Asianet Suvarna News Asianet Suvarna News

ಕಲರ್ಸ್ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್‌ 10ರ 'ವಿನ್ನರ್ ಪಟ್ಟ' ಗಿಟ್ಟಿಸಿಕೊಂಡ ಕಾರ್ತಿಕ್ ಮಹೇಶ್

ಬಿಗ್ ಬಾಸ್ ಕನ್ನಡ 10ರ ಗ್ರಾಂಡ್ ಫಿನಾಲೆ ಅಖಾಡ ವರ್ಣರಂಜಿತ ವೇದಿಕೆಯ ಮೂಲಕ ಭಾರೀ ಮನಮೋಹಕವಾಗಿ ಕಂಗೊಳಿಸುತ್ತಿತ್ತು. ದೊಡ್ಡ ಆಲದಮರದ ಬಳಿಯ ಹೊಸ ಅರಮನೆಯಂಥ ಬಿಗ್ ಬಾಸ್ ಮನೆ ಆವರಣದಲ್ಲಿ ಈ ಈವೆಂಟ್ ನಡೆದಿದೆ. 

Karthik Mahesh  is winner of colors kannada Bigg Boss kannada season 10 reality show srb
Author
First Published Jan 29, 2024, 12:03 AM IST

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಮನೆಯೊಳಗೆ ಹೋಗಿದ್ದ ಘಟಾನುಘಟಿ 19 ಮಂದಿ ಸ್ಪರ್ಧಿಯಲ್ಲಿ ಗ್ರಾಂಡ್ ಫಿನಾಲೆ ತಲುಪಿದ್ದು ಆರು ಮಂದಿ. ಅವರಲ್ಲಿ ಕಾರ್ತಿಕ್ ಮಹೇಶ್ ಅವರು ಇದೀಗ ಕಲರ್ಸ್ ಕನ್ನಡದ ಬಿಗ್ ಬಾಸ್ ಸೀಸನ್ 10ರ ಗ್ರಾಂಡ್ ಫಿನಾಲೆ ಕಪ್ ಗೆದ್ದುಕೊಂಡಿದ್ದಾರೆ. ಜತೆಗೆ ಬಹುಮಾನದ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಕಾರ್ತಿಕ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 10ನ ವಿನ್ನರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. 

ನಿನ್ನೆ ತುಕಾಲಿ ಸಂತೋಷ್, ಇಂದು ವರ್ತೂರು ಸಂತೋಷ್ ಗ್ರಾಂಡ್ ಫಿನಾಲೆಯಂದ ಔಟ್ ಆಗುತ್ತಿದ್ದಂತೆ, ಸಹಜವಾಗಿಯೇ ಎಲ್ಲರಲ್ಲೂ ವಿನ್ನರ್ ಮತ್ತು ರನ್ನರ್ ಅಪ್ ಯಾರಾಗಬಹುದೆಂಬ ಭಾರೀ ಕುತೂಹಲ ಮನೆಮಾಡಿತ್ತು. ವಿನ್ನರ್ ಯಾರು ಎಂಬುದಷ್ಟೇ ಅಲ್ಲ, ಬಿಗ್ ಬಾಸ್‌ನಲ್ಲಿ ಗೆದ್ದವರಿಗೆ ಭಾರೀ ಭಾರೀ ಬಹುಮಾನಗಳು ಸಿಗುತ್ತವೆಯಲ್ಲ ಆ ಬಗ್ಗೆ ಇಡೀ ಕರ್ನಾಟಕಕ್ಕೆ ಕುತೂಹಲವಿತ್ತು. ಅದಕ್ಕೆಲ್ಲ ಈಗ ತೆರೆ ಬಿದ್ದಿದ್ದು, ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದಾರೆ. 

ಬಿಗ್ ಬಾಸ್ ಕನ್ನಡ 10ರ ಗ್ರಾಂಡ್ ಫಿನಾಲೆ ಅಖಾಡ ವರ್ಣರಂಜಿತ ವೇದಿಕೆಯ ಮೂಲಕ ಭಾರೀ ಮನಮೋಹಕವಾಗಿ ಕಂಗೊಳಿಸುತ್ತಿತ್ತು. ದೊಡ್ಡ ಆಲದಮರದ ಬಳಿಯ ಹೊಸ ಅರಮನೆಯಂಥ ಬಿಗ್ ಬಾಸ್ ಮನೆ ಆವರಣದಲ್ಲಿಈ ಈವೆಂಟ್ ನಡೆದಿದೆ. ಅಲ್ಲಿ ಪುರಾಣ ಪ್ರಸಿದ್ಧ ಕತೆಗಳ ಇಂದ್ರನ ದರ್ಭಾರಿಗೆ ಪರ್ಯಾಯ ಎಂಬಂತೆ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ವಿನ್ನರ್‌ ಕಾರ್ತಿಕ್ ಮಹೇಶ್‌ಗೆ ಟ್ರೋಫಿ ಮತ್ತು ಬಹುಮಾನದ ಮೊತ್ತದ ಚೆಕ್ ಹಸ್ತಾಂತರಿಸಿದರು. 

