ದಾಂಪತ್ಯಕ್ಕೆ ಕಾಲಿಟ್ಟ 'ನನ್ನರಸಿ ರಾಧೆ' ಖ್ಯಾತಿಯ ನಟಿ ಸಹನಾ ಶೆಟ್ಟಿ

ದಾಂಪತ್ಯಕ್ಕೆ ಕಾಲಿಟ್ಟ 'ನನ್ನರಸಿ ರಾಧೆ' ಖ್ಯಾತಿಯ ನಟಿ ಸಹನಾ ಶೆಟ್ಟಿ. ಮದುವೆ ಫೋಟೋಗಳು ವೈರಲ್ ಆಗಿವೆ. 

Nannarasi radhe face Actress Sahana Shetty tie the knot with her  crush Prathap shetty sgk

ನನ್ನರಸಿ ರಾಧೆ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನೆಮಾತಾಗಿದ್ದ ನಟಿ ಸಹನಾ ಶೆಟ್ಟಿ ದಾಂಪತ್ಯಕ್ಕೆ ಕಾಲಿಟ್ಟರು. ಊರ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಸಹನಾ ಶೆಟ್ಟಿ ತನ್ನ ಕ್ರಶ್ ಪ್ರತಾಪ್ ಶೆಟ್ಟಿ ಜೊತೆ ಹಸೆಮಣೆ ಏರಿದರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಹನಾ ಮತ್ತು ಪ್ರತಾಪ್ ಪತಿ-ಪತ್ನಿಯರಾದರು. ಸಹನಾ ಮತ್ತು ಪ್ರತಾಪ್ ಮದುವೆಗೆ ಕಿರುತೆರೆಯ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದಾರೆ. ‘ಗೀತಾ’ ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ- ಧನುಷ್ ಗೌಡ, ನಟಿ ಅಮೂಲ್ಯ, ಬಿಗ್ ಬಾಸ್ ಜಯಶ್ರೀ ಆರಾಧ್ಯ ಸೇರಿದಂತೆ ಹಲವರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದಾರೆ.

ನನ್ನರಸಿ ರಾಧೆ ಧಾರಾವಾಹಿ ಮೂಲಕ ನಟಿ ಸಹನಾ ಶೆಟ್ಟಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಧಾರಾವಾಹಿಯ ನಾಯಕನ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಗಸ್ತ್ಯನ ತಂಗಿ ಊರ್ವಿಯಾಗಿ ಸಹನಾ ಮಿಂಚಿದ್ದರು. ಮೊದಲ ಧಾರಾವಾಹಿಯಲ್ಲೇ  ಭರವಸೆ ಮೂಡಿಸಿದ್ದರು. ಹಾಗಾಗಿಯೇ ಅವರಿಗೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಸಹೋದರಿ ಅವಾರ್ಡ್ ಕೂಡ ಬಂದಿತ್ತು. 

ಕ್ರಶ್ ಆದ ಹುಡುಗನ ಜೊತೆನೇ ಹಸೆಮಣೆ ಏರಲು ರೆಡಿಯಾದ ಸಹನಾ ಶೆಟ್ಟಿ

ನನ್ನರಸಿ ರಾಧೆ ಧಾರಾವಾಹಿ ಬಳಿಕ ನಟಿ ಸಹನಾ ಮತ್ತೆ ಧಾರಾವಾಹಿಯಲ್ಲಿ ಮಿಂಚಿಲ್ಲ. ಧಾರಾವಾಗಿ ನಿಂತು ವರ್ಷವಾದರೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಳ್ಳುವ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಫೋಟೋಗಳನ್ನು ಶೇರ್ ಮಾಡುವ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸಿದ್ದರು. ಸಹನಾ ಶೆಟ್ಟಿಯವರ ಎಂಗೇಜ್ ಮೆಂಟ್ ಈ ವರ್ಷ ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ ದಿನವೇ ನಡೆದಿತ್ತು. ಆ ದಿನ ಅವರು ತಮ್ಮ ಎಂಗೇಜ್ ಮೆಂಟ್ ಸಂಭ್ರಮದ ವಿಡೀಯೋವನ್ನು ಸಹ ಹಂಚಿಕೊಂಡಿದ್ದರು. ಬಳಿಕ ಮತ್ತಷ್ಟು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದರು.

ಎಂಗೇಜ್ ಮೆಂಟ್ ವಿಡೀಯೋ ಶೇರ್ ಮಾಡಿ, ಸಣ್ಣ ಕ್ರಶ್‌ನಿಂದ ಆರಂಭವಾಗಿ, ಇದೀಗ ನನ್ನ ಬೆರಳಲ್ಲಿ ಅವನು ತೊಡಿಸಿದ ಉಂಗುರದವರೆಗೂ ಎಲ್ಲವೂ ಆಯಿತು ಎಂದು ಸಂಭ್ರಮ ಹಂಚಿಕೊಂಡಿದ್ದರು. ಹಾಗಾಗಿ ಇದನ್ನು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಸಹನಾ ಇಂದು ದಾಂಪತ್ಯಕ್ಕೆ ಕಾಲಿಟ್ಟರು. ಸಹನಾ ಮದುವೆಯಲ್ಲಿ ಭಾಗಿಯಾಗಿದ್ದ ಅನೇಕ ಕಿರುತೆರೆ ಗಣ್ಯರು ಮದುವೆ ಫೋಟೋಗಳನ್ನು ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ್

Latest Videos
Follow Us:
Download App:
  • android
  • ios