ಕ್ರಿಸ್‌ಮಸ್‌ ಡ್ರಿಂಕ್ಸ್‌ ಮತ್ತಿನಲ್ಲಿ ಫ್ರೆಂಡ್‌ಗೆ ಮುತ್ತು ಕೊಟ್ಟ ನಿವೇದಿತಾ: ಫೋಟೋ ನೋಡಿ ಟ್ರೋಲಿಗರು ಕೇಳ್ಬೇಕಾ?

ಕ್ರಿಸ್‌ಮಸ್‌ಗೆ ಇನ್ನೂ ಹದಿನೈದು ದಿನ ಇರುವಾಗಲೇ ಹಬ್ಬದ ಮೂಡ್‌ನಲ್ಲಿ ಇರುವುದಾಗಿ ಹೇಳಿರುವ ನಿವೇದಿತಾ, ಡ್ರಿಂಕ್ಸ್‌ ಮತ್ತಿನಲ್ಲಿ ಸ್ನೇಹಿತೆಗೆ ಮುತ್ತು ಕೊಟ್ಟು ಫೋಟೋ ಶೇರ್‍‌ ಮಾಡಿಕೊಂಡಿದ್ದಾರೆ.  ಟ್ರೋಲಿಗರು ಬಿಡ್ತಾರಾ? 
 

Nivedita Gowda in Christmas mood sharing drinks photo along with her friend suc

ಕ್ರಿಸ್‌ಮಸ್‌ಗೆ ಇನ್ನೂ ಎರಡು ವಾರಗಳಿವೆ. ಆದರೆ ಇದಾಗಲೇ ಕ್ರಿಸ್‌ಮಸ್‌ ಪಾರ್ಟಿ ಮಾಡಿದ್ದಾರೆ ನಟಿ, ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ. ಇದಾಗಲೇ ಕ್ರಿಸ್‌ಮಸ್‌ ಶಾಪಿಂಗ್‌ ಮಾಡಿ ಅದರ ವಿಡಿಯೋ ಶೇರ್‍‌ ಮಾಡಿಕೊಂಡಿರೋ ನಟಿ, ಈಗ ಕ್ರಿಸ್‌ಮಸ್‌ ಡ್ರಿಂಕ್ಸ್‌ ಎಂದು ಕೆಂಪು ಬಣ್ಣದ ಪಾನೀಯ ತೋರಿಸಿದ್ದಾರೆ. ಅಷ್ಟಕ್ಕೂ ಕ್ರಿಸ್‌ಮಸ್‌ನಲ್ಲಿ ವೈನ್‌ಗಳದ್ದೇ ಕಾರುಬಾರು. ಇದೇ ಕಾರಣಕ್ಕೆ ನಿವೇದಿತಾ ಕೂಡ ವೈನ್‌ ಹಿಡಿದುಕೊಂಡಿರಬಹುದು ಎನ್ನುವುದು ನೆಟ್ಟಿಗರ ಅಭಿಮತ. ಅದೇನೇ ಇದ್ದರೂ, ಇದೀಗ ಅವರು ಹಾಕಿರುವ ಫೋಟೋಗಳಿಗೆ ಇನ್ನಿಲ್ಲದಂತೆ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಕ್ರಿಸ್‌ಮಸ್‌ಗೆ ಇನ್ನೂ ಹದಿನೈದು ದಿನ ಇರುವಾಗಲೇ ವೈನ್‌ ಕುಡಿದದ್ದೂ ಅಲ್ಲದೇ, ಸ್ನೇಹಿತೆಗೆ ಮುತ್ತು ಕೊಟ್ಟಿರುವ ಫೋಟೋವನ್ನೂ ಶೇರ್‍‌ ಮಾಡಿಕೊಂಡು ಸಾಕಷ್ಟು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ ನಿವೇದಿತಾ. 

ಇದೇ ಸ್ನೇಹಿತೆಯ ಜೊತೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ತಿರೋದನ್ನೂ ನೋಡಲಾಗ್ತಿಲ್ಲ ನೆಟ್ಟಿಗರಿಗೆ. ಅದಕ್ಕೂಒಂದು ಹೆಸರು ಇಟ್ಟುಬಿಟ್ಟಿದ್ದಾರೆ. ಈ ಸ್ನೇಹಿತೆಯ ಜೊತೆ ರೀಲ್ಸ್‌ ಮಾಡುತ್ತಿದ್ದಾರೆ.  ಒಮ್ಮೆ ಬಾತ್‌ರೂಮ್‌ನಲ್ಲಿ, ಇನ್ನೊಮ್ಮೆ ಬೆಡ್‌ರೂಮ್‌ನಲ್ಲಿ... ಹೀಗೆ  ಈ ಇಬ್ಬರು ಸ್ನೇಹಿತೆಯರು  ಮೈಚಳಿ ಬಿಟ್ಟು ಡಾನ್ಸ್‌ ಮಾಡುತ್ತಿರುತ್ತಾರೆ.  ಇಲ್ಲಿಯವರೆಗೆ ಡೀಸೆಂಟ್‌ ಬಟ್ಟೆ ಧರಿಸುತ್ತಿದ್ದ ಅವರ ಸ್ನೇಹಿತೆ ಕೂಡ ನಿವೇದಿತಾ ಹಾದಿಯನ್ನೇ ಹಿಡಿದಿರುವ ಕಾರಣ ಕಮೆಂಟಿಗರು ನಾಲಿಗೆ ಹರಿಬಿಡುತ್ತಿದ್ದಾರೆ.  ಕೆಲ ದಿನಗಳ ಹಿಂದೆ ಇದೇ ಸ್ನೇಹಿತೆ ಜೊತೆ ಬೆಡ್​ರೂಮ್​ನಲ್ಲಿ ನಿವೇದಿತಾ ತುಂಟಾಟವಾಡಿದ್ದರು. ಸುಮ್ಮನೇ ಸ್ನೇಹಿತೆಯನ್ನು ಅಪ್ಪಿಕೊಂಡಿದ್ದರು. ಇಬ್ಬರೂ ಸ್ನೇಹಿತೆಯರು ತುಂಬಾ ಕ್ಲೋಸ್​​ ಫ್ರೆಂಡ್ಸ್​ ರೀತಿಯಲ್ಲಿ ನಗುತ್ತಿದ್ದಾರೆ. ಆದರೆ ಇದಕ್ಕೂ ನೆಟ್ಟಿಗರು ಸುಮ್ಮನೇ ಬಿಟ್ಟಿಲ್ಲ. ಬೆಡ್​ರೂಮ್​ನಲ್ಲಿ ಈ ಪರಿಯ ಚೆಲ್ಲಾಟ ಮಾಡಿದ್ರೆ ಇದನ್ನು ಏನು ಅಂದುಕೊಳ್ಳಬೇಕು ಎಂದು ಪ್ರಶ್ನಿಸಿದ್ರು. ಅದರಲ್ಲಿಯೂ ನಿವೇದಿತಾ ಸ್ನೇಹಿತೆಯ ಬಟ್ಟೆಯ ಬಟನ್​ ಬಿಚ್ಚುವಂತೆ ಮಾಡಿದ್ದು, ಇದಕ್ಕೆ ಸಕತ್​ ನೆಗೆಟಿವ್​ ಕಮೆಂಟ್ಸ್​ ಬಂದಿತ್ತು.  ಇನ್ನು ಕೆಲವರು ಇಬ್ಬರು ಸ್ನೇಹಿತೆಯರು ಸುಮ್ಮನೇ ಎಂಜಾಯ್​ ಮಾಡಬಾರದಾ? ಅದಕ್ಕೂ ಕೆಟ್ಟ ಕಮೆಂಟ್ಸ್​ ಯಾಕೆ ಎಂದು ಕಮೆಂಟ್ಸ್​ ಹಾಕುತ್ತಿರುವವರ ವಿರುದ್ಧ ಕಿಡಿ ಕಾರಿದ್ದೂ ಇದೆ.

ಟೋಲ್‌ನಲ್ಲಿ ಲೇಟಾದ್ರೆ ದುಡ್ಡು ಕೊಡ್ಬೇಡಿ- ರೂಲ್ಸ್‌ ಹೇಳಿದ ಲಾಯರ್ ಜಗದೀಶ್‌ಗೇ ದಂಡ ಹಾಕಿ ಅನ್ನೋದಾ ನೆಟ್ಟಿಗರು?

 ಅಂದಹಾಗೆ, ಈ ಸ್ನೇಹಿತೆಯ ಹೆಸರು  ವಾಣಿ ಜಿ.ಎಸ್​.   ಈ ಹೊಸ ಗೆಳತಿ ಯಾರು ಎಂಬ ಬಗ್ಗೆ ಅಭಿಮಾನಿಗಳು ತಡಕಾಡುತ್ತಿದ್ದಾರೆ.  ವಾಣಿ ಅವರು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದಾಗಲೇ ಹಲವಾರು ರೀಲ್ಸ್​ ಮಾಡಿ ಶೇರ್​ ಮಾಡಿದ್ದಾರೆ. ಅಷ್ಟಕ್ಕೂ,  ವಿಚ್ಛೇದನದ ಬಳಿಕ,  ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. 

ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ವಿಚ್ಛೇದನದ ಬಳಿಕ  ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್‌ ಮಟ್ಟಿಗೂ ಬಂದು ನಿಂತಿದ್ದಾರೆ.   ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಈ ಬಾರಿಯೂ ಅದೇ ರೀತಿ ಕೇಳಲಾಗುತ್ತಿದೆ. ಮಾತ್ರವಲ್ಲದೇ ಅತ್ಯಂತ ಅಶ್ಲೀಲ ಎನ್ನುವಂಥ ಕಮೆಂಟ್‌ಗಳ ಸುರಿಮಳೆಯೂ ತಪ್ಪಿದ್ದಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್​ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ!

ಲಕ್ಷ್ಮೀನಿವಾಸ ಚಿನ್ನುಮರಿ ಪಾತ್ರಕ್ಕೆ ತಂಗಿ ಬದ್ಲು ಅಕ್ಕ ಬರ್ತಾಳಾ? ನೆಟ್ಟಿಗರಿಗೆ ಡೌಟ್‌ ಬಂದಿದ್ಯಾಕೆ?

Latest Videos
Follow Us:
Download App:
  • android
  • ios