ಬಿಗ್‌ಬಾಸ್‌ ವಿನ್ನರ್ ಕಾರ್ತಿಕ್ ಜೊತೆಗೆ ಯಾವಾಗ ಡೇಟ್ ಹೋಗ್ತೀರಾ? ನಮ್ರತಾಗೌಡಗೆ ಫ್ಯಾನ್ಸ್ ಪ್ರಶ್ನೆ!

ಬಿಗ್‌ಬಾಸ್‌ ಸೀಸನ್-10ರ ವಿನ್ನರ್ ಕಾರ್ತಿಕ್ ಅವರೊಂದಿಗೆ ಡೇಟ್ ಮಾಡುವುದಾಗಿ ಹೇಳಿದ್ದ ನಮ್ರತಾಗೌಡ ಅವರೇ ಯಾವಾಗ ಡೇಟಿಂಗ್ ಹೋಗ್ತೀರಾ ಎಂದು ಅಭಿಮಾನಿಗಳು ಕೇಳಿದ್ದಾರೆ.

Namratha Gowda when you will going to date with Bigg Boss winner Karthik Mahesh ask fans sat

ಬೆಂಗಳೂರು (ಜ.29): ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದ ಹಾಗೂ ಹೆಚ್ಚಿನ ಟಿಆರ್‌ಪಿಯನ್ನು ಪಡೆದ ಬಿಗ್‌ಬಾಸ್‌ ಸೀಸನ್-10ರ ವಿಜೇತ ಕಾರ್ತಿಕ್ ಮಹೇಶ್‌ ಅವರೊಂದಿಗೆ ನಮ್ರತಾಗೌಡ ಅವರೇ ಯವಾಗ ಡೇಟಿಂಗ್ ಹೋಗ್ತೀರಾ ಎಂದು ಅಭಿಮಾನಿಗಳು ಕೇಳಿದ್ದಾರೆ. 

ಬಿಗ್‌ಬಾಸ್‌ ಕನ್ನಡ ಸೀಸನ್-10 ಸ್ಪರ್ಧೆಯ ವೇಳೆ ಆರಂಭದಲ್ಲಿ ಸಂಗೀತಾಳೊಂದಿಗೆ ಅತ್ಯಂತ ಆಪ್ತವಾಗಿದ್ದ ಕಾರ್ತಿಕ್ ಮಹೇಶ್‌ ಇವರಿಬ್ಬರೂ ಲವ್ ಮಾಡುತ್ತಿದ್ದಾರೆ, ಮದುವೆಯೂ ಆಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದ್ದಕ್ಕಿದ್ದಂತೆ ಇಬ್ಬರ ಸ್ನೇಹದಲ್ಲಿ ಬಿರುಕು ಬಂದು ಬದ್ಧ ವೈರಿಗಳಾದರು. ಈ ವೇಳೆ ಕಾರ್ತಿಕ್ ಎಂದಿನಂತೆ ತನಿಷಾಳ ಸ್ನೇಹವನ್ನು ಮುಂದುವರೆಸಿದ್ದನು. ಆದರೆ, ಸ್ನೇಹವನ್ನು ಮರೆತು ತನಿಷಾಳನ್ನು ಎಲಿಮಿನೇಟ್ ಮಾಡಿದ್ದಕ್ಕೆ ಬೇಸತ್ತು, ಆಕೆಯೂ ಕಾರ್ತಿಕ್‌ನ ಸ್ನೇಹವನ್ನು ವಿರೋಧಿಸಿ ಕೋಪಗೊಂಡಿದ್ದಳು.

