ತಾಂಡವ್‌ಗೆ ಅದೃಷ್ಟವಂತ ಗುರು ನೀನು, 100% ಲಕ್ಕಿ ಎಂದು ನೆಟ್ಟಿಗರಿಂದ ಗುಣಗಾನ
ಭಾಗ್ಯಲಕ್ಷ್ಮೀ ಧಾರಾವಾಹಿಯ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರನ್ನು ನಿಜ ಜೀವನದಲ್ಲಿ ಅದೃಷ್ಟವಂತ, 100% ಲಕ್ಕಿ ಗಂಡ ಎಂದು ನೆಟ್ಟಿಗರು ಕಮೆಂಟ್‌ಗಳ ಮೂಲಕ ಗುಣಗಾನ ಮಾಡಿದ್ದಾರೆ.
ಬೆಂಗಳೂರು: ರಂಗಭೂಮಿ ಕಲಾವಿದರಾಗಿರುವ ಸುದರ್ಶನ ರಂಗಪ್ರಸಾದ್ ಈಗ ತಾಂಡವ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಭಾಗ್ಯಲಕ್ಷ್ಮೀ ಧಾರಾವಾಹಿ ಸುದರ್ಶನ್ ಅವರಿಗೆ ಬಿಗ್ ಬ್ರೇಕ್ ನೀಡಿದ್ರೆ ಅಂದ್ರೆ ತಪ್ಪಾಗಲ್ಲ. ಪ್ರತಿದಿನ ಸಂಜೆ 7 ಗಂಟೆ ಆಗುತ್ತಲೇ ಜನರು ಭಾಗ್ಯಲಕ್ಷ್ಮೀ ಧಾರಾವಾಹಿ ನೋಡಲು ಕುಳಿತುಕೊಳ್ಳುತ್ತಾರೆ. ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿ ಮಹಾ ತಿರುವು ಪಡೆದುಕೊಂಡಿದ್ದು, ಪ್ರತಿ ಸಂಚಿಕೆಯೂ ಉತ್ತಮವಾಗಿ ಮೂಡಿ ಬರುತ್ತಿದೆ. ಮಕ್ಕಳ ಮತ್ತು ಅತ್ತೆ-ಮಾವನ ಜೊತೆ ಭಾಗ್ಯ ತವರು ಸೇರಿದ್ರೆ, ತಾಂಡವ್ ಒಂಟಿಯಾಗಿದ್ದಾನೆ. ಯಾವುದೇ ಕಾರಣಕ್ಕೂ ಪತ್ನಿಯನ್ನು ಒಪ್ಪಿಕೊಳ್ಳಲ್ಲ ಎಂದಿರೋ ತಾಂಡವ್ ಮುಂದೆ ಹೊಸ ಬದುಕು ಕಟ್ಟಿಕೊಳ್ಳಲು ಭಾಗ್ಯ ಮುಂದಾಗಿದ್ದಾಳೆ. ಇದು ಭಾಗ್ಯಲಕ್ಷ್ಮೀಯ ಇಲ್ಲಿಯವರೆಗಿನ ಕಥೆ.
ನಿಜ ಜೀವನದಲ್ಲಿ ಸುದರ್ಶನ್ ರಂಗಪ್ರಸಾದ್ ಚಂದನವನದ ಸುಂದರ ನಟಿ ಸಂಗೀತಾ ಭಟ್ ಅವರ ಪತಿ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಂಗೀತಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಹೊಸ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಪತ್ನಿಯ ಎಲ್ಲಾ ಪೋಸ್ಟ್‌ಗಳಿಗೂ ಸುದರ್ಶನ ರಂಗಪ್ರಸಾದ್ ಕಮೆಂಟ್ ಮಾಡುತ್ತಿರುತ್ತಾರೆ.
ಈ ಕಮೆಂಟ್‌ನಲ್ಲಿಯೇ ಸಂಗೀತಾ ಭಟ್ ಮತ್ತು ಸುದರ್ಶನ್ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ತಮಾಷೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಧಾರಾವಾಹಿಯಲ್ಲಿ ಸುದರ್ಶನ್ ಅವರ ಪಾತ್ರ ತದ್ವಿರುದ್ಧವಾಗಿದೆ. ಯಾವ ಮಹಿಳೆಗೂ ಈ ರೀತಿಯ ಮೋಸಗಾರ, ಕಪಟಿ ಗಂಡ ಬೇಡ ಎಂಬುವುದು ಧಾರಾವಾಹಿ ವೀಕ್ಷಿಸುವ ಜನರ ಅಭಿಪ್ರಾಯವಾಗಿದೆ. ಕೆಲವೊಮ್ಮೆ ತಾಂಡವ್ ಪಾತ್ರಕ್ಕೆ ನೋಡುಗರು ಹಿಡಿಶಾಪ ಹಾಕಿದ್ದುಂಟು. ಆದ್ರೆ ನಿಜ ಜೀವನದಲ್ಲಿ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರನ್ನು ಅದೃಷ್ಟವಂತ, 100% ಲಕ್ಕಿ ಗಂಡ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಇನ್ನೆರಡೇಟು…ಭಾಗ್ಯಾ ಕಪಾಳಮೋಕ್ಷಕ್ಕೆ ವೀಕ್ಷಕಕರ ಚಪ್ಪಾಳೆ
ಡಿಸೆಂಬರ್ 7ರಂದು ಸಂಗೀತಾ ಭಟ್ ಇನ್‌ಸ್ಟಾಗ್ರಾಂನಲ್ಲಿ ಹೂಗಳಿರುವ ಚೆಂದದ ಸೀರೆ ಧರಿಸಿ, ಬಾಹೋ ಮೇ ಚಲೇ ಆ ಹಾಡಿಗೆ ರೀಲ್ಸ್ ಮಾಡಿ ಅಪ್ಲೋಡ್ ಮಾಡಿಕೊಂಡಿದ್ದರು. ಈ ರೀಲ್ಸ್‌ಗೆ ಕಮೆಂಟ್ ಮಾಡಿರುವ ಸುದರ್ಶನ್ ರಂಗಪ್ರಸಾದ್, ವಾವ್ ಎಂದು ಕಮೆಂಟ್ ಮಾಡಿದ್ದರು. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ಸಂಗೀತಾ ಭಟ್, ಯಾಕೆ ನೀವು ಅದೃಷ್ಟವಂತರಲ್ಲವಾ ಎಂದು ಬರೆದಿದ್ದರು. ಈ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ಸುದರ್ಶನ್ ರಂಗಪ್ರಸಾದ್ ನಿಜವಾಗ್ಲೂ ಅದೃಷ್ಟವಂತ. 100% ಲಕ್ಕಿ ಗಂಡ ಎಂದು ಗುಣಗಾನ ಮಾಡಿದ್ದಾರೆ. ಸದ್ಯ ಸಂಗೀತಾ ಭಟ್ ಈ ರೀಲ್ಸ್ ವೈರಲ್ ಆಗ್ತಿದೆ.
ಇದನ್ನೂ ಓದಿ: ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್ ಉತ್ತರ ಕೇಳಿ...