ಮತ್ತೊಂದು ಮದುವೆಗೆ ರೆಡಿಯಾದ್ರಾ ವರ್ತೂರು ಸಂತೋಷ್; ತನಿಷಾ ಅಲ್ವಂತೆ, ಮತ್ಯಾರು ಸಂತು ಸಂಗಾತಿ...!?

ಬಿಗ್ ಬಾಸ್ ಸೀಸನ್‌ನಲ್ಲಿ ಕೊನೆಯ ಹಂತದಲ್ಲಿ ಭಾರೀ ಸ್ಪರ್ಧೆ ಎರ್ಪಟ್ಟಿತ್ತು. ತನಿಷಾ ಗ್ರಾಂಡ್ ಫಿನಾಲೆಗಿಂತ ಮೊದಲೇ ಔಟ್ ಆಗುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ನಮ್ರತಾ, ತುಕಾಲಿ ಸಂತು ಮತ್ತು ವರ್ತೂರು ಸಂತೋಷ್‌ ಅವರಿಗಿಂತ ಮೊದಲೇ ತನಿಷಾ ಕುಪ್ಪಂಡ ಮನೆಯಿಂದ ಹೊರಹೋಗಿದ್ದು ಹಲವರಿಗೆ ಶಾಕ್ ನೀಡಿತ್ತು. ಜತೆಗೆ, ಈ ಬಾರಿಯ ಬಿಗ್ ಬಾಸ್ ಫಲಿತಾಂಶ ಊಹೆ ಮಾಡುವಷ್ಟು ಈಸಿಯಾಗಿಲ್ಲ, ಸಖತ್ ಕಾಂಪಿಟೇಟಿವ್ ಆಗಿದೆ ಎಂಬ ಸಂದೇಶವನ್ನೂ ನೀಡಿತ್ತು. 

ಬಿಗ್‌ಬಾಸ್‌ ಸೀಸನ್‌ 10 ಎರಡನೇ ರನ್ನರ್ ಅಪ್‌ ಸಂಗೀತಾ ಶೃಂಗೇರಿ: ಹಲವು ಸ್ವರಗಳ ಏರಿಳಿತ ಸೇರಿ ಆದ ಬ್ಯಾಂಗಲ್‌ ಕ್ವೀನ್!

ಇದೀಗ ಬಿಗ್ ಬಾಸ್ ಕನ್ನಡ 10ರ ಸೀಸನ್ ಗ್ರಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಅವರು ಕಪ್ ಗೆಲ್ಲುವ ಮೂಲಕ ಬಿಗ್ ಬಾಸ್ ಈ ಸೀಸನ್‌ಗೆ ಇತಿಶ್ರೀ ಹಾಡಲಾಯಿತು. ಈ ಬಾರಿಯ ಬಿಗ್ ಬಾಸ್ ಶೋವನ್ನು ಹಿಂದೆಂದಿಗಿಂತಲೂ ಹೆಚ್ಚು ಜನರು ವೀಕ್ಷಿಸುವ ಮೂಲಕ ಭಾರೀ ಟಿಆರ್‌ಪಿ (TRP) ಗಳಿಸಿತ್ತು ಎನ್ನಲಾಗಿದೆ. ಕಲರ್ಸ್ ಕನ್ನಡ ಹಾಗು ಜಿಯೋ ಸಿನಿಮಾಸ್ ಈ ಬಿಗ್ ಬಾಸ್ ಸೀಸನ್ 10ನ್ನು ಆಯೋಜಿಸಿತ್ತು. ಇನ್ನು ಮುಂದಿನ ಸೀಸನ್ (11th Season)ಬರುವವರೆಗೆ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಪ್ರಿಯರು ಕಾಯಲೇಬೇಕು. 

Follow Us:
Download App:
  • android
  • ios