ಈ ವೇಳೆ ವಿನಯ್‌ ತಂಡದಲ್ಲಿ ಗುರುತಿಸಿಕೊಂಡಿದ್ದ ನಮ್ರತಾಗೌಡ ಅವರೊಂದಿಗೆ ಕಾರ್ತಿಕ್ ಸಲುಗೆಯನ್ನು ಬೆಳೆಸಿಕೊಳ್ಳುತ್ತಾನೆ. 6 ಕೋಟಿ ಜನರು ತಮ್ಮನ್ನು ನೋಡುತ್ತಾರೆಂಬುದು ತಿಳಿದಿದ್ದರೂ, ನಮ್ರತಾಗೌಡ ಹಾಗೂ ಕಾರ್ತಿಕ್ ಬಿಗ್‌ಬಾಸ್‌ ಮನೆಯಲ್ಲಿ ಕೈ-ಕೈ ಹಿಡಿದುಕೊಂಡು ಕೂರುತ್ತಾರೆ. ಇಬ್ಬರೂ ಬಿಗ್‌ಬಾಸ್‌ ಗ್‌ಬಾಸ್‌ ಮನೆಯ ಕಿಚನ್‌ನಲ್ಲಿ ಎಲ್ಲರೂ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರೆ, ಬಾಲ್ಕನಿಯಲ್ಲಿ ಕುಳಿತಿದ್ದ ಕಾರ್ತಿಕ್, ನಮ್ರತಾ ಜೊತೆಗೆ ಫ್ಲರ್ಟ್‌ ಮಾಡಿದ್ದಾರೆ. ತಮಾಷೆ ತಮಾಷೆಯಾಗಿಯೇ ಶುರುವಾದ ಮಾತು, ನಮ್ರತಾ ಜೊತೆಗೆ ಡೇಟ್ ಮಾಡುವ ಮಟ್ಟಿಗೆ ಹೋಗಿದೆ.

ಕಲರ್ಸ್ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್‌ 10ರ 'ವಿನ್ನರ್ ಪಟ್ಟ' ಗಿಟ್ಟಿಸಿಕೊಂಡ ಕಾರ್ತಿಕ್ ಮಹೇಶ್

ಡೇಟ್‌ ಹೋಗುವ ಮಾತುಕತೆ ಇಲ್ಲಿದೆ ನೋಡಿ..
ಕಾರ್ತಿಕ್: 'ನಾವಿಬ್ಬರೂ ಡೇಟ್ ಮಾಡೋಣ್ವಾ.. ನಿಂಗೆ ಏನ್ ಮಾಡ್ಕೊಡ್ಬೇಕು ಹೇಳು... ನಾನು ಮಾಡ್ಕೊಡ್ತೀನಿ’..
ನಮ್ರತಾ: ನಗುತ್ತಲೇ ಸ್ಟೈಲಿಶ್ ಆಗಿ, ‘ಟೂ ಡಿಶ್‌ ಲಂಚ್ ಮಾಡೋಣ. ಒನ್ ಇಟಾಲಿಯನ್ ಆಮ್ಲೆಟ್ ಬೇಕು. ಐಸ್‌ಕ್ರೀಮ್ ಕೂಡ ಬೇಕು. ಜೊತೆಗೆ ಒಂದು ಡ್ರಿಂಕ್’ ಇರಬೇಕು.
ಕಾರ್ತಿಕ್: ಓ ಐಸ್‌ ಕ್ರೀಮ್! ಆರಾಮಾಗಿ ಮಾಡ್ಬೋದು. ನಾನು ಇಲ್ಲೇ ಮಾಡ್ಕೊಡ್ತೀನಿ…
ತನಿಷಾ : ಇಬ್ಬರ ಮಾತುಗಳ ಮದ್ಯ ಪ್ರವೇಶ ಮಾಡಿದ ತನಿಷಾ 'ಸಂಗೀತಾ ಸ್ನಾನಕ್ಕೆ ಹೋಗಿದಾರೆ ಅಂತ ಒಬ್ಬರ ಉತ್ಸಾಹ ಜಾಸ್ತಿ ಆಗ್ತಿದೆ' ಎಂದಿದ್ದಾರೆ.
ಕಾರ್ತಿಕ್ : ನಾನು  ನಮ್ರತಾ ಜೊತೆಗೆ ಡೇಟ್‌ ಮಾಡೋದಷ್ಟೇ ಅಲ್ಲ, ಜೊತೆಗೆ ವೇಟರ್ ಆಗಿ ಸಂಗೀತಾ ಅವರನ್ನು ಇರಬೇಕು ಎಂದು ಹೇಳಿದ್ದಾರೆ.
ವಿನಯ್: ಎಲ್ಲಾನೂ ಬರೆದಿಟ್ಕೋತೀನಿ. ಸಂಗೀತಾ ಬಂದ್ಮೇಲೆ ಹೇಳ್ತೀನಿ' ಎಂದು ಬರೆದಿಟ್ಟುಕೊಳ್ಳಲು ಶುರುಮಾಡಿದರು.
ಕಾರ್ತಿಕ್: 'ಲೈಫಲ್ಲಿ ಮಜಾ ಇರ್ಬೇಕಂದ್ರೆ ಹಿಂಗೆಲ್ಲ ಮಾಡ್ತಿರ್ಬೇಕು' ಎಂದು ತೇಲಿಸಿಬಿಟ್ಟಿದ್ದಾರೆ. 
ನಮ್ರತಾ: 'ನಾನು ಇದೇ ಫಸ್ಟ್ ಟೈಮ್ ಯಾರ ಜೊತೆಗೋ ಡೇಟ್ ಮಾಡ್ತಿರೋದು. ನಾನು ಹೇಗೆ ಡ್ರೆಸ್ ಮಾಡ್ಕೊಂಡು ಬರ್ಬೇಕು? ಟ್ರೆಡಿಷನಲ್ ಆಗಿ ಸೀರೆ ಉಟ್ಕೊಂಡು ಬರ್ಲಾ ಅಥವಾ ಮಾಡ್ ಆಗಿ ಡ್ರೆಸ್ ಮಾಡ್ಕೋಬೇಕಾ?' ಎಂದೆಲ್ಲ ಕೇಳಿದ್ದಾರೆ.

