Asianet Suvarna News Asianet Suvarna News

ಕಾರ್ತಿಕ್​ನ ತಬ್ಬಿಕೊಂಡು ಕಿಸ್​ ಕೊಟ್ಟ ಸಂತೋಷ್​! ಹೆಣ್ಣುಮಕ್ಕಳು ಕೊಟ್ಟ ವ್ಯಾಕ್ಸಿನ್​ ಶಿಕ್ಷೆಗೆ ಕಿರುಚಾಡಿದ ತುಕಾಲಿ!

ಬಿಗ್​ಬಾಸ್​ ಮನೆಯಲ್ಲಿ ನಮ್ರತಾ-ಸಿರಿ ಸೇರಿ ತುಕಾಲಿ ಸಂತೋಷ್​ ಕಾಲಿಗೆ ವ್ಯಾಕ್ಸಿಂಗ್​ ಮಾಡುವ ಶಿಕ್ಷೆ ನೀಡಿದ್ದಾರೆ. ಮುಂದೇನಾಯ್ತು?
 

Namrata Siri punished Tukali Santhosh by waxing his legs in Bigg Boss suc
Author
First Published Dec 31, 2023, 12:09 PM IST

ಸದಾ ಗಲಾಟೆ, ಗದ್ದಲ, ಕಚ್ಚಾಟ, ಕಿರುಚಾಟದಿಂದ ಕೂಡಿರುತ್ತಿದ್ದ ಬಿಗ್​ಬಾಸ್​ ಮನೆಯಲ್ಲಿ ಈ ವಾರ ಸ್ವಲ್ಪ ಮಟ್ಟಿನ ಎಂಜಾಯ್​ಮೆಂಟ್​ ನಡೆದಿದೆ. ಅಪ್ಪ-ಅಮ್ಮ, ಪತ್ನಿ ಸೇರಿದಂತೆ  ಮನೆಯವರೆಲ್ಲಾ ಬಿಗ್​ಬಾಸ್​ಗೆ ಭೇಟಿ ಕೊಟ್ಟಿದ್ದರಿಂದ ಸ್ಪರ್ಧಿಗಳು ಸ್ವಲ್ಪ ಖುಷಿಯಾಗಿದ್ದಾರೆ. ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಇನ್ನೊಂದೆಡೆ ಸ್ಪರ್ಧಿಗಳ ನಡುವೆ ಟಾಸ್ಕ್​ ಭರಾಟೆಯೂ ಜೋರಾಗಿ ನಡೆಯುತ್ತಿದೆ, ಜೊತೆಗೆ ತಾವೇ ಗೆಲ್ಲಬೇಕು ಎಂಬ ಛಲವೂ ಕಾಣುತ್ತಿದೆ. ಏನೇ ಆದರೂ ಒಂದಿಷ್ಟು ಹಾಸ್ಯ ಮಾಡುತ್ತಾ, ಜನರನ್ನು ನಕ್ಕು ನಗಿಸುತ್ತಿದ್ದವರಲ್ಲಿ ತುಕಾಲಿ ಸಂತೋಷ್​ ಮೊದಲಿಗರು. ಅವರು  ಬಿಗ್​ಬಾಸ್​ ಮನೆಯಲ್ಲಿ ಮನರಂಜನೆ ನೀಡುತ್ತಲೇ ಬಂದಿದ್ದಾರೆ.  ​

ಇದೀಗ ಇಯರ್​ ಎಂಡ್​ನಲ್ಲಿ ಮೋಜು ಮಸ್ತಿಗೆ ಬಿಗ್​ಬಾಸ್​ ಸಾಕ್ಷಿಯಾಯಿತು. ಪೌಸ್ ಕೊಟ್ಟು ಆಡವಾಡ್ತಿದ್ದ ವೇಳೆ ತುಕಾಲಿ ಸಂತು ನಮ್ರತಾ ಗೌಡ, ಮೈಕಲ್, ಕಾರ್ತಿಕ್ ಮಹೇಶ್ಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಕಳೆದ ವಾರ ಮಿಸ್​ ಆಗಿದ್ದ ಕಿಚ್ಚ ಸುದೀಪ್​, ಈ ವಾರಾಂತ್ಯದಲ್ಲಿ ಎಂಟ್ರಿ ಕೊಟ್ಟಿದ್ದು, ಇಷ್ಟೆಲ್ಲಾ ಮಾಡಿದ  ತುಕಾಲಿ ಸಂತೋಷ್​ಗೆ ಶಿಕ್ಷೆ ನೀಡಲೇಬೇಕು ಎಂದಿದ್ದಾರೆ. ಅಷ್ಟು ಆಗುತ್ತಿದ್ದಂತೆಯೇ, ನಮ್ರತಾ ಗೌಡ ಮತ್ತು ಸಿರಿ ಶಿಕ್ಷೆ ಕೊಡಲು ಮುಂದೆ ಬಂದರು. ಮನೆಯಲ್ಲಿ ಇಷ್ಟೆಲ್ಲಾ ತರ್ಲೆ ಮಾಡಿದ ತುಕಾಲಿ ಸಂತೋಷ್ಗೆ ಶಿಕ್ಷೆ ಕೊಡಲೆಬೇಕು ಎಂದು ಸುದೀಪ್, ಹೆಣ್ಣು ಮಕ್ಕಳಿಗೆ ಚಾನ್ಸ್ ಕೊಟ್ಟಿದ್ದರಿಂದ ಇವರಿಬ್ಬರೂ ಮುಂದೆ ಬಂದರು. ತುಕಾಲಿ ಸಂತೋಷ್​ನನ್ನು ಮಲಗಿಸಿ,  ವ್ಯಾಕ್ಸ್ ಸ್ಟ್ರಿಪ್ಸ್​ ಮೂಲಕ ಸಂತೋಷ್​ ಅವರ ಕಾಲಿನ ಕೂದಲನ್ನು ಕಿತ್ತರು!

