Asianet Suvarna News Asianet Suvarna News

ಕೈ ಕಾಲು ಇಲ್ಲದವರು ನಿತ್ಯವೂ ಪ್ರೇರಣೆಯಾಗ್ತಾರೆ: ನಿರಂಜನ್ ದೇಶಪಾಂಡೆ ಅಕ್ಕನ ಮದುವೆ ಕಥೆ!

ಬಿಗ್ ಬಾಸ್‌ ಮಿನಿ ಸೀಸನ್‌ನಲ್ಲಿ ಯಾರಿಗೂ ಗೊತ್ತಿರದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರಂಜನ್‌. ಕೈಕಾಲು ಇಲ್ಲದ ಈಜುಗಾರನ ಮದುವೆಯಾದ ಸಹೋದರಿ ಬಗ್ಗೆ ಹೆಮ್ಮೆ ಇದೆ............

Niranjan Deshpande shares an emotional bond with sister Nalini Bigg boss vcs
Author
Bangalore, First Published Aug 24, 2021, 12:18 PM IST
  • Facebook
  • Twitter
  • Whatsapp

ಸದಾ ನಗಿಸುವವನ ಮನದಲ್ಲೂ ಒಂದು ನೋವು ಇರುತ್ತದೆ. ಜನರನ್ನು ನಗಿಸುವುದೇ ತಮ್ಮ ಕೆಲಸ ಎಂದುಕೊಂಡು ಏನೇ ಸಮಸ್ಯೆ ಇದ್ದರೂ ಪಕ್ಕಕ್ಕಿಟ್ಟು ಜೀವನ ನಡೆಸುತ್ತಾರೆ. ಹೀಗೆ ನಿರೂಪಕ ನಿರಂಜನ್ ದೇಶಪಾಂಡೆ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ತಮ್ಮ ಅಕ್ಕನ ಮದುವೆ ಹಾಗೂ ವೈಯಕ್ತಿಕ ಜೀವನದಲ್ಲಿ ಆದಂತ ನೋವನ್ನು ಹಂಚಿಕೊಂಡಿದ್ದಾರೆ. 

ನಿರಂಜನ್‌ ದೇಶಪಾಂಡೆ ಅವರಿಗೆ ನಳಿನಾ ಎಂಬ ಸಹೋದರಿ ಇದ್ದಾರೆ. ಆಕೆ 13 ವರ್ಷ ಮುಂಚೆ ಹುಟ್ಟಿದವರೇ ಆದರೂ ಇವರಿಬ್ಬರನ್ನು ಅವಳಿ-ಜವಳಿ ಎಂದು ಕರೆಯುತ್ತಿದ್ದರು. ಹೇಸಿಗೆ ಬಂದು ಬೇಜಾರು ಬರಬೇಕು, ಅಷ್ಟರ ಮಟ್ಟಿಗೆ ನಾವು ಒಟ್ಟಿಗೇ ಇರುತ್ತಿದ್ದೆವು. ಸಣ್ಣ ಕಾರಣದಿಂದ ನಾನು ಅಪ್ಪನಿಂದ ದೂರವಿದ್ದೆ. ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು. ನಾನು ಅವರ ಸಹೋದರಿಯ ಸುರಕ್ಷೆತೆಯನ್ನು ನೋಡಿಕೊಳ್ಳುತ್ತಿರುವೆ.  ಎಲ್ಲ ಅಣ್ಣತಮ್ಮಂದಿರಿಗೆ ಅಕ್ಕನ ಮದುವೆ ಮಾಡಬೇಕು ಎನ್ನುವುದು ದೊಡ್ಡ ಕನಸು. ಅದೇ ಕನಸೂ ನನಗೂ ಇತ್ತು. ಆದರೆ ನಳಿನಾ ಜೀವನದ ಗ್ರಾಫ್ ಕೆಳಗಡೆ ಹೋಯ್ತು. ನನಗೆ ಸಾಕಷ್ಟು ಅವಕಾಶಗಳು ಬರುತ್ತಿದ್ದವು. ಅದರೆ ಅಕ್ಕ ಖಿನ್ನತೆಗೆ ಒಳಗಾಗುತ್ತಿದ್ದಾಳೆ, ಏನು ಮಾಡಬೇಕು ಗೊತ್ತಾಗುತ್ತಿರಲಿಲ್ಲ. ದೇವರು ಯಾವುದೇ ಸ್ಟಾರ್ ಪಟ್ಟ ಅನುಭವಿಸಲು ಬಿಡಲಿಲ್ಲ, ಇನ್ನೇನು ಯಶಸ್ಸನ್ನು ಅನುಭಿಸುತ್ತೇನೆ ಎನ್ನುವಾಗ ದೇವರು ಒಂದು ಸಮಸ್ಯೆ ಕೊಟ್ಟ. 

ಒಂದು ದಿನವೂ ಬಟ್ಟೆ ರಿಪೀಟ್ ಮಾಡಲ್ಲ, ಮನೆಯಲ್ಲಿ 3 ಸಾವಿರ ಬಟ್ಟೆಗಳಿವೆ: ನಟಿ ಭವ್ಯಾ ಗೌಡ!

ಇದಾದ ಮೇಲೆ ಎಲ್ಲೇ ಹೋದರೂ ನಿಮಗೆ ತಂಗಿ ಇದ್ದಾರಾ? ಗಂಡು ಹುಡುಕೋಕೆ ಆಗಲ್ವಾ? ಹೆಣ್ಣನ್ನು ಮನೆಯಲ್ಲಿಟ್ಟುಕೊಂಡಿದ್ದೀರಾ ಅಂತ ಕೇಳುತ್ತಿದ್ದರು. ಹಳೆಯ ರಿಲೇಶನ್‌ಶಿಪ್‌‌ನಿಂದ ಏನೋ ಅವಳು ಯಾರನ್ನು ನೋಡಿದ್ರೂ ಮದುವೆಯಾಗೋಕೆ ರೆಡಿ ಇರಲಿಲ್ಲ. ದಯವಿಟ್ಟು ಯಾರೂ ಹೆಣ್ಣು ಮಕ್ಕಳಿಗೆ ಮೋಸ ಮಾಡಬೇಡಿ, ಹುಡುಗಿಯರಿಗೂ ಇದೇ ಮಾತು ಹೇಳುತ್ತೇನೆ. ನೀವು ಆಟ ಆಡೋದು ಕೇವಲ ಹುಡುಗಿ, ಹುಡುಗಿಯ ಜೊತೆ ಅಲ್ಲ. ಅವರ ಮನೆಯವರ ಜೊತೆ ಎನ್ನುವುದು ನೆನಪಿರಲಿ, ಎಂದಿದ್ದಾರೆ.

ಒಂದು ದಿನ ವಿನಾಯಕ್ ಜೋಶಿ ಅವರ ವೆಬ್‌ಸೀರಿಸ್‌ ಕಾರ್ಯಕ್ರಮಕ್ಕೆ ನಳಿನಾ ಹೋಗಿದ್ದಳು. ಆಗ ರಾಷ್ಟ್ರಮಟ್ಟದ ಈಜುಗಾರ ಜಯಂತ್  ಪರಿಚಯವಾಗಿತ್ತು. ಜಯಂತ್ ಅವರಿಗೆ ಎರಡು ಕೈ ಇಲ್ಲ. ಹೊಟ್ಟೆ ಅರ್ಧ ಕಟ್ ಆಗಿದೆ. ಅದರೆ ಅತ ಕ್ರಿಕೆಟ್ ಕೂಡ ಆಡ್ತಾನೆ. ಅವನನ್ನು ಮದುವೆಯಾಗ್ತೀನಿ ಅಂತ ನಳಿನಾ ನನಗೆ ಹೇಳಿದಳು. ಇಷ್ಟು ದಿನದ ನಂತರ ಮದುವೆಯಾಗ್ತೀನಿ ಅಂತ ಅಕ್ಕ ಹೇಳಿದ್ದಕ್ಕೆ ಖುಷಿ ಪಡಲಾ? ಅಥವಾ ಹುಡುಗನಿಗೆ ಈ ರೀತಿ ಅಗಿದೆ ಅಂತ ಬೇಜಾರು ಪಡಲಾ? ನಿನಗೆ ಅವನ ಮೇಲೆ ಅನುಕಂಪ ಹುಟ್ಟ ಬಾರದು ಅಂತ ಹೇಳಿದೆ, ಆಗ ಅವಳು ಕೈ ಕಾಲು ಎಲ್ಲಾ ಇದ್ದವರೂ ನನಗೆ ಮೋಸ ಮಾಡಬಹುದು. ಈದರೆ, ಜಯಂತ್ ನನಗೆ ಪ್ರತಿದಿನ ಪ್ರೇರಣೆ ನೀಡುತ್ತಿದ್ದಾನೆ. ಅವನಿಗೋಸ್ಕರ ಬದುಕಬೇಕು ನಾನು ಅನಿಸುತ್ತಿದೆ ಎಂದಳು. ತುಂಬಾ ಜನರು ಕಮ್ಮಿಗೆ ಸಿಗ್ತು ಅಂತ ಮದುವೆ ಮಾಡಿಬಿಟ್ರಾ? ಅಂತೆಲ್ಲಾ ಕೇಳಿದ್ದುಂಟು. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳೋದಿಲ್ಲ. ಅಂಥವರು ಕಸ ಅಂತ ಅಂದುಕೊಂಡು, ಪಕ್ಕಕ್ಕೆ ಸರಿಸಿ ಮುಂದೆ ಹೋಗುತ್ತಿರಬೇಕು. ಇವತ್ತು ನನ್ನ ಅಕ್ಕ ತುಂಬಾ ಚೆನ್ನಾಗಿ ಗಂಡನ ಜೊತೆ ಬದುಕುತ್ತಿದ್ದಾಳೆ, ಎಂದು ನಿರಂಜನ್ ಹೇಳಿ ಕೊಂಡಿದ್ದಾರೆ.

 

Follow Us:
Download App:
  • android
  • ios