ಬಿಗ್ ಬಾಸ್ ನಮ್ರತಾ- ಕಾರ್ತಿಕ್‌ ಗುಸುಗುಸು; ಕೈ ಕೊಟ್ಟಳು ಎಂದವರಿಗೆ ಬಿಸಿ ಮುಟ್ಟಿಸಿದ ಸ್ನೇಹಿತ್!

ಡೇಟಿಂಗ್ ಡೇಟ್ ಫಿಕ್ಸ್ ಮಾಡಿದ್ರಾ? ಕಾರ್ತಿಕ್ ಮತ್ತು ನಮ್ರತಾಗೌಡ ಅವರ ಡೇಟಿಂಗ್ ಪ್ರಹಸನವು ಬಿಗ್‌ಬಾಸ್‌ ಎಪಿಸೋಡ್‌ನಲ್ಲಿ ಪ್ರಸಾರವಾಗಿಲ್ಲ. ಆದರೆ, ಜಿಯೋ ಸಿನಿಮಾದ ಲೈವ್‌ನಲ್ಲಿ ನಡೆದಿದೆ. ಇನ್ನು ಕಳೆದೊಂದು ದಿನದ ಹಿಂದೆ ಕಾರ್ತಿಕ್ ಮಹೇಶ್ ಅವರು ಬಿಗ್‌ಬಾಸ್‌ ಸೀಸನ್-10ರ ಟ್ರೋಫಿ ಗೆಲ್ಲುವ ಜೊತೆಗೆ 50 ಲಕ್ಷ ರೂ. ನಗದು, ಒಂದು ಕಾರನ್ನು ಕೂಡ ಬಹುಮಾನವಾಗಿ ಪಡೆದಿದ್ದಾರೆ. ಆದ್ದರಿಂದ ಈಗ ಅಭಿಮಾನಿಗಳು ನಮ್ರತಾಗೌಡ ಮತ್ತು ಕಾರ್ತಕ್ ಅವರ ನಡುವೆ ಒಪ್ಪಂದವಾಗಿದ್ದನ್ನು ಪುನಃ ಕೆದಕಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಮಾಡಿಕೊಂಡ ಒಪ್ಪಂದದಂತೆ ಯಾವಾಗ ಡೇಟ್ ಹೋಗ್ತೀರಾ? ನೀವು ಡೇಟ್ ಫಿಕ್ಸ್‌ ಮಾಡಿದ್ರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಲು ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios