ನಯಾಗರ ಫಾಲ್ಸಲ್ಲಿ ನಿವೇದಿತಾ- ಚಂದನ್​ ಭರ್ಜರಿ ಡಾನ್ಸ್​: ಸಕ್ರೆ ಗೊಂಬೆ ಕರಗೋಗ್ತಿಯಾ ಎಂದ ಫ್ಯಾನ್ಸ್​

ಸ್ಯಾಂಡಲ್​ವುಡ್​ ಕ್ಯೂಟ್​ ಜೋಡಿ ನಿವೇದಿತಾ ಗೌಡ ಮತ್ತು ಚಂದನ ಶೆಟ್ಟಿ ಅಮೆರಿಕದ ನಯಾಗಾರ ಫಾಲ್ಸ್​ ಬಳಿ ಭರ್ಜರಿ ಡಾನ್ಸ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. 
 

Nivedita Chandan Dance in Niagara Falls Fans falls in love suc

ಕಳೆದ ಕೆಲವು ದಿನಗಳಿಂದ ಬಾರ್ಬಿ ಡಾಲ್ ನಿವೇದಿತಾ ಗೌಡ ಸಕತ್​ ಸುದ್ದಿಯಲ್ಲಿದ್ದಾರೆ. ನಟಿ ಏನೇ ಮಾಡಿದ್ರೂ ಅದು ಸುದ್ದಿಯಾಗ್ತಿದೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಈ ಚಂದನವನದಲ್ಲಿ ನಟಿ ನಿವೇದಿತಾ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಇತ್ತೀಚೆಗಷ್ಟೇ ನೀರಿನ ಒಳಗೆ ಈ ಜೋಡಿ  ರೊಮ್ಯಾಂಟಿಕ್​ ಆಗಿ ಕಾಲ ಕಳೆದು ಅದರ ವಿಡಿಯೋ ಶೇರ್​ ಮಾಡಿದ್ದರು. ಇದಕ್ಕೆ ಲಕ್ಷಾಂತರ ಮಂದಿ ಲೈಕ್ಸ್​ ಮಾಡಿದ್ದರು. ಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್​ ಖಾಸಗಿಯಾಗಿ ಇರಬೇಕು, ಇದನ್ನೆಲ್ಲ ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಕೆಲವರು  ಟೀಕೆ ಮಾಡಿದ್ದರೂ ಈ ಜೋಡಿಯ ಫ್ಯಾನ್ಸ್​ ಅಂತೂ ಫಿದಾ ಆಗಿದ್ದರು. ಇದರ ಬೆನ್ನಲ್ಲೇ ನಟಿ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

 ಸಾಮಾಜಿಕ ಜಾಲತಾಣದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕಾರಣಕ್ಕೆ ನಿವೇದಿತಾ ಗೌಡ (Niveditha Gowda) ಹೆಚ್ಚಾಗಿ  ರೀಲ್ಸ್​ ಮಾಡಿ ಫ್ಯಾನ್ಸ್​ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ  ಕಲರ್​ಫುಲ್​  ಫೋಟೋಶೂಟ್​ ಮಾಡಿಸಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಕೆಲವೊಮ್ಮೆ ಚಿತ್ರ ವಿಚಿತ್ರ ರೀಲ್ಸ್​ಗಳಿಂದ  ಟ್ರೋಲ್​ ಆಗುವುದೂ ಇದೆ. ಆದರೆ ಗೊಂಬೆ ಎಂದೇ ಕರೆಸಿಕೊಳ್ಳುವ ನಿವೇದಿತಾ ಅವರಿಗೆ ಅಪಾರ ಪ್ರಮಾಣದ ಫ್ಯಾನ್ಸ್​ ಇದ್ದು ಸದಾ ತಮ್ಮ ನೆಚ್ಚಿನ ನಟಿ ಏನು ಶೇರ್​  ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. ಒಳ್ಳೆಯ ಕಮೆಂಟ್ಸ್​ ಮಾಡುವ ನೆಟ್ಟಿಗರಿಗೆ ಥ್ಯಾಂಕ್ಸ್​ ಹೇಳುತ್ತಾ  ಟ್ರೋಲ್​ಗಳಿಗೆ ತಲೆ ಕೆಡಿಸಿಕೊಳ್ಳದವರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು.  ಬಿಗ್ ಬಾಸ್ ಬಳಿಕ ಈಗ  ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2  ಮೂಲಕ ಮನೆ ಮಾತಾಗಿರುವ ನಟಿ,  ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

Viral Video ನೋಡಿ, ಕನ್ನಡ ಅಂದ್ರೆ ಬಾರ್ಬಿ ಡಾಲ್ ನಿವೇದಿತಾಗೆ ಆಗಿ ಬರಲ್ವಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್​!  

