Asianet Suvarna News Asianet Suvarna News

ಹೃದಯ ಪ್ರೀತಿಯಲ್ಲಿ ಕರಗೋಗಿದೆ ಎಂದ ನಿವೇದಿತಾ! ಹೊಸ ಎಂಟ್ರಿಗೆ ಗ್ರೀನ್​ ಸಿಗ್ನಲ್​ ಕೊಟ್ರಾ? ಯಾರೀತ?

ಅರೆಬರೆ ಡ್ರೆಸ್​ನಲ್ಲಿಯೇ ರೀಲ್ಸ್​ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಕದ್ದಿರೋ ನಟಿ ನಿವೇದಿತಾ ಗೌಡ ಇದೀಗ ಸೀರೆಯುಟ್ಟು ಹೃದಯದ ಕುರಿತು ಏನು ಹೇಳಿದ್ದಾರೆ ನೋಡಿ... ಹೊಸಬನ ಎಂಟ್ರಿ ಆಯ್ತಾ ಕೇಳ್ತಿದ್ದಾರೆ ಫ್ಯಾನ್ಸ್​.
 

Nivedita Gowda has done reels for the song Ishq mein dil bana hai fans asking who is he suc
Author
First Published Sep 14, 2024, 5:03 PM IST | Last Updated Sep 14, 2024, 5:03 PM IST

ನಿವೇದಿತಾ ಗೌಡ ಅವರು ಬಿಗ್‌ಬಾಸ್ ಬಳಿಕ ರೀಲ್ಸ್‌ ಮಾಡಿಕೊಂಡೇ ಕಾಲ ಕಳೆಯುತ್ತಿದ್ದವರು. ಚಂದನ್‌ ಶೆಟ್ಟಿ ಜೊತೆಗೆ ಡಿವೋರ್ಸ್ ಬಳಿಕ ನಟಿ ಟ್ರೋಲ್‌ಗೆ ಒಳಗಾಗುತ್ತಲೇ ಇನ್ನಷ್ಟು ಹೆಸರು ಮಾಡಿದ್ದಾರೆ. ಇದೀಗ ನಟಿಯ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ. ಹಲವು ಆಫರ್‌ಗಳು ಬರುತ್ತಿವೆ. ಕೆಲವು ಜಾಹೀರಾತು ಕಂಪೆನಿಗಳೂ ನಟಿಗೆ ಬೇಡಿಕೆ ಇಟ್ಟಿರುವ ನಡುವೆಯೇ ಕಲರ್ಸ್ ವಾಹಿನಿಯಿಂದಲೂ ಬೇಡಿಕೆ ಬಂದಿದೆ. ಈ ವಾಹಿನಿಯ ಅನುಬಂಧ ಅವಾರ್ಡ್​ಗೆ ಆ್ಯಂಕರ್​ ಆಗಿದ್ದಾರೆ ನಿವೇದಿತಾ. ಇದಾಗಲೇ ಹಲವು ಟಿ.ವಿ ಸೀರಿಯಲ್​ ತಂಡದ ಜೊತೆ ಮಾತನಾಡಿದ್ದು ಅದರ ಪ್ರೊಮೋಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಇದು ಬಿಡುಡೆಯಾಗುತ್ತಲೇ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಟ್ರೋಲ್​ ಆಗುತ್ತಿದೆ. ಒಟ್ಟಿನಲ್ಲಿ ನಿವೇದಿತಾ ಎಂದರೆ ಟ್ರೋಲ್​ಗೆ ಇನ್ನೊಂದು ಹೆಸರು ಎನ್ನುವಂತಾಗಿದೆ. ಈ ಟ್ರೋಲ್​ಗಳಿಂದಲೇ ತಾವು ಈ ಪರಿಯಲ್ಲಿ ಫೇಮಸ್​ ಆಗ್ತಿರೋದು ಎನ್ನುವ ಸತ್ಯ ನಟಿಗೂ ಗೊತ್ತಾಗಿದೆ. ಅದಕ್ಕಾಗಿಯೇ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿದ್ದಾರೆ. 

ಇದೀಗ ನಿವೇದಿತಾ, ಜವಾನ್​ ಚಿತ್ರದ ಇಶ್ಕ್​ ಮೇ ದಿಲ್​ ಬನಾ ಹೈ,  ಇಶ್ಕ್​ ಮೇ ದಿಲ್​ ಫನಾ ಹೈ (ಹೃದಯವು ಪ್ರೀತಿಯಿಂದ ಮಾಡಲ್ಪಟ್ಟಿದೆ. ನನ್ನ ಹೃದಯವು ಪ್ರೀತಿಯಿಂದ ತುಂಬಿಹೋಗಿದೆ) ಎಂಬ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಎಂದಿನಂತೆ ನಟಿ ತಮ್ಮ ಒಂದೆರಡು ಪೋಸ್​ಗಳನ್ನು ನೀಡಿದ್ದಾರೆ. ಆದರೆ ಈ ಬಾರಿ ಸೀರೆ ಉಟ್ಟಿರುವುದೇ ವಿಶೇಷ. ಪ್ರತಿ ಬಾರಿಯೂ ನಿವೇದಿತಾ ರೀಲ್ಸ್​ ಮಾಡಿದಾಗ ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವಿರಾ ಎಂಬ ಪ್ರಶ್ನೆ ಎದುರಾಗುತ್ತದೆ.  ಆದರೆ ಇದೀಗ ನಟಿ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಇದರ ಹೊರತಾಗಿಯೂ ನೆಟ್ಟಿಗರೇನೂ ಸುಮ್ಮನೇ ಕುಳಿತಿಲ್ಲ. ಚಂದನ್​ ಶೆಟ್ಟಿ ಜೊತೆ ಡಿವೋರ್ಸ್​ ಬಳಿಕ, ಪ್ರೀತಿ- ಪ್ರೇಮ ಎನ್ನುವಂಥ ರೀಲ್ಸ್​ ಹಾಕುವುದು, ಅರೆಬರೆ ಡ್ರೆಸ್​ ಹಾಕಿ ದೇಹ ಪ್ರದರ್ಶನ ಮಾಡುವುದು... ಹೀಗೆ ನಿವೇದಿತಾರ ರೀಲ್ಸ್​ಗಳು ಇರುವ ಹಿನ್ನೆಲೆಯಲ್ಲಿ, ಚಂದನ್​ ಶೆಟ್ಟಿ ಬಳಿಕ ಈಕೆಯ ಲೈಫ್​ನಲ್ಲಿ ಯಾರದ್ದೋ ಎಂಟ್ರಿ ಆಗಿದೆ ಎಂದೇ ಹೇಳಲಾಗುತ್ತಿದೆ.

ಚೆನ್ನಾಗಿಯೇ ಇದ್ದ ನಿವೇದಿತಾಗೆ ಇದ್ದಕ್ಕಿದ್ದಂಗೆ ಇದೇನಾಯ್ತು? ವಿಡಿಯೋ ನೋಡಿ ಚಿಂತೆಗೀಡಾದ ಫ್ಯಾನ್ಸ್!

ಇದೀಗ ಪ್ರೀತಿ, ಹೃದಯ ಎಂಬೆಲ್ಲಾ ಅರ್ಥ ಬರುವ ರೀಲ್ಸ್​ ಮಾಡಿದ್ದರಿಂದ ನಿವೇದಿತಾ ಬಾಳಲ್ಲಿ ಮತ್ತೊಬ್ಬರ ಎಂಟ್ರಿ ಆಗಿದೆ ಎಂದೇ ಹೇಳಲಾಗುತ್ತಿದ್ದು, ಯಾರೀತ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ನಿವೇದಿತಾ  ಮಬ್ಬುಕತ್ತಲಿನಲ್ಲಿ ವಿಚಿತ್ರವಾಗಿ ಕಾಣಿಸ್ತಿರೋ ವಿಡಿಯೋ ಶೇರ್​ ಮಾಡಿಕೊಂಡಿದ್ದರು.  ಇದರಲ್ಲಿ ಈಕೆ  ಕೂದಲನ್ನು ಹಿಡಿದುಕೊಂಡು ಜಗ್ಗುತ್ತಲೇ ಸ್ಟೆಪ್​ ಹಾಕಿದ್ದರು.  ನಿನ್ನೆಯವರೆಗೂ ಚೆನ್ನಾಗಿದ್ದ ನಟಿಗೆ ಇದೇನಾಯ್ತು ಎಂದು ಫ್ಯಾನ್ಸ್​ ಗಾಬರಿ ಬಿದ್ದಿದ್ದರು. ಇದರ ಬಳಿಕ ನಿವೇದಿತಾ ಮತ್ತಷ್ಟು ರೀಲ್ಸ್​ ಹಾಕಿರುವ ಕಾರಣದಿಂದ ಈಕೆ ಚೆನ್ನಾಗಿಯೇ ಇದ್ದಾರೆ ಎನ್ನುವುದು ಅಭಿಮಾನಿಗಳ ಸಮಾಧಾನ.

ಆದರೆ ಬಳಕುವ ಬಳ್ಳಿಯಂತೆ ಇರುವ ನಿವೇದಿತಾ, ದೇಹಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರಾ ಎನ್ನುವ ಮಾತು ಇತ್ತೀಚಿಗೆ ಹೆಚ್ಚಾಗುತ್ತಿದೆ. ಅದಕ್ಕೆ ಈಗ ಹಾಕಿರುವ ಹೊಸ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ನೋಡಿದರು ನೇರವಾಗಿಯೇ ದೇಹದ ಭಾಗದ ಮೇಲೆ ಕಮೆಂಟ್​ ಮಾಡುತ್ತಿದ್ದಾರೆ.  ಸಾಮಾನ್ಯವಾಗಿ, ಇತ್ತೀಚಿನ ದಿನಗಳಲ್ಲಿ ಎದೆಗೆ ಕತ್ತರಿ ಹಾಕಿಕೊಳ್ಳುತ್ತಿದ್ದಾರೆ ನಟಿ ಮಣಿಗಳು. ಮುಖದ ಯಾವುದೋ ಒಂದು ಅಂಗವನ್ನು ಪ್ಲಾಸ್ಟಿಕ್‌ ಸರ್ಜರಿ ಮೂಲಕ ಅಂದಗೊಳಿಸಿಕೊಳ್ಳುವುದು ಶ್ರೀದೇವಿ ಕಾಲದಿಂದಲೂ ನಡೆದೇ ಇದೆ. ಬಾಲಿವುಡ್‌ ಆಳಿದ್ದ ಶ್ರೀದೇವಿ ತಮ್ಮ ಮೂಗಿನ ಸರ್ಜರಿ ಬಳಿಕವಷ್ಟೇ ಅಷ್ಟು ಸೌಂದರ್ಯವತಿಯಾಗಿ ಕಾಣಿಸಿಕೊಂಡು, ಬಾಲಿವುಡ್‌ನಲ್ಲಿ ಸ್ಥಾನ ಗಳಿಸಿದ್ದರು. ಅದೇ ರೀತಿ ಹಲವರು ಎದೆ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನ ನಿವೇದಿತಾ ನೋಡಿ ಇದೇ ಪ್ರಶ್ನೆಯನ್ನು ಅಸಭ್ಯ ಎನ್ನುವ ರೀತಿಯಲ್ಲಿ ಪದೇ ಪದೇ ಪ್ರಶ್ನಿಸಲಾಗುತ್ತಿದೆ.

ಬಳಕುವ ಬಳ್ಳಿಯಂತಿರೋ ನಿವೇದಿತಾ ಆ ಭಾಗಕ್ಕೆ ಕತ್ತರಿ ಹಾಕಿಸಿಕೊಂಡ್ರಾ? ಫ್ಯಾನ್ಸ್‌ಗೆ ಇದೆಂಥ ಡೌಟು?

Latest Videos
Follow Us:
Download App:
  • android
  • ios