Min read

ಸೀರೆಯುಟ್ಟು ಮಳೆಯಲ್ಲಿ ನೆಂದ ನಿವೇದಿತಾ ಗೌಡ, ಯುದ್ಧ ಗೆದ್ದವನೂ ನಿನ್ನ ಮುಂದೆ ಸೋಲ್ತಾನೆಂದ ನೆಟ್ಟಿಗರು!

Nivedita Gowda danced in the rain wearing a saree
Nivedita Gowda

Synopsis

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಮಳೆಯಲ್ಲಿ ನೆನೆದಿರುವ ನಿವೇದಿತಾ ವಿಡಿಯೋ ಫುಲ್ ವೈರಲ್ ಆಗಿದೆ. 
 

ಸ್ಯಾಂಡಲ್ ವುಡ್ ಬಾರ್ಬಿ ಡಾಲ್ (Sandalwood Barbie Doll) ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ (Bigg Boss Contestant Nivedita Gowda), ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಗೌಡ, ಅಭಿಮಾನಿಗಳಿಗೆ ಹತ್ತಿರವಾಗೋ ಒಂದೇ ಒಂದು ಕ್ಷಣವನ್ನೂ ಬಿಡೋದಿಲ್ಲ. ಬೇಸಿಗೆ ಇರ್ಲಿ, ಚಳಿಗಾಲ ಇರ್ಲಿ, ಸಿಲಿಕಾನ್ ಸಿಟಿಯಲ್ಲಿ ಮಳೆಯಾಗ್ಲಿ, ಎಲ್ಲವನ್ನ ತಮ್ಮ ರೀಲ್ಸ್ ಗೆ ಬಳಸಿಕೊಂಡು ಫ್ಯಾನ್ಸ್ ಕಣ್ತಂಪು ಮಾಡ್ತಾರೆ. ಮಿನಿ ಸ್ಕರ್ಟ್, ಡ್ರೆಸ್ ಮಾತ್ರವಲ್ಲ ಸೀರೆಯಲ್ಲೂ ಆಗಾಗ ಕಾಣಿಸಿಕೊಳ್ಳುವ ನಿವೇದಿತಾ ಈ ಬಾರಿ ಮತ್ತಷ್ಟು ಹಾಟ್ ಆಗಿದ್ದಾರೆ. ಅದಕ್ಕೆ ಕಾರಣ ಮಳೆ. 

ನಿನ್ನೆ ಉದ್ಯಾನ ನಗರಿಯಲ್ಲಿ ವರುಣ ತಂಪೆರೆದಿದ್ದಾನೆ. ಆ ಮಳೆಯಲ್ಲಿ ನಿವೇದಿತಾ ಗೌಡ ಮಿಂದೆದ್ದಿದ್ದಾರೆ. ಸೀರೆಯುಟ್ಟ ನಿವೇದಿತಾ ಮಳೆಯಲ್ಲಿ ಮೈ – ಮನ ನೆನೆಸಿದ್ದಾರೆ. ರೇನ್ ಆಂಡ್ ಸಾರಿ ಅಂತ ಶೀರ್ಷಿಕೆ ಹಾಕಿ ಮ್ಯೂಸಿಕ್ ಗೆ ಹೆಜ್ಜೆ ಹಾಕಿರುವ ನಿವೇದಿತಾ ಗೌಡ ರೀಲ್ಸ್ ಒಂದೇ ಗಂಟೆಯಲ್ಲಿ 22 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಪಡೆದಿದೆ. ನೂರಾರು ಮಂದಿ ನಿವೇದಿತಾ ಈ ಪೋಸ್ಟ್ ಗೆ ಕಮೆಂಟ್ ಹಾಕಿದ್ದಾರೆ. ನಿವೇದಿತಾ ಈ ವಿಡಿಯೋ ನೋಡಿದ ಫ್ಯಾನ್ಸ್, ಯುದ್ಧ ಗೆದ್ದವನೂ ನಿನ್ನ ಮುಂದೆ ಸೋಲ್ತಾನೆ ಎಂದಿದ್ದಾರೆ. ಅನೇಕರು ಹಾರ್ಟ್ ಎಮೋಜಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ನೀವು ನೆಕ್ಸ್ಟ್ ನ್ಯಾಷನಲ್ ಕ್ರಷ್ ಅಂತ ಕಮೆಂಟ್ ಮಾಡಿದ್ದಾರೆ. ಹಾಟ್ ನಿವೇದಿತಾ, ಸೂಪರ್ ಎನ್ನುವ ಕಮೆಂಟ್ ಗಳು ಅಲ್ಲಲ್ಲಿ ಬಂದಿವೆ. ನಿವೇದಿತಾ ಗೌಡ ರೀಲ್ಸ್ ಗೆ ಗುಡ್ ಕಮೆಂಟ್ ಗಿಂತ ಬ್ಯಾಡ್ ಕಮೆಂಟ್ ಬರೋದೇ ಹೆಚ್ಚು. ಹಿಂದೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದ ನಿವೇದಿತಾರನ್ನು ಈಗ ಜನ ನಿಧಾನವಾಗಿ ಮೆಚ್ಚಿಕೊಳ್ತಿದ್ದಾರೆ.  ನಿಧಾನವಾಗಿ ನಿವೇದಿತಾ ಬ್ಯೂಟಿ ಹಾಗೂ ಸ್ಟೈಲ್ ಇಷ್ಟಪಡ್ತಿದ್ದಾರೆ. ಯಾರು ಏನೇ ಹೇಳಿದ್ರೂ ನಿವೇದಿತಾ ತಮ್ಮ ಸ್ಟೈಲ್ ಬಿಟ್ಟಿಲ್ಲ. ಬಳಕೆದಾರರರ ಕಮೆಂಟ್ ಗೆ ಕ್ಯಾರೇ ಎಂದಿಲ್ಲ.  

ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್‌ ವಿಡಿಯೋ? ಏನದು ಭವಿಷ್ಯವಾಣಿ?

ನಿವೇದಿತಾ ಗೌಡ ಪ್ರತಿ ದಿನ ಒಂದಾದ್ರೂ ರೀಲ್ಸ್ ಪೋಸ್ಟ್ ಮಾಡ್ತಾರೆ. ಬಾತ್ ರೂಮ್, ಬೆಡ್ ರೂಮ್, ಬೀಚ್ ಹೀಗೆ ಎಲ್ಲ ಕಡೆ ವಿಡಿಯೋ ಮಾಡಿ, ಬೋಲ್ಡ್ ವಿಡಿಯೋ, ಫೋಟೋ ಹಂಚಿಕೊಳ್ಳುವ ನಿವೇದಿತಾ, ಬರೋ ಕಮೆಂಟ್ ನೋಡೋದೇ ಇಲ್ವಂತೆ. ನನ್ನಿಷ್ಟದ ಪ್ರಕಾರ ನಾನು ವಿಡಿಯೋ ಮಾಡ್ತೇನೆ. ನನ್ನಿಷ್ಟದ ಪ್ರಕಾರ ನಾನು ಜೀವನ ನಡೆಸ್ತೇನೆ. ಕಮೆಂಟ್ ನೋಡಿದ್ರೆ ಬೇಸರವಾಗುತ್ತೆ. ಹಾಗಾಗಿ ಅದ್ರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಈ ಹಿಂದೆ ನಿವೇದಿತಾ ಗೌಡ ಹೇಳಿದ್ದರು.

ದೀಪಿಕಾ ದಾಸ್ ಸಿಂಪಲ್‌ ಟ್ರೆಡಿಶನಲ್‌ ಲುಕ್ ಗೆ ಮನಸೋತ ಫ್ಯಾನ್ಸ್

ಬಿಗ್ ಬಾಸ್ ಮೂಲಕವೇ ಕಿರುತೆರೆಗೆ ಪರಿಚಯ ಆದವರು ನಿವೇದಿತಾ ಗೌಡ. ಅವರ ಮಾತು ಎಲ್ಲರ ಗಮನ ಸೆಳೆದಿತ್ತು. ಬಾರ್ಬಿ ಡಾಲ್ ಅಂತಾನೇ ನಿವೇದಿತಾಗೆ ಹೆಸರು ಬಂದು. ನಂತ್ರ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಮಿಂಚಿದ ನಿವೇದಿತಾ ಗೌಡ, ಚಂದನ್ ಶೆಟ್ಟಿ ಮದುವೆಯಾಗಿ, ವಿಚ್ಛೇದನ ಪಡೆದುಕೊಂಡ್ರು.  ಇನ್ಸ್ಟಾಗ್ರಾಮ್, ಯುಟ್ಯೂಬ್ ಗಳಲ್ಲಿ ವಿಡಿಯೋ ಹಂಚಿಕೊಳ್ಳುವ ನಿವೇದಿತಾ, ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಳ್ತಿದ್ದಾರೆ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಭಾಗವಾಗಿರುವ ನಿವೇದಿತಾ ಗೌಡ, ಅಪ್ಪನ ಪ್ರೀತಿ ನೆನೆದು ಭಾವುಕರಾಗಿದ್ದರು. ನಿವೇದಿತಾ ಹಾಗೂ ಧನರಾಜ್ ಡಾನ್ಸ್ ನೋಡಿ ಜಡ್ಜ್ ಕಣ್ಣಲ್ಲಿ ನೀರು ತುಂಬಿತ್ತು. ಅಷ್ಟಷ್ಟೇ ಆಕ್ಟಿಂಗ್ ಕಲಿಯುತ್ತಿರುವ ನಿವೇದಿತಾ, ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಸಿನಿಮಾ ಮಾಡಿದ್ದಾರೆ. ಸದ್ಯವಷ್ಟೆ ಮುದ್ದು ರಾಕ್ಷಸಿ ಸಿನಿಮಾ ಶೂಟಿಂಗ್ ಮುಗಿದಿದೆ.
 

Latest Videos