕೊಡ್ತಿರೋ ಇವರು, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಇವರಿಬ್ಬರೂ ಜೊತೆಗಿರುವ ಹಲವಾರು ಫೋಟೋಗಳು ವೈರಲ್​ ಆಗುತ್ತಿವೆ. ಕಿರುತೆರೆ ಸೆಲೆಬ್ರಿಟಿಗಳ ಮಧ್ಯೆ ಗುರುತಿಸಿಕೊಳ್ತಿರೋ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾ ಇತ್ತೀಚೆಗೆ  ಮ್ಯೂಸಿಕ್ ಆಲ್ಬಂ ಕೂಡ ಮಾಡಿ ಸುದ್ದಿಯಾಗಿದ್ದಾರೆ. ಇದು  ರಿಲೀಸ್​ಗೆ ರೆಡಿಯಾಗಿದೆ. ಇದರಲ್ಲಿ ನಟಿ ಶಮಂತ್ ಅಥವಾ ಬ್ರೋ (Bro Gowda) ಗೌಡ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇವುಗಳ ನಡುವೆಯೇ ಇನ್ಸ್​ಸ್ಟಾಗ್ರಾಮ್​ನಲ್ಲಿ ಸಕತ್​ ಆ್ಯಕ್ಟೀವ್​ ಇದ್ದು, ಆಗ್ಗಾಗ್ಗೆ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಆಗಾಗ ಸೋಲೋ ಟ್ರಾವೆಲ್ ಮಾಡುತ್ತಾ, ಇನ್ನು ಕೆಲವೊಮ್ಮೆ ಪತಿಯ ಜೊತೆ ಸುತ್ತಾಟದಲ್ಲಿ ತೊಡಗಿ ಅದರ ವಿಡಿಯೋ ಶೇರ್​ ಮಾಡುತ್ತಿರುತ್ತಾರೆ. 

ಇವರ ಈ ವಿಡಿಯೋಗಳಿಂದ ಆಗಾಗ್ಗೆ ಟ್ರೋಲ್​ಗೆ ಒಳಗಾಗುವುದೂ ಇದೆ. ಆದರೆ ಅದೆಷ್ಟೇ ಟ್ರೋಲ್​  ಮಾಡಿದರೂ ನಿವೇದಿತಾ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಈಚೆಗೆ  ಮುಂದಿನ ಪಯಣ ಎಲ್ಲಿಗೆ ಹೇಳಿ ಅಂತ ಏರ್ಪೋರ್ಟಲ್ಲಿ ಡ್ಯಾನ್ಸ್ ಮಾಡಿ ಟ್ರೋಲ್​ಗೆ ಒಳಗಾಗಿದ್ದರು ಈಕೆ. ನಟಿ ಜಾನ್ವಿ ಜೊತೆ  ನಿವೇದಿತಾ ಗೌಡ ಏರ್​ಪೋರ್ಟ್​ನಲ್ಲಿ  ಡ್ಯಾನ್ಸ್​ ಮಾಡಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು.  ಇದು ಸಾರ್ವಜನಿಕ ಸ್ಥಳ ಆಗಿರುವ ಕಾರಣ,  ಸ್ವಲ್ಪವೂ ಮ್ಯಾನರ್ಸ್​ ಬೇಡ್ವಾ ಎಂದು ಜನ ಬೈದಿದ್ದರು.  ಕಾಮನ್​ ಸೆನ್ಸ್ ಎನ್ನೋದು ಸ್ವಲ್ಪನಾದ್ರೂ ಇದ್ಯಾ ಎಂದು ಪ್ರಶ್ನಿಸಿದ್ದರು.  ಇದಕ್ಕೆಲ್ಲಾ ತಡೆ ಕೆಡಿಸಿಕೊಳ್ಳದಿದ್ದ ನಿವೇದಿತಾ ಮೊನ್ನೆ ತಾನೇ  ಗೋವಾಗೆ ಹಾರಿ ಬೋಟಲ್ಲಿ ನಿಂತು ಫೋಟೋಗೆ ಪೋಸ್​ ಕೊಟ್ಟಿದ್ದರು. ಹ್ಯಾಪಿ ಇವ್ನಿಂಗ್ ಫ್ರರ್ಮ್​ ಗೋವಾ ಎಂದು ಇದಕ್ಕೆ ಕ್ಯಾಪ್ಷನ್​ ಕೊಟ್ಟಿದ್ದರು.  ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದರು. 

ಗೋವಾದಲ್ಲಿ ನಿವೇದಿತಾ ಗೌಡ ಪೋಸ್​, ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ನೆಟ್ಟಿಗರು!

ಇದಕ್ಕೂ ಮುನ್ನ  ಅಮೆರಿಕಕ್ಕೆ ಪತಿ ಚಂದನ್​ ಜೊತೆ ಹೋಗಿದ್ದ ನಿವೇದಿತಾ ಅವರು, ಅಮೆರಿಕದಲ್ಲಿರುವ ಸೇಂಟ್​ ಮೇರಿ ಚರ್ಚ್ ಹಾಗೂ ನಯಾಗರ ಫಾಲ್ಸ್​ ಬಳಿ ರೀಲ್ಸ್ ಮಾಡಿ ಗಮನ ಸೆಳೆದಿದ್ದರು. ಅದರ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ (instagram) ಶೇರ್​ ಮಾಡಿಕೊಂಡಿದ್ದರು. ತುಂತುರು ಮಳೆ ಬೀಳುತ್ತಿರುವಾಗ ಹೀಗೊಂದು ವಾಕಿಂಗ್​ಗೆ ಬಂದಿರುವುದಾಗಿ ನಿವೇದಿತಾ ಬರೆದುಕೊಂಡಿದ್ದರು. ಅಮೆರಿಕದ  ಹವಾಮಾನವನ್ನು ಸಕತ್​ ಎಂಜಾಯ್​ ಮಾಡುತ್ತಿರುವಂತೆ ತೋರುತ್ತಿತ್ತು. ನಯಾಗರ ಫಾಲ್ಸ್​ ಬಳಿಯ ರೀಲ್ಸ್​ ಹಂಚಿಕೊಂಡಾಗ ಫ್ಯಾನ್ಸ್​ ನೀರಿನಲ್ಲಿ ಕರಗೋಯ್ತಾ ಸಕ್ಕರೆ ಬೊಂಬೆ ಎಂದು ಫ್ಯಾನ್ಸ್​ ಹೇಳಿದ್ದರು. 

ಇದೀಗ ಇವೆಲ್ಲಾ ಟೂರ್​ಗಳನ್ನು ಒಳಗೊಂಡ ಇನ್ನೊಂದು ರೀಲ್ಸ್​ ಶೇರ್​ ಮಾಡಿದ್ದಾರೆ. ಇದರಲ್ಲಿ ನಿವೇದಿತಾ ಅವರು ಪತಿಯ ಜೊತೆ ರೊಮ್ಯಾನ್ಸ್​ನಲ್ಲಿ ಮೂಡ್​ನಲ್ಲಿ ಇರುವುದನ್ನು ನೋಡಬಹುದು. ನಯಾಗರ ಫಾಲ್ಸ್​ ಸೇರಿದಂತೆ ವಿವಿಧ ಕಡೆಗಳಲ್ಲಿ ತೆಗೆದಿರುವ ವಿಡಿಯೋಗಳನ್ನು ಒಟ್ಟುಗೂಡಿಸಿ ಕಪಲ್​ ಸಕತ್​ ಎಂಜಾಯ್​  ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿವಿಧ ರೀತಿಯ ಬಟ್ಟೆಗಳನ್ನು ತೊಟ್ಟು ನಿವೇದಿತಾ ಅವರಿಗೆ ಫ್ಯಾನ್ಸ್​ ಕರೆಯುವಂತೆ ಗೊಂಬೆಯ ರೀತಿಯಲ್ಲಿಯೇ  ಕಾಣಿಸುತ್ತಿದ್ದಾರೆ. ಆದರೆ ಈಕೆಯ ಫ್ಯಾನ್ಸ್​ ಮಾತ್ರ ನಿವೇದಿತಾ ಅವರ ಉದ್ದನೆಯ ಕೂದಲನ್ನು ನೆನಪಿಸುತ್ತಿದ್ದಾರೆ. ಏಕೆಂದರೆ ನಿವೇದಿತಾ ಗೌಡ ಅಂದ್ರೇನೇ ಉದ್ದ ಕೂದಲಿನ ಹುಡುಗಿ ಅಂತ ಕರೆಯಲಾಗುತ್ತಿತ್ತು. ಕೆಲ ತಿಂಗಳ ಹಿಂದೆ ಈಕೆ ಬಾಬ್​ಕಟ್​ (Bobcut) ಮಾಡಿಸಿಕೊಂಡು ವಿಡಿಯೋ ಮಾಡಿದಾಗ ಅಭಿಮಾನಿಗಳು ಶಾಕ್​ ಆಗಿದ್ದರು. ಕೂದಲು ಕಟ್​ ಮಾಡಿಕೊಂಡಿಲ್ಲ, ವಿಗ್​ ಹಾಕಿದ್ದಾರೆ ಎಂದು ಸಮಾಧಾನ ಪಟ್ಟುಕೊಂಡಿದ್ದರು. ಆದರೆ ಅಸಲಿಗೆ ನಿವೇದಿತಾ ನಿಜವಾಗಿಯೂ ಕೂದಲನ್ನು ಕಟ್​ ಮಾಡಿಕೊಂಡಿದ್ದಾರೆ. ಆದ್ದರಿಂದ ಈಗಲೂ ಫ್ಯಾನ್ಸ್​ ಅವರ ಕೂದಲನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಇವರ ರೊಮ್ಯಾನ್ಸ್​ ನೋಡಿ ಸೆಲೆಬ್ರಿಟಿ ಜೋಡಿ ಎಂದರೆ ಹೀಗಿರಬೇಕು ಅಂತಿದ್ದದಾರೆ ಫ್ಯಾನ್ಸ್​.  

ಏರ್ಪೋರ್ಟಲ್ಲಿ ನಿವೇದಿತಾ ಗೌಡ ಡ್ಯಾನ್ಸ್, ಕಾಮನ್ ಸೆನ್ಸ್ ಇಲ್ವಾ ಕೇಳಿದ ಫ್ಯಾನ್ಸ್!
 

Latest Videos
Follow Us:
Download App:
  • android
  • ios