Asianet Suvarna News Asianet Suvarna News

ಇಬ್ಬರು ಚಿನ್ನದ ಹುಡುಗರು... ಚೋಪ್ರಾಗೆ ಅಭಿನವ್ ವಿಶೇಷ ಗಿಫ್ಟ್!

* ಇಬ್ಬರು ಚಿನ್ನದ ಹುಡುಗರ ಭೇಟಿ
* ನೀರಜ್ ಚೋಪ್ರಾ ಮತ್ತು ಅಭಿನವ್ ಬಿಂದ್ರಾ ಭೇಟಿ
* ನೀರಜ್ ಚೋಪ್ರಾಗೆ ವಿಶೇಷ ಕಾಣಿಕೆ ನೀಡಿದ ಅಭಿನವ್

Abhinav Bindra Meets Indias Golden Man Neeraj Chopra Presents Special Gift mah
Author
Bengaluru, First Published Sep 22, 2021, 7:42 PM IST
  • Facebook
  • Twitter
  • Whatsapp

ನವದೆಹಲಿ(ಸೆ. 22)  ಇಬ್ಬರು ಚಿನ್ನದ ಹುಡುಗರು ಪರಸ್ಪರ ಭೇಟಿಯಾಗಿದ್ದಾರೆ. ಶೂಟರ್ ಅಭಿನವ್  ಬಿಂದ್ರಾ ಮತ್ತು ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ ಭೇಟಿಯಾಗಿದ್ದಾರೆ.

ಭೇಟಿಯ ಸಂದರ್ಭದಲ್ಲಿ ಅಭಿನವ್ ಬಿಂದ್ರಾ ವಿಶೇಷ ಗಿಫ್ಟ್ ನೀಡಿದ್ದಾರೆ. Golden Retriever ಶ್ವಾನವನ್ನು ಕಾಣಿಕೆಯಾಗಿ ನೀಡಿದ್ದಾರೆ. ಶ್ವಾನ ಕಾಣಿಕೆಯಾಗಿ ನೀಡಿ ಮುಂದಿನ ಪ್ಯಾರೀಸ್ದ ಒಲಿಂಪಿಕ್ಸ್ ಗೆ ಗುಡ್ ಲಕ್ ಹೇಳಿದ್ದಾರೆ.  ಟೋಕಿಯೋದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಯುವಕ ಭೇಟಿಯಾಗಿದ್ದು ಖುಷಿ ತಂದಿದೆ ಎಂದು ಬಿಂದ್ರಾ ತಿಳಿಸಿದ್ದಾರೆ.

ಚೋಪ್ರಾ ಕಾಣಿಸಿಕೊಂಡ ಜಾಹೀರಾತು ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಬಿಂದ್ರಾ ಪೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಕೊಂಡಾಡಿದ್ದಾರೆ.  ಒಬ್ಬರು ಶ್ರೀಮಂತ ಕುಟುಂಬದಿಂದ ಬಂದವರು.. ಒಬ್ಬರು ಹೃದಯ ಶ್ರೀಮಂತಿಕೆ ಕುಟುಂಬದಿಂದ ಬಂದವರು.. ಒಬ್ಬರು ಯಾವಾಗಲೂ ಇಂಗ್ಲಿಷ್ ಮಾತನಾಡುತ್ತಾರೆ.. ಇನ್ನೊಬ್ಬರು ಹಿಂದಿ ಮಾತನಾಡುತ್ತಾರೆ.. ಆದರೆ ಚಿನ್ನ ಇಬ್ಬರನ್ನು ಒಂದು ಮಾಡಿದೆ ಎಂದು ನೆಟ್ಟಿಗರೊಬ್ಬರು ಕೊಂಡಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋದಲ್ಲಿ ನೀರಜ್ ಚಿನ್ನದ ಪದಕ ಸಾಧನೆ ಮಾಡಿದ್ದರು. ಶೂಟಿಂಗ್ ನಲ್ಲಿ ಚಿನ್ನ ಗೆದ್ದಿದ್ದ ಅಭಿನವ್ ಬಿಂದ್ರಾ ಹಿಂದೆ ಇತಿಹಾಸ ಸೃಷ್ಟಿಸಿದ್ದರು.  

 

 

 

Follow Us:
Download App:
  • android
  • ios