ಟೋಲ್‌ಗೇಟ್‌ಗಳಲ್ಲಿ ಮೂರು ನಿಮಿಷಗಳಿಗಿಂತ ಹೆಚ್ಚು ಸಮಯ ಕಾಯಬೇಕಾದರೆ, ಶುಲ್ಕ ಪಾವತಿಸದೆ ಹೋಗಬಹುದೆಂದು ವಕೀಲ ಜಗದೀಶ್‌ ತಿಳಿಸಿದ್ದಾರೆ. ನೆಲಮಂಗಲದಲ್ಲಿ ಪ್ರಾಯೋಗಿಕವಾಗಿ ಇದನ್ನು ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ. ಆದರೆ, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆಗಾಗಿ ದಂಡ ವಿಧಿಸಬೇಕೆಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ.

ಟೋಲ್‌ಗೇಟ್‌ಗಳಲ್ಲಿ ಟ್ರಾಫಿಕ್‌ ಜ್ಯಾಂ ಆಗುವುದು ಸಹಜ. ಆದರೆ ಎಷ್ಟೇ ಲೇಟಾದ್ರೂ ಸಿಕ್ಕಾಪಟ್ಟೆ ಹಣವನ್ನು ತೆತ್ತು ಅಲ್ಲಿಂದ ಹೋಗಲೇಬೇಕಾದ ಅನಿವಾರ್ಯತೆ ವಾಹನ ಸವಾರರಿಗೆ ಇದ್ದೇ ಇದೆ. ಆದರೆ ಈ ಬಗ್ಗೆ ಕಾನೂನಿನ ಮಾಹಿತಿಯನ್ನು ನೀಡಿದ್ದಾರೆ ಬಿಗ್‌ಬಾಸ್‌ ಲಾಯರ್ ಜಗದೀಶ್‌. ಟೋಲ್‌ ಗೇಟ್‌ನಲ್ಲಿ ಲೇಟಾದರೆ, ಅಲ್ಲಿ ಟ್ರಾಫಿಕ್‌ ಅನ್ನು ಮೂರು ನಿಮಿಷಗಳ ಒಳಗೆ ಕ್ಲಿಯರ್‍‌ ಮಾಡದೇ ಹೋದರೆ, ದುಡ್ಡನ್ನು ಕೊಡಬೇಕಿಲ್ಲ, ಟೋಲ್‌ ಫ್ರೀಯಾಗಿ ಹೋಗಬಹುದು ಎನ್ನುವುದನ್ನು ವಿಡಿಯೋದಲ್ಲಿ ಹೇಳಿದ್ದಾರೆ. 

ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಈ ವಿಡಿಯೋ ಮಾಡಿರುವ ಜಗದೀಶ್‌ ಅವರು, ಟೋಲ್‌ನ ನಿಯಮದ ಪ್ರಕಾರ ಮೂರು ನಿಮಿಷಕ್ಕಿಂತ ಹೆಚ್ಚಿಗೆ ವೇಟ್‌ ಮಾಡಿದರೆ, ಉಚಿತವಾಗಿ ಪ್ರಯಾಣಿಸಬಹುದು ಎನ್ನುತ್ತಲೇ ಅದನ್ನು ಪರೀಕ್ಷೆ ಮಾಡುತ್ತೇನೆ ಎಂದಿದ್ದಾರೆ. ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಇಲ್ಲೇ ನಿಂತರೂ ಇನ್ನೂ ಟ್ರಾಫಿಕ್‌ ಕ್ಲಿಯರ್‍‌ ಆಗುವ ಯಾವುದೇ ಲಕ್ಷಣ ಇಲ್ಲ ಎನ್ನುತ್ತಲೇ ಅಲ್ಲಿಂದ ವಿಡಿಯೋ ಮಾಡಿದ್ದಾರೆ. ಜೊತೆಗೆ ವಾಹನ ಸವಾರರಿಗೆ ಅನುಕೂಲ ಆಗುವ ನಿಯವವನ್ನೂ ಹೇಳಿದ್ದಾರೆ. ನಿಯಮದ ಪ್ರಕಾರ, ಮೂರು ನಿಮಿಷಕ್ಕಿಂತ ಟೋಲ್‌ ಗೇಟ್‌ನಲ್ಲಿ ನಿಂತುಕೊಂಡರೆ ದುಡ್ಡು ಕೊಡಬೇಕೆಂದು ಇಲ್ಲ. ನೀವ್ಯಾರೂ ದುಡ್ಡು ಕೊಡಬೇಡಿ ಎಂದಿದ್ದಾರೆ.

ದೇವರ ಆಶೀರ್ವಾದ ಪಡೆದು 1.6 ಲಕ್ಷ ಎಗರಿಸಿದ ಖದೀಮ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ 'ಭಕ್ತಿ'

ಬಳಿಕ ಹತ್ತು ನಿಮಿಷ ಆಗಿದೂ ಇನ್ನೂ ಕ್ಲಿಯರ್‍‌ ಆಗಿಲ್ಲದ್ದನ್ನು ನೋಡಿ ಬೇಸರ ವ್ಯಕ್ತಪಡಿಸಿದ ಅವರು, ನಿಯಮ ಪುಸ್ತಕದಲ್ಲಿ ಮಾತ್ರನಾ ಎಂಬುದನ್ನು ಈಗಲೇ ಪರೀಕ್ಷಿಸುವೆ ಎಂದಿದ್ದಾರೆ. ಟೋಲ್‌ಗೇಟ್‌ಗಳು ಮಾಫಿಯಾ ಆಗಿಬಿಟ್ಟಿದೆ. ಆದರೆ ಕಿಲೋ ಮೀಟರ್‍‌ಗಟ್ಟಲೆ ಗಾಡಿ ನಿಂತಿವೆ. ನಿಮಯದ ಪ್ರಕಾರ ಮೂರು ನಿಮಿಷಕ್ಕಿಂತ ಒಳಗಡೆನೇ ಕ್ಲಿಯರ್‍‌ ಮಾಡಬೇಕು. ಆದರೆ ಇವರು ಮಾಡುವ ಹಾಗೆ ಕಾಣಿಸುತ್ತಿಲ್ಲ ಎನ್ನುತ್ತಲೇ ಲಾಯರ್ ಜಗದೀಶ್‌ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಹಣವನ್ನು ಕೇಳಿದ್ದಾರೆ. ಆಗ ಲಾಯರ್ ಜಗದೀಶ್‌ ಕಾನೂನು ಮಾತನಾಡಿದ್ದಾರೆ. ಇವರ ಬಳಿ ಮಾತನಾಡಿ ಪ್ರಯೋಜನ ಇಲ್ಲ ಎನ್ನುವಂತೆ ಸಿಬ್ಬಂದಿ ಆಯ್ತಣ್ಣ, ನಾವು ಬಡ ಬಗ್ಗರು ಹೋಗಿ ಎಂದಿದ್ದಾರೆ. ಧನ್ಯವಾದ ಸಲ್ಲಿಸಿ ಲಾಯರ್ ಜಗದೀಶ್‌ ಉಚಿತವಾಗಿ ಹೋಗಿದ್ದಾರೆ. ಬಳಿಕ ಅವರು ಇದು ಸಕ್ಸಸ್‌ಫುಲ್‌ ಸ್ಟೋರಿಯಾಗಿದೆ ಎಂದಿದ್ದಾರೆ. ನಿಮಯವನ್ನು ಎಲ್ಲರೂ ತಿಳಿದುಕೊಳ್ಳಿ ಎಂದಿದ್ದಾರೆ. ಈಗ ನಾನು ಬೆಳ್ಳೂರು ಕ್ರಾಸ್‌ ಶ್ರೀ ಶ್ರೀ ನಿರ್ಮಲಾನಂದ ಗುರೂಜಿ ಅವರನ್ನು ನೋಡಲು ಹೋಗ್ತಾ ಇದ್ದಾನೆ. ಅವರ ಆಶೀರ್ವಾದ ಬೇಕು ಎನ್ನುತ್ತಲೇ ಬಾಲಗಂಗಾಧರ ಮಠದ ಗುಣಗಾನ ಮಾಡಿದ್ದಾರೆ. ದರ್ಶನ್‌ಕೇಸ್‌ ನಡೆಸುತ್ತಿರುವ ಎಸಿಪಿ ಚಂದನ್‌ ಅವರೂ ಇದೇ ಮಠದಲ್ಲಿ ಓದಿರುವುದು ಎಂದಿದ್ದಾರೆ.

ನಿಯಮವನ್ನು ತಿಳಿಸಿದ ಲಾಯರ್ ಜಗದೀಶ್‌ ಅವರಿಗೆ ಒಂದು ಕಡೆ ನೆಟ್ಟಿಗರು ಧನ್ಯವಾದ ಸಲ್ಲಿಸುತ್ತಿದ್ದರೆ, ಇನ್ನೊಂದಿಷ್ಟು ಮಂದಿ ದಂಡ ವಿಧಿಸಿ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ, ಅವರು ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರನ್ನು ಚಲಾಯಿಸಿದ್ದಾರೆ. ಟೋಲ್‌ ಫ್ರೀ ನಿಯಮ ಮಾತನಾಡುವ ಲಾಯರ್‍‌ಗೆ ಫೋನಿನಲ್ಲಿ ಮಾತನಾಡುತ್ತಾ ಕಾರು ಚಲಾಯಿಸಬಾರದು ಎನ್ನುವುದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದ್ದು, ಅಲ್ಲಿ ಅವರು ಉಚಿತವಾಗಿ ಹೋಗಿ ಕಾನೂನು ಪಾಲಿಸಿದಂತೆ, ಈಗಲೂ ದಂಡ ಕಟ್ಟಿ ಕಾನೂನು ಪಾಲಿಸಲಿ ಎನ್ನುತ್ತಿದ್ದಾರೆ!

ಟಿಂಗ್‌, ಟಿಂಗ್‌... ಪ್ರಯಾಣಿಕರೇ ಗಮನಿಸಿ... ರೈಲು ನಿಲ್ದಾಣದ ಹೆಣ್ಣಿನ ದನಿ ಹಿಂದಿರುವುದು ಯುವಕ, ಇವರ ಕಥೆಯೇ ರೋಚಕ!