ಹೊಸವರ್ಷಕ್ಕೆ ಬಾಯ್​ಫ್ರೆಂಡ್​ ಜೊತೆ ಹಾರಿ ಹೋಗೋ ಪ್ಲ್ಯಾನ್​ ಮಾಡಿದ್ದ ಹೃತಿಕ್​ ಮಾಜಿ ಪತ್ನಿಗೆ ಹೀಗಾಗೋದಾ?

ನೋವಿನಿಂದ ತುಕಾಲಿ ಸಂತೋಷ್​  ಕಿರುಚಾಡಿದರು. ಅಯ್ಯಯ್ಯೋ ಹೋಗಿ ಬಂದು ನನ್ನ ಕೂದಲಿಗೆ ಅಟ್ಯಾಕ್​ ಮಾಡ್ತಾರೆ ಎಂದು ಕಿರುಚಾಡಿದರು. ಕಿಚ್ಚ ಸುದೀಪ್​ ಸೇರಿದಂತೆ ಮನೆಯವರೆಲ್ಲಾ ಬಿದ್ದೂ ಬಿದ್ದೂ ನಕ್ಕರು. ಹೀಗೆ ಈ ವಾರದ ಫನ್ನಿ ಟಾಸ್ಕ್​ ನಡೆದಿದೆ. ಅಷ್ಟೇ ಅಲ್ಲದೇ,  ಕಾರ್ತಿಕ್​ರನ್ನು ತಬ್ಬಿಕೊಂಡು ತುಕಾಲಿ ಸಂತೋಷ್​  ಮುತ್ತು ನೀಡಿದ್ದೂ ನಡೆಯಿತು.  ನಮ್ರತಾ ಗೌಡ ಕೂಡ ನಿನಗಿದೆ ಮಾರಿ ಹಬ್ಬ ಎಂದಿದ್ದಾರೆ. ಸಿರಿ ಕೂಡ ಜೋರಾಗಿ ಶಿಕ್ಷೆ ನೀಡಿದ್ರು. ಹೋಗಿ ಬಂದು ನನ್ನ ಕೂದಲಿಗೆ ಅಟ್ಯಾಕ್ ಮಾಡ್ತಾರೆ ಎಂದು ತುಕಾಲಿ ಸಂತು ಕೂಗಾಡಿದ್ರು. ನಮ್ರತಾ ಗೌಡ ಕೂಡ ನಿನಗಿದೆ ಮಾರಿ ಹಬ್ಬ ಎನ್ನುತ್ತಲೇ  ಸಿರಿ ಜೊತೆ ಸೇರಿ ವ್ಯಾಕ್ಸಿಂಗ್​ ಮಾಡಿದ್ರು. ಇನ್ನೊಂದೆಡೆ, ಕಿಚ್ಚ ಸುದೀಪ್​ ಅವರ ಎದುರಲ್ಲೇ ಕಾರ್ತಿಕ್​ ಮಹೇಶ್​ಗೆ  ತುಕಾಲಿ ಸಂತೋಷ್​ ಅವರು ಕಿಸ್​ ಮಾಡಿದರು.  ಒಟ್ಟಿನಲ್ಲಿ ಇಯರ್​ ಎಂಡ್​ ಮೋಜು ಮಸ್ತಿಯಿಂದ ನಡೆದಿದೆ. 

ಇದರ ನಡುವೆಯೇ ಮನೆಯಿಂದ ಎಲಿಮಿನೇಟ್​ ಆಗುವವರು ಯಾರು ಎಂಬ ಬಗ್ಗೆಯೂ ಸಾಕಷ್ಟು ಚರ್ಚೆ ಫ್ಯಾನ್ಸ್​ ನಡುವೆ ಶುರುವಾಗಿದೆ.  ತುಕಾಲಿ ಸಂತೋಷ್​ , ಮೈಕಲ್ ಅಥವಾ ಸಿರಿ ಅವರು ಈ ವಾರ ಮನೆಯಿಂದ ಹೊರ ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಇನ್ನೊಂದೆಡೆ ಕಸರತ್ತು ನಡೆಸುತ್ತಿದ್ದಾರೆ. 

ಬಿಗ್​ಬಾಸ್​ ಮನೆಗೆ ಕಾಂತಾರ ಚೆಲುವೆ ಸಪ್ತಮಿ ಗೌಡ! ಮುಟ್ಟಿನ ಕಪ್​ ಕುರಿತು ಜಾಗೃತಿ ಮೂಡಿಸಿದ ನಟಿ

Follow Us:
Download App:
  • android
  • ios