ರಿಯಾಲಿಟಿ ಶೋಗಳು ಬೋಗಸ್; 'ಇಂಡಿಯನ್ ಐಡಲ್'ನೇ ಟಾರ್ಗೆಟ್ ಮಾಡುತ್ತಿರುವುದೇಕೆ?
ಪದೇ ಪದೇ ಟ್ರೋಲ್ ಆಗುತ್ತಿದೆ 'ಇಂಡಿಯನ್ ಐಡಲ್' ರಿಯಾಲಿಟಿ ಶೋ. ಜಡ್ಜ್‌ಗಳ ಬದಲಾವಣೆಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ 'ಇಂಡಿಯನ್ ಐಡಲ್' ಎನ್ನುವ ಮಟ್ಟಕ್ಕೆ ಹೆಸರು ಗಳಿಸಿದ ಕಾರ್ಯಕ್ರಮದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಟ್ರೋಲ್‌ಗಳು ಹೆಚ್ಚಾಗುತ್ತಿವೆ. ಇದು ಒಂದು ಕಾರಣಕ್ಕೆ ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ನೆಟ್ಟಿಗರು ಸ್ಪರ್ಧಿಗಳಿಂದ ಜಡ್ಜ್‌ಗಳ ವರೆಗೂ ಟ್ರೋಲ್ ಮಾಡುತ್ತಿದ್ದಾರೆ.
ಹೌದು! ಕೆಲವು ದಿನಗಳ ಹಿಂದೆ ಹಳ್ಳಿ ಹುಡುಗನೊಬ್ಬ ಕೆಟ್ಟ ಧ್ವನಿಯಲ್ಲಿ ಹಾಡು ಹಾಡಿದ್ದಕ್ಕೆ ತೀರ್ಪುಗಾರ ಅನು ಮಲಿಕ್ ತಮ್ಮ ಕೆನ್ನೆಗೆ ಬಲವಾಗಿ ಹೊಡೆದುಕೊಂಡರು. ಫಾದರ್ಸ್ ಡೇ ಪ್ರಯುಕ್ತ ನಡೆದ ಸ್ಪೆಷಲ್ ಎಪಿಸೋಡ್‌ನಲ್ಲಿ ಎಲ್ಲರೂ ತಮ್ಮ ತಂದೆಯನ್ನು ಹೊಗಳಿ ಅವರಿಗೆ ಒಂದು ಹಾಡು ಸಮರ್ಪಿಸಿದ್ದರು. ಇದಕ್ಕೆ ಜಡ್ಜ್‌ಗಳು ಪ್ರತಿಕ್ರಿಯಿಸಿದ ರೀತಿಗೆ ನೆಟ್ಟಿಗರು ಶಾಕ್ ಆಗಿದ್ದಾರೆ.
ಕೆಟ್ಟ ಗಾಯನ: ಕೆನ್ನೆಗೆ ಬಲವಾಗಿ ಹೊಡೆದುಕೊಂಡ ಜಡ್ಜ್ ಅನು ಮಲಿಕ್!
ಕಾರ್ಯಕ್ರಮದಲ್ಲಿ ಗಾಯನಕ್ಕಿಂತ ಅಳುವುದಕ್ಕೇ ಹಾಗೂ ಹಾಸ್ಯ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಯಾರು ಏನೇ ಹೇಳಿದ್ದರೂ ನೇಹಾ ಮತ್ತು ಹಿಮೇಶ್ ಕಣ್ಣೀರಿಡುತ್ತಾರೆ. ಅದರೆ ವಿಡಿಯೋ ಝೂಮ್ ಮಾಡಿ ನೋಡಿದೆ. ಅವರ ಕಣ್ಣಲ್ಲಿ ನೀರೇ ಬರುವುದಿಲ್ಲ. ಎಲ್ಲರೂ ಡ್ರಾಮಾ ಮಾಡುವುದು ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ಸ್ಪರ್ಧಿಗಳ ನಡುವೆಯೇ ಸುಳ್ಳು ಪ್ರೇಮ ಕಥೆಯನ್ನು ಸೃಷ್ಟಿಸಲಾಗುತ್ತದೆ ಎಂಬ ಆರೋಪ ಕೂಡ ಮಾಡಲಾಗಿತ್ತು. ಈಗಾಗಲೇ ಸುಮಾರು 12 ಸೀಸನ್ ಮುಗಿಸಿರುವ ಇಂಡಿಯನ್ ಐಡಲ್ ಕಾರ್ಯಕ್ರಮವನ್ನು ನಿಲ್ಲಿಸುವಂತೆಯೂ ಕೆಲವರು ಒತ್ತಾಯ ಮಾಡುತ್ತಿದ್ದಾರೆ.