Asianet Suvarna News Asianet Suvarna News
breaking news image

5 ಚಾನೆಲ್‌ನಲ್ಲಿ ಕೆಲಸ ಮಾಡಿದ್ರೂ 5-6 ತಿಂಗಳು ಸಂಬಳ ಇಲ್ಲ, ಒಂದು ಹೊತ್ತು ಊಟಕ್ಕೂ ಕಷ್ಟ ಇತ್ತು: ದಿವ್ಯಾ ವಸಂತ

ಸೋಷಿಯಲ್ ಮೀಡಿಯಾದಿಂದ ಜೀವನವೇ ಬದಲಾಯಿತ್ತು ಎಂದ ದಿವ್ಯಾ ವಸಂತ. ಕೆಲಸ ಬಿಟ್ಟು ಮೊಬೈಲ್‌ನಲ್ಲಿ ಕೆಸಲ ಮಾಡು ಅಂದುಬಿಟ್ಟಿದ್ರಂತೆ ಅಮ್ಮ.... 
 

news anchor Divya vasantha struggled to find meals for a day without salary vcs
Author
First Published Jul 6, 2024, 11:36 AM IST

ಕನ್ನಡ ಖಾಸಗಿ ಸುದ್ದಿ ವಾಹಿನಿಯ ಖ್ಯಾತ ನಿರೂಪಕಿ 'ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ' ಕೊಟ್ಟ ದಿವ್ಯಾ ವಸಂತ ಈಗ ಸೋಷಿಯಲ್ ಮೀಡಿಯಾ ಸ್ಟಾರ್. ಯೂಟ್ಯೂಬ್ ಚಾನೆಲ್ ಹೊಂದಿರುವ ಈ ಸುಂದರಿ ಒಮ್ಮೆ ಗಿಚ್ಚಿ ಗಿಲಿಗಿಲಿ ಹಾಸ್ಯ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಫಿನಾಲೆ ಹಂತ ಮುಟ್ಟಿಲ್ಲವಾದರೂ ದಿವ್ಯಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಈ ಫೇಮ್ ಅಂಡ್ ನೇಮ್ ಬರುವ ಮುನ್ನ ದಿವ್ಯಾ ಜೀವನ ಹೇಗಿತ್ತು?

'ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋಯಿಂದ ನಾನು ತುಂಬಾನೇ ಕಲಿತಿರುವೆ ನನ್ನ ಜೀವನದಲ್ಲಿ ತುಂಬಾನೇ ಕಾಮ್ ಅಗಿದ್ದೀನಿ. 5 ವರ್ಷ ಮೀಡಿಯಾ ಫೀಲ್ಡ್‌ನಲ್ಲಿ ಇದ್ದೀನಿ ಈ 5 ವರ್ಷನೂ ಬರೀ ಕಷ್ಟ ನೋಡಿದ್ದೀನಿ ಏಕೆಂದರೆ ಯಾವುದೇ ನ್ಯೂಸ್ ಚಾನೆಲ್‌ಗೆ ಹೋದರೂ ಒಂದೇ wave lenght ಇತ್ತು ಯಾವುದೇ ಹೈ ಲೋ ಏನೂ ಇಲ್ಲ. ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿರುವುದು ಅಂದ್ರೆ ಜನರು ಬೇರೆ ರೀತಿನೇ ನೋಡುತ್ತಾರೆ, ಸಿಕ್ಕಾಪಟ್ಟೆ ಸುದ್ದು ಮಾಡ್ತಾರೆ ಬೇರೆ ತರನೇ ಲೈಫ್‌ ಸ್ಟೈಲ್ ಐಷಾರಾಮಿ ಜೀವನ ಮಾತ್ರ ಅಂದುಕೊಳ್ಳುತ್ತಾರೆ. 5-6 ತಿಂಗಳು ನಾನು ಸಂಬಳ ಇಲ್ಲದೆ ಕೆಲಸ ಮಾಡಿದ್ದೀನಿ. ಈ ಪರಿಸ್ಥಿತಿಯಲ್ಲಿ ಓಡಾಡುವುದಕ್ಕೂ ದುಡ್ಡು ಇಲ್ಲ ಮನೆಯಲ್ಲೂ ಬೈತಾ ಇರ್ತಾರೆ ತಿನ್ನೋದು ದುಡ್ಡು ಇರಲ್ಲ ಯಾರಿಗೂ ಹೇಳಲು ಆಗಲ್ಲ' ಎಂದು ಖಾಸಗಿ ಸಂದರ್ಶನದಲ್ಲಿ ದಿವ್ಯಾ ಮಾತನಾಡಿದ್ದಾರೆ.

ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಶೋಕಿಯೇ ಮುಳುವಾಯಿತಾ?

'ಸಿನಿಮಾ ಎಲ್ಲಾ ಪ್ರಮೋಟ್ ಮಾಡಿಕೊಂಡು ಮೊಬೈಲ್‌ನಲ್ಲಿ ಕೆಲಸ ಮಾಡುತ್ತಿದ್ದೆ ಅಲ್ವಾ ಅದೇ ಚೆನ್ನಾಗಿತ್ತು ಅಂತ ಅಮ್ಮ ಬೈಯುತ್ತಿದ್ದರು. ಸರಿಯಾದ ಸಮಯಕ್ಕೆ ಊಟ ಮಾಡದೆ ನಾನ್ ಸ್ಟಾಪ್ ಕೆಲಸ ಮಾಡಿರುವೆ. ಸುಮಾರು 5 ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದೀನಿ...ಸಂಬಳ ಕೊಡುತ್ತಿಲ್ಲ ಜಾಸ್ತಿ ಮಾಡುತ್ತಿಲ್ಲ ಅಂತ ನಾನು ಬಿಟ್ಟು ಬಿಟ್ಟಿದ್ದರೆ ನಮಗೆ ಒಳ್ಳೆಯದಾಗುತ್ತಿರಲಿಲ್ಲ. ಒಂದು ಕೆಲಸ ಮಾಡುವ ಜಾಗದಲ್ಲಿ ಎರಡು ಕೆಲಸ ಮಾಡಿದ್ದೀನಿ' ಎಂದು ದಿವ್ಯಾ ಹೇಳಿದ್ದಾರೆ.

ನೈಟಿ ಕಟ್ ಮಾಡಿ ಡ್ರೆಸ್‌ ಮಾಡ್ಕೊಂಡ್ರಾ?; ಜಾನವಿ ಹಾಟ್‌ ಲುಕ್‌ಗೆ ಕಾಲೆಳೆದ ನೆಟ್ಟಿಗರು

ಗಿಚ್ಚಿ ಗಿಲಿಗಿಲಿ ಶೋಗೆ ಎಂಟ್ರಿ ಕೊಟ್ಟಾಗ ದಿವ್ಯಾ ನ್ಯೂಸ್‌ ಶೈಯಲ್ಲಿ ಸ್ಕಿಟ್ ಮಾಡುತ್ತಿದ್ದರು ಎಂದು ಸೃಜನ್ ಲೋಕೇಶ್‌ ಒಮ್ಮೆ ತಿದ್ದಿಕೊಳ್ಳಲು ಸಲಹೆ ಕೊಟ್ಟಿದ್ದರು. ದಿವ್ಯಾಗೆ ಜೋಡಿಯಾಗಿ ಸಿಕ್ಕಿದ್ದು ಮಾನಸ. ಧ್ಯಾನ ವರ್ಕ್‌ಶಾಪ್‌ ಮಾಡಿಸುವ ಮೂಲಕ ನನ್ನನ್ನು ತುಂಬಾನೇ ಬದಲಾವಣೆ ಮಾಡಿದ್ದಾರೆ ಎಂದು ದಿವ್ಯಾ ಹೇಳಿದ್ದಳು. ನಾನು ಮಾತನಾಡಿದಾಗ ಇಡೀ ಮನೆಗೆ ಕೇಳಿಸುತ್ತಿತ್ತು ಆದರೆ ಮಾನಸ ಗೈಡ್‌ ಮಾಡಿದ ಮೇಲೆ ನಾನು ತುಂಬಾ ಕಾಮ್ ಆಗಿ ಬದಲಾಗಿದ್ದೀನಿ ಎಂದಿದ್ದಾರೆ. 

Latest Videos
Follow Us:
Download App:
  • android
  • ios