* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ* ನೀರಜ್‌ ಚೋಪ್ರಾ ಹೆಸರಿನಲ್ಲಿ ಈಗ ಉಡುಪುಗಳು ಮಾರುಕಟ್ಟೆಗೆ* ನೀರಜ್‌ ಫೋಟೋ ಜೊತೆ ‘ಗೋಲ್ಡನ್‌ ಬಾಯ್‌’ ಎಂದು ಬರೆದಿರುವ ಟೀ ಶರ್ಟ್‌ಗಳು ಲಭ್ಯ

ನವದೆಹಲಿ(ಸೆ.22): ಟೋಕಿಯೋ ಒಲಿಂಪಿಕ್ಸ್‌(Tokyo Olympics)ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ(Neeraj Chopra) ಹೆಸರಿನಲ್ಲಿ ಈಗ ಉಡುಪುಗಳು ಮಾರುಕಟ್ಟೆಗೆ ಬಂದಿವೆ. 

ಭಾರತದ ಒಲಿಂಪಿಕ್ಸ್‌ ತಂಡಗಳ ಅಧಿಕೃತ ಉಡುಪು ತಯಾರಕ ಕಂಪೆನಿಯು ಭಾರತದ ಅಥ್ಲೆಟಿಕ್ಸ್‌ ಫೆಡರೇಶನ್‌ ಸಹಯೋಗದೊಂದಿಗೆ ಚೋಪ್ರಾ ಹೆಸರಿನಲ್ಲಿ ಈ ಸರಕುಗಳನ್ನು ತಯಾರಿಸಿವೆ. ನೀರಜ್‌ ಫೋಟೋ ಜೊತೆ ‘ಗೋಲ್ಡನ್‌ ಬಾಯ್‌’ ಎಂದು ಬರೆದಿರುವ ಟೀ ಶರ್ಟ್‌ಗಳು ಹಾಗೂ ನೀರಿನ ಬಾಟಲಿಗಳನ್ನು ತಯಾರಿಸಲಾಗಿದ್ದು, ಗ್ರಾಹಕರಿಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ನೀರಜ್‌ ಭಾರತೀಯರ ಮನೆಮಾತಾಗಿದ್ದು, ಬ್ರ್ಯಾಂಡ್‌ ಮೌಲ್ಯವೂ ಹೆಚ್ಚಾಗುವುದರ ಜೊತೆಗೆ ಅವರ ಹೆಸರಲ್ಲಿ ಉಡುಪುಗಳು ತಯಾರಾಗಿದ್ದು ಚೋಪ್ರಾರ ಜನಪ್ರಿಯತೆಗೆ ಸಾಕ್ಷಿ. ಕೆಲ ದಿನಗಳ ಹಿಂದಷ್ಟೇ ನೀರಜ್‌ ಚೋಪ್ರಾ ಕ್ರೆಡ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.

Scroll to load tweet…

ಚಿನ್ನದ ಹುಡುಗ ನೀರಜ್‌ ಚೋಪ್ರಾ ಹೊಸ ಜಾಹೀರಾತು: ವೈರಲ್‌!

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಬರೋಬ್ಬರಿ 87.58 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ ವಿಭಾಗದಿಂದ ಭಾರತಕ್ಕೆ ಪದಕ ಗೆದ್ದ ಮೊದಲ ಅಥ್ಲೀಟ್‌ ಎನ್ನುವ ಗೌರವಕ್ಕೆ ನೀರಜ್‌ ಚೋಪ್ರಾ ಯಶಸ್ವಿಯಾಗಿದ್ದರು.