ಇದೀಗ ನಟಿ ನಿವೇದಿತಾ ಪತಿ ಚಂದನ್​ ಶೆಟ್ಟಿ ಜೊತೆ ಅಮೆರಿಕ ಟೂರ್​ ಎನ್​ಜಾಯ್​ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅಮೆರಿಕದ ಟೂರ್​ನಲ್ಲಿರುವ ಫೋಟೋಗಳನ್ನು ಅವರು ಶೇರ್​ ಮಾಡಿಕೊಳ್ಳುತ್ತಿದ್ದಾರೆ.  ವಿದೇಶ ಪ್ರಯಾಣದ ಮೂಡ್​ನಲ್ಲಿ ಇರುವ ನಿವೇದಿತಾ ಕೆಲ ದಿನಗಳ ಹಿಂದೆ ಅಮೆರಿಕದಲ್ಲಿರುವ ಸೇಂಟ್​ ಮೇರಿ ಚರ್ಚ್​ಗೆ ಭೇಟಿ ಕೊಟ್ಟಿದ್ದು ಅದರ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ (instagram) ಶೇರ್​  ಮಾಡಿಕೊಂಡಿದ್ದರು. ತುಂತುರು ಮಳೆ ಬೀಳುತ್ತಿರುವಾಗ ಹೀಗೊಂದು ವಾಕಿಂಗ್​ಗೆ ಬಂದಿರುವುದಾಗಿ ನಿವೇದಿತಾ ಬರೆದುಕೊಂಡಿದ್ದರು. ಅಮೆರಿಕದ  ಹವಾಮಾನವನ್ನು ಸಕತ್​ ಎಂಜಾಯ್​ ಮಾಡುತ್ತಿರುವಂತೆ ತೋರುತ್ತಿತ್ತು.  ಅಮೆರಿಕದಲ್ಲಿರುವ ಸೇಂಟ್​ ಮೇರಿ ಚರ್ಚ್​ಗೆ ಚರ್ಚ್​ ಎದುರು ನಿಂತಿರುವ ನೀರಿನಲ್ಲಿ ಹಾರಿ ಚಿಕ್ಕಮಕ್ಕಳಂತೆ ನಿವೇದಿತಾ ಕುಣಿದಾಡಿದ್ದನ್ನು ಕಂಡು ಆಕೆಯ ಅಭಿಮಾನಿಗಳು ಫಿದಾ ಆಗಿದ್ದರು. ಇದಾದ ಬಳಿಕ  ಅಮೆರಿಕದ್ದೇ ಇನ್ನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಸೂರ್ಯನ ಬೆಳಕಿಯನ ಬ್ಯಾಕ್​ಗ್ರೌಂಡ್​ನಲ್ಲಿ ಎಂಜಾಯ್​ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಇದರಲ್ಲಿ ಕೂಡ ನಿವೇದಿತಾ ಸಕತ್​ ಕ್ಯೂಟ್​ ಆಗಿ ಕಾಣಿಸುತ್ತಿದ್ದರು.

ಇದೀಗ ಪತಿಯ ಜೊತೆ ಅಮೆರಿಕದ ನಯಾಗರ ಫಾಲ್ಸ್​ನಲ್ಲಿ (Naigara falls) ಹಾಡೊಂದಕ್ಕೆ ಸಕತ್ ಸ್ಟೆಪ್​ ಹಾಕಿದ್ದಾರೆ. ಹಿಂದೆ ನಯಾಗರ್​ ಫಾಲ್ಸ್​ ಕಾಣಿಸುತ್ತಿದ್ದು, ಅದರ ನೀರು ಇವರ ಮೈಮೇಲೆ ಬೀಳುತ್ತಿದೆ. ಆ ನೀರಿನಲ್ಲಿಯೇ ದಂಪತಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರೂ ರೇನ್​ಕೋಟ್​ ಧರಿಸಿದ್ದಾರೆ. ಆದರೆ ತಲೆ ಎಲ್ಲಾ ಒದ್ದೆ ಮಾಡಿಕೊಂಡು ಡಾನ್ಸ್​ ಮಾಡುತ್ತಿರುವ ವಿಡಿಯೋ ಸಕತ್​ ವೈರಲ್​ ಆಗಿದೆ. ನಮ್ಮ ನೆಚ್ಚಿನ ತಾರೆಯರನ್ನು ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಆದರೆ ಮಾಮೂಲಿನಂತೆ ಕೆಲವರು ಈ ವಿಡಿಯೋ ನೋಡಿ ಟ್ರೋಲ್​ ಕೂಡ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಈ ಜೋಡಿ ಮದುವೆಯಾಗಿ ಮೂರು ವರ್ಷ ಆದರೂ ಇನ್ನೂ ಮಕ್ಕಳಾಗಿಲ್ಲ ಎನ್ನುವುದು. ಡಾನ್ಸ್​ ಸಾಕು, ಮೊದ್ಲು ಮಕ್ಕಳು ಮಾಡಿಕೊಳ್ಳಿ ಎಂದು ಅಭಿಮಾನಿಯೊಬ್ಬ ಹೇಳಿದ್ದರೆ, ಅದಕ್ಕೆ ಇನ್ನೊಬ್ಬರು ಸಕತ್​ ಕಿಡಿ ಕಾರಿದ್ದಾರೆ. ಅದು ಅವರಿಷ್ಟ, ಹೇಳಲು ನೀವ್ಯಾರು ಎಂದು. ಇದು ಒಂದೆಡೆಯಾದರೆ ಸಕ್ಕರೆ ಬೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತ ಫ್ಯಾನ್​ ಒಬ್ಬ, ಪ್ಲೀಸ್​ ಮಳೆಯಲ್ಲಿ ಹೀಗೆಲ್ಲಾ ನೆನೆಯಬೇಡಿಯಪ್ಪಾ ಸಕ್ಕರೆ ಬೊಂಬೆ, ಕರಗಿ ಹೋಗ್ತಿಯಾ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋಗೆ ತುಂಬಾ ರೆನ್ಸ್​ಪಾನ್ಸ್​ ಬರುತ್ತಿದೆ. ​ 

ಸಾಯುವ ಭಯದ ಮಾತನಾಡಿ ಅಮೆರಿಕಕ್ಕೆ ಹಾರಿದ ನಟಿ ನಿವೇದಿತಾ ಗೌಡ!

Latest Videos
Follow Us:
Download App:
  • android